ರಾಷ್ಟ್ರದ ಪ್ರಗತಿಗೆ ,ಏಳಿಗೆಗೆ ಇಂದಿನ ಯುವಕರ ಪಾತ್ರ ಅತ್ಯಮೂಲ್ಯ : ಪ್ರಾಚಾರ್ಯರಾದ ಡಾ. ಎಂ ರವಿಕುಮಾರ್
ಕೊಟ್ಟೂರು: ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಮತದಾನ ದಿನಾಚರಣೆ ಗುರುವಾರ ರಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಂ ರವಿಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪ್ರತಿಜ್ಞಾವಿಧಿಯನ್ನು ಬೋಧಿಸಿ ಮಾತನಾಡಿ ಮತದಾನ ಎಲ್ಲರ ಹಕ್ಕು . ತಮ್ಮ ಮತವನ್ನು ಚಲಾಯಿಸಿ ಉತ್ತಮ ನಾಯಕರನ್ನು ಆರಿಸಬೇಕು. ಹದಿನೆಂಟರ ವಯಸ್ಸಿನ ಎಲ್ಲ ಯುವಕರು ಸಹ ಮತದಾನದ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಂಡು ದೇಶದ ಅಭಿವೃದ್ಧಿಗೆ ಜವಾಬ್ದಾರಿಯತವಾಗಿ ಚಿಂತಿಸಬೇಕು ಹಾಗೂ ರಾಷ್ಟ್ರದ ಪ್ರಗತಿಗೆ ,ಏಳಿಗೆಗೆ ಇಂದಿನ ಯುವಕರ ಪಾತ್ರ ಅತ್ಯಮೂಲ್ಯ ಎಂದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಯನ್ನು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ರಾಧಾಸ್ವಾಮಿ ಮಾತನಾಡಿ ಯಶಸ್ವಿ ಪ್ರಜಾಪ್ರಭುತ್ವವು ಯಶಸ್ವಿ ಮತದಾರರನ್ನು ನಿರ್ಮಿಸುತ್ತದೆ ಹಾಗಾಗಿ ಪ್ರತಿಯೊಬ್ಬರೂ ರಾಜಕೀಯ ಪ್ರಜ್ಞೆಯನ್ನು ಪಡೆಯುವುದರ ಮೂಲಕ ದೇಶದ ಉತ್ತಮ ಪೌರರಾಗಿ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಹಿರಿಯ ಪ್ರಾಧ್ಯಾಪಕರುಗಳಾದ ಪ್ರೊ. ರವೀಂದ್ರ ಗೌಡ .ಪ್ರೊ. ಕೃಷ್ಣಪ್ಪ ಡಾ. ಜೆ ಬಿ ಸಿದ್ದನಗೌಡ . ಉಪನ್ಯಾಸಕರಾದ ಬಿಎಸ್ ಪಟೇಲ್. ಉಮೇಶ್ ಕೆ ರಮೇಶ್ ಎಚ್. ಕೂಡ್ಲಿಗಿ ಕೊಟ್ರೇಶ್. ನಿಜಲಿಂಗ ಸ್ವಾಮಿ. ಬಸವರಾಜ್. ಬಸವರಾಜ್ ಬಣಕಾರ್. ಹಾಗೂ ಬೋಧಕ ಬೋಧಕೇತರ ವರ್ಗ ವಿದ್ಯಾರ್ಥಿಗಳು ಹಾಜರಿದ್ದರು . ಈ ಕಾರ್ಯಕ್ರಮವನ್ನು ಶ್ರೀಮತಿ ವಿಜಯಲಕ್ಷ್ಮಿ ಸಜ್ಜನ್ ಸ್ವಾಗತಿಸಿ ನಿರೂಪಿಸಿ ಯಶಸ್ವಿಗೊಳಿಸಿದರು
.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ