ಮಸ್ಕಿ : ಭಕ್ತರ ಮನೆ-ಮನೆಗೆ ಹೋಗುವ ಕಂಬಿ ಮಲ್ಲಯ್ಯ
ಮಸ್ಕಿ : ಪಟ್ಟಣದ ಐತಿಹಾಸಿಕ ಶ್ರೀ ಮಲ್ಲಯ್ಯನ ಆರಾಧ್ಯ ದೈವ ಕೃಪೆ ಮತ್ತು ಪವಾಡಗಳಿಂದ ಮಸ್ಕಿ ಧಾರ್ಮಿಕ-ಸಾಂಸ್ಕೃತಿಕ ಪಟ್ಟಣವಾಗಿ ಇಂದಿಗೂ ಬೆಳಗುತ್ತಿದೆ. ಇಲ್ಲಿನಡೆಯುವ ಪ್ರತಿ ಆಚರಣೆ, ಪದ್ಧತಿಗಳು ಬಹಳಷ್ಟು ವಿಶೇಷವಾಗಿವೆ. ಪಟ್ಟಣದಲ್ಲಿ ಕಂಬಿ ಮಲ್ಲಯ್ಯ ಒಂದು ವಾರಗಳ ಕಾಲ ಮನೆ ಮನೆಗೆ ಹೋಗಿ ಬರುವು
ಕಾಲಪಾರಂಪರಿಕ ಸಂಪ್ರದಾಯ, ಧಾರ್ಮಿಕನಂಬಿಕೆ, ರೂಢಿ, ಆಚಾರ-ಪದ್ಧತಿಗಳುಇಂದಿಗೂ ನಡೆದುಕೊಂಡು ಬರುತ್ತಿವೆ. ಈಎಲ್ಲ ಆಚರಣೆಗಳು ಮೂಢನಂಬಿಕೆಯಲ್ಲಬದಲಾಗಿ ಈ ನೆಲದ ದೈವ ಶಕ್ತಿ-ಭಕ್ತಿ,ಧಾರ್ಮಿಕ ಮನೋಭಾವ, ಸಾಂಸ್ಕೃತಿಕಹಿನ್ನೆಲೆಯಲ್ಲಿ ನಡೆದುಕೊಂಡು ಬರುತ್ತಿವೆ ಎನ್ನುವುದೇ ವಿಶೇಷ.
ಮನೆ-ಮನೆಗೆ ಮಲ್ಲಯ್ಯ:ಹೊಸ ವರ್ಷದ ದಿನ ಪಟ್ಟಣದ ಗಚ್ವಿನ ಹಿರೇಮಠದಲ್ಲಿ ಕಂಬಿಗೆ ಶ್ರೀ ವರ ರುದ್ರ ಮನಿ ಮಹಾ ಸಮೀಜಿಗಳು
ಪೂಜಿ ಸಲ್ಲಿಸಿದ ನಂತರ ಕಂಬಿಯನ್ನುಹೊರ ತರಲಾಗುತ್ತದೆ. ಅಂದಿನಿಂದ ಕಂಬಿಮಲ್ಲಯ್ಯನ ಸಂಚಾರ ಆರಂಭವಾಗುತ್ತದೆ. ಅಂದಿನಿಂದ ಒಂದು ವಾರಗಳ ಕಾಲ ಪಟ್ಟಣದ ಪ್ರತಿಯೊಬ್ಬರ ಮನೆಯಲ್ಲಿ ಮಲ್ಲಯ್ಯನಕಂಬಿ ಪೂಜೆ ನಡೆಯುತ್ತದೆ.
ಶ್ರೀ ಮಲ್ಲಯ್ಯ ಸಿರಗಿರಿ ಮಲ್ಲಯ್ಯ ಎಂದು ಸಮಳ ( ವಾದ್ಯ) ವನ್ನು ಬಾರಿಸುತ್ತಾ ಅರ್ಚಕರು ಹಾಡು ಆಡುವಾಗ ಭಕ್ತರು ಶ್ರದ್ಧಾಭಕ್ತಿಯಿಂದ
ಮಲ್ಲಯ್ಯನ ಕಂಬಿಗೆ ಪೂಜಿಸಿ ತಮ್ಮ ಇಷ್ಟಾರ್ಥಗಳಪ್ರಾಪ್ತಿಗಾಗಿ ಮನೆಯಲ್ಲಿ ಇರುವ ದವಸ ಧಾನ್ಯಗಳನ್ನು ಕೊಟ್ಟು ಬೇಡಿಕೊಳ್ಳುತ್ತಾರೆ.
ಹೇಳಿಕೆ 1
ಮಲ್ಲಯ್ಯ ಕಂಬಿ ಮನೆಗೆ ಬಂದರೆ ಒಳ್ಳೆಯ ವಾಗುತ್ತದೆ ಹಾಗೂ ಭಕ್ತರ ಬೇಡಿಕೆಯನ್ನು ಮಲ್ಲಯ್ಯ ಈಡೇರಿಸುವನು ಇದು ನಮ್ಮ ಹಿರಿಯರ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯದ ವಾಗಿದೆ ಎಂದು ಮಲ್ಲಿಕಾರ್ಜುನ ಕಂಬಿಯನ್ನು ಹೊತ್ತು ಕೊಂಡ ಅರ್ಚಕರಾದ ಸಿದ್ದಯ್ಯ ಹೆಸರೂರು ಹಿರೇಮಠ ರವರು ಹೇಳುತ್ತಾರೆ.
ಹೇಳಿಕೆ 2
ನಾವು ನಮ್ಮ ಮಲ್ಲಯ್ಯನಿಗೆ ಕೊಟ್ಟ ಹರಕೆ ಹಾಗೂ ದಾನ್ಯಗಳು ಕಂಬಿಯ ಮೂಲಕ ದೇವರಿಗೆ ಮುಟ್ಟಿಸುವುದರಿಂದ ಆ ಕಂಬಿಯ ಮೂಲಕವೇ ದೇವರು ಬರುತ್ತಾನೆಂಬುದು ನಂಬಿಕೆ ಎಂದರು. ಕುಮಾರ ಸ್ವಾಮಿ ಮಲ್ಲಯ್ಯ ಭಕ್ತರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ