ರಾಜ್ಯ ಮಟ್ಟದ ಪುರಸ್ಕೃತರಿಗೆ ದಲಿತ ಮುಖಂಡರಿಂದ ಸನ್ಮಾನ

ಮಸ್ಕಿ : ಪಟ್ಟಣದ ಸರ್ಕ್ಯೂಟ್ ಹೌಸ್ ನಲ್ಲಿ  ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ ದಲಿತ ಸಮುದಾಯದ ಪ್ರಮುಖರನ್ನು ಮಾದಿಗ ಸಮುದಾಯ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಸನ್ಮಾನಿಸಿ ಗೌರವಿಸಿದರು.

ಸರ್ಕ್ಯೂಟ್ ಹೌಸ್ ನಲ್ಲಿ  ಕರ್ನಾಟಕ ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಮಾರುತಿ ಜಿನ್ನಾಪೂರು.ಬೆಳಕು ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ ಟ್ರಸ್ಟ್ ಸಂಸ್ಥೆಯ ರಾಜ್ಯ ಮಟ್ಟದ ಬೆಳಕು ಸಂಭ್ರಮದ ಕಾರ್ಯಕ್ರಮದಲ್ಲಿ ಸಮಾಜ ಸೇವೆ ಹಾಗೂ ರೈತರ ಪರ ಹೋರಾಟವನ್ನು ಗಮನಿಸಿ ಈ ಸಂಸ್ಥೆಯ ವತಿಯಿಂದ"ರಾಷ್ಟ್ರಮಟ್ಟದ ಸೇವಾ ರತ್ನ "ಪ್ರಶಸ್ತಿ ನೀಡಿ ಗೌರವಿಸಿತು ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಸರ್ಕಾರಿ ಹಿರಿಯ ಪ್ರಾಥಮಿಕ ಪಬ್ಲಿಕ್ ಶಾಲೆ ಮಸ್ಕಿಯ ದೈಹಿಕ ಶಿಕ್ಷಕರಾದ ರಾಮಪ್ಪ ಕರಡಿಗೆ "ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ" ದೊರಕಿದ್ದು ಹಾಗೂ ಲಿಂಗಸ್ಗೂರ್ ತಾಲೂಕಿನ ದಲಿತ ಸಂರಕ್ಷಕ ಸಮಿತಿ ತಾಲ್ಲೂಕ ಅಧ್ಯಕ್ಷರಾದ ಮೋಹನ್ ಗೋಸ್ಲೆಗೆ ಉತ್ತಮ ಸಮಾಜ ಸೇವಕ ರಾಜ್ಯ ಪ್ರಶಸ್ತಿ ನೀಡಲಾಗಿದೆ.ಹಾಗೆಯೇ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ಚೇತನಾ ಸ್ಪರ್ಧಾತ್ಮಕ ಕೋಚಿಂಗ್ ಸೆಂಟರ್ ನಲ್ಲಿ ಉಚಿತ ಭೋದನೆ ನೀಡುವ ಮೂಲಕ ನೂರಾರು ಯುವಕ - ಯುವತಿಯರ ಬಾಳಿಗೆ ಬೆಳಕಾಗಿರುವ ಇವರನ್ನು ಗುರುತಿಸಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದೆ.ಇಂತಹ ಮಹಾನ್ ಸನ್ಮಾನಿತರನ್ನು ಮಸ್ಕಿ ತಾಲೂಕಿನ ಮಾದಿಗ ಸಮಾಜದ ಬಂಧುಗಳು ಮತ್ತು ಹಲವಾರು ಸಂಘಟನೆಗಳ ಮುಖಂಡರು ಸೇರಿಕೊಂಡು ಸಾಧಕರಿಗೆ ಸನ್ಮಾನ ಮಾಡುವುದರ ಮೂಲಕ ಮುಂದಿನ ದಿನಮಾನಗಳಲ್ಲಿ ಸಮಾಜದಲ್ಲಿ ಸಮಾಜ ಮೆಚ್ಚುವಂತಹ ಇನ್ನೂ ಒಳ್ಳೆಯ ಕೆಲಸ ಕಾರ್ಯಗಳು ಇವರಿಂದ ಹೆಚ್ಚಿನ ಪ್ರಮಾಣದಲ್ಲಿ ಆಗುವುದರ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲಿ ಎಂಬ ಆಶಾ ಭಾವನೆಯಿಂದ ಬುಧುವಾರರಂದು ಮಸ್ಕಿಯಲ್ಲಿ ಮಾದಿಗ ಸಮಾಜದ ಬಂಧುಗಳು, ಸ್ನೇಹಿತರು, ಯುವ ಮುಖಂಡರು ಎಲ್ಲರೂ ಸೇರಿ ಸನ್ಮಾನಿಸಿ ಗೌರವಿಸಿದರು. 

ಇದೇ ಸಂದರ್ಭದಲ್ಲಿ ಜಯ ಕರ್ನಾಟಕ ತಾಲೂಕ ಅಧ್ಯಕ್ಷರಾದ ಕಿರಣ್ ಮುರಾರಿ,ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಅಶೋಕ್ ಮುರಾರಿ, ಪುರಸಭೆ ಮಾಜಿ ಅಧ್ಯಕ್ಷರಾದ ಮೌನೇಶ್ 

ಮುರಾರಿ, ಹುಲುಗೇಶ್ ಮುರಾರಿ, ಮಸ್ಕಿ ನಗರ ಘಟಕದ ಅಧ್ಯಕ್ಷರಾದ ಸಿದ್ದು ಮುರಾರಿ ಸೇರಿದಂತೆ ಕಾಸಿಂ ಮುರಾರಿ, ಮಲ್ಲಿಕ್ ಕೊಠಾರಿ, ಇನ್ನಿತರೇ ದಲಿತ ಮುಖಂಡರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ