ಕೆಂಗಳ ದುರುಗಮ್ಮ ದೇವಿಯ ಮೂರ್ತಿ ಯ ವೈಭವದ ಮೆರವಣಿಗೆ
ಕೊಟ್ಟೂರು : ೧೨ ವರ್ಷಕ್ಕೊಮ್ಮೆ ನಡೆಯುವ ಪಟ್ಟಣದ ಕೆಂಗಳ ದುರುಗಮ್ಮ ದೇವಿಯ ಜಾತ್ರಾ ಮಹೋತ್ಸವ ಮಂಗಳವಾರ ಮದ್ಯಾಹ್ನ ದುರುಗಮ್ಮ ದೇವಿಯ ವೈಭವದ ಉತ್ಸವ ಮೂರ್ತಿಯ ಮೆರವಣಿಗೆಯೊಂದಿಗೆ ಭಕ್ತರ ಸಡಗರ ಸಂಭ್ರಮಕ್ಕೆ ಅದ್ದೂರಿಯಾಗಿ ಚಾಲನೆ ಗೊಂಡಿತು.
ಪಟ್ಟಣದ ಊರಮ್ಮನ ಬಯಲು ಪ್ರದೇಶದಿಂದ ಶ್ರೀ ದುರುಗಮ್ಮ ದೇವಿಯ ಮೂರ್ತಿಯ ಮೆರವಣಿಗೆ ಉರುಮೆ ಮತ್ತಿತರ ವಾದ್ಯಗಳೊಂದಿಗೆ ಭಕ್ತರ ಜಯ ಘೋಷಗಳೊಂದಿಗೆ ಮದ್ಯಾಹ್ನ ೩.೦೦ ಸುಮಾರಿಗೆ ಆರಂಭಗೊAಡಿತು, ತೊಟ್ಟಿಲಮಠ ಹಿರೇಮಠ , ಪಟ್ಟಣ ಪಂಚಾಯಿತಿ, ಹಳೇ ಕಟ್ಟಡ ರಸ್ತೆ ಗುಂಟಾ ಸಾಗಿ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಕೊಟೇ ವೀರಭದ್ರೇಶ್ವರ ದೇವಸ್ಥಾನದ ರಸ್ತೆ ಉಜ್ಜಿನಿ ಸರ್ಕಲ್ ಮೂಲಕ ಚಿರಿಬಿ ರಸ್ತೆಯ ಮೇಗೆರಿಯಲ್ಲಿನ ದೇವಸ್ಥಾನದತ್ತ ಮೆರವಣಿಗೆ ಸಾಗಿತು ಯುವಕರು ದೇವಿಯ ಉತ್ಸವ ಮೂರ್ತಿಯನ್ನು ಹೆಗಲಲ್ಲಿ ಹೊತ್ತುಕೊಂಡು ಪರಸ್ಪರ ಕುಂಕುಮ ಮತ್ತಿತರಗಳನ್ನು ಹಚ್ಚಿಕೊಂಡು ಸಂಭ್ರಮಿಸಿದರು.
ಮಾಜಿ ಸಚಿವ ಬಿ.ಶ್ರೀರಾಮುಲು .ಜಿ.ಪಂ ಮಾಜಿ ಸದಸ್ಯ ಎಂ.ಎA.ಜೆ. ಹರ್ಷವರ್ಧನ್, ವಾಲ್ಮೀಕಿ ಮುಖಂಡರುಗಳಾದ, ಬೆಣ್ಣಿಹಳ್ಳಿ ಅಂಜಿನಪ್ಪ,ಬಿ.ಎಸ್.ಆರ್.ಮೂಗಪ್ಪ, ರಂಗಪ್ಪ, ಕೋವಿ ನಾಗರಾಜ, ಸುಂಕದಕಲ್ಲು ನಾಗರಾಜ, ವೆಂಕಟೇಶ್, ಪ್ರಕಾಶ್, ರಾಮಣ್ಣ, ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
Kotturu Report gye ground report telkondu news bariokye helli henadru dought edrye 8748874446 cl me
ಪ್ರತ್ಯುತ್ತರಅಳಿಸಿ