* ಮಸ್ಕಿ ನ್ಯಾಯಾಲಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ *



ಮಸ್ಕಿ : ರಾಜ್ಯದ ಹಾಗೂ ದೇಶದ ಅಭಿವೃದ್ಧಿಗಾಗಿ ಪ್ರತಿಯೊಬ್ಬ ಮತದಾರನೂ ಮತ ನೀಡಿ(Voter) ತಪ್ಪದೇ ತಮ್ಮ ಹಕ್ಕನ್ನು ಚಲಾಯಿಸಿ, ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು ಎಂದು ಮಸ್ಕಿ ಸಂಚಾರಿನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಆನಂದಪ್ಪ ಎಂ. ರವರು ತಿಳಿಸಿದರು. ‌

ಗುರುವಾರ ಪಟ್ಟಣದ ಜೆ. ಎಂ.ಎಫ್.ಸಿ ಸಂಚಾರಿ ನ್ಯಾಯಾಲಯದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರತಿಜ್ಞಾ ವಿಧಿ ಬೋಧಿಸಿ ನಂತರ ಅವರು ಮಾತನಾಡಿ

ನಾವು ನೀಡುವ ಪ್ರತಿಯೊಂದು ಮತಕ್ಕೂ ಅದರದ್ದೇ ಆದ ಮಹತ್ವವಿದೆ. ಕೆಲವೊಮ್ಮೆ ಅಭ್ಯರ್ಥಿಗಳು ಕೇವಲ ಒಂದು ಮತದ ಅಂತರದಿಂದ ಸೋಲು-ಗೆಲುವನ್ನು ಕಂಡಿರುತ್ತಾರೆ. ಹೀಗಾಗಿ ಪ್ರತಿಯೊಬ್ಬರಿಗೂ ತಮ್ಮ ಮತಕ್ಕಿರುವ ಮೌಲ್ಯವನ್ನು ತಿಳಿಸುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಹೀಗಾಗಿ ಪ್ರತಿ ಬೂತ್‌ ಮಟ್ಟದಲ್ಲಿ ಅಧಿಕಾರಿಗಳು ಮತದಾರರನ್ನು ಹುರಿದುಂಬಿಸಿ, ಚುನಾವಣೆಗಳಲ್ಲಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಬೇಕು. ಮತದಾರರೂ ಸಹ ತಮ್ಮ ಕರ್ತವ್ಯ ನಿರ್ವಹಿಸಿ, ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ದೇಶದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಬೇಕು ಎಂದರು.

ಈ ಸಂದರ್ಭದಲ್ಲಿ, ಈಶಪ್ಪ ದೇಸಾಯಿ ಅಧ್ಯಕ್ಷರು ವಕೀಲರ ಸಂಘ ಮಸ್ಕಿ, ಆನಂದ ರಾಥೋಡ ಕಾರ್ಯದರ್ಶಿ ಗಳು, ಶಿವರಾಜ್ ಮ್ಯಾಗಡೆ ಮನೆ,ನಬಿ ಶ್ಮಡಿ,ಪಂಪನಗೌಡ ಕೊಳಬಾಳ,ರಾಮಣ್ಷ ನಾಯಕ,ಅಮರೇಗೌಡ ತಿಮ್ಮಪುರ,ಮಾರುತಿ ಕೆ.ಸಹಾಯಕ ಅಭಿ ಯೋಜಕರು, ಹಾಗೂ ಮಹಿಳಾ ವಕೀಲರು ಸೇರಿದಂತೆ ಇತರೆ ವಕೀಲರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ