ಸ್ನೇಹ ಸಂಸ್ಥೆಯಿಂದ ಜಾಗೃತಿ ಕಾರ್ಯಗಾರ
ವರದಿ ಮಂಜುನಾಥ್ ಕೋಳೂರು ಕೊಪ್ಪಳ
ಕೊಪ್ಪಳ ಜ 2 : - ಮಂಗಳವಾರ ನಗರದ ಖಾಸಗಿ ಹೋಟೆಲ್ ಸಭಾಂಗನದಲ್ಲಿ ಪತ್ರಕರ್ತರ ಮೇಲಿನ ಅಪರಾಧಗಳಿಗೆ ನಿರ್ಭಯವನ್ನು ಕೊನೆಗೊಳಿಸುವ ಅಂತರಾಷ್ಟ್ರೀಯ ದಿನ ಹಾಗೂ ಮಕ್ಕಳ ಹಾಗೂ ದೇವದಾಸಿ ಮಹಿಳೆಯರ ಸಮಸ್ಯೆಗಳ ಕುರಿತು ಸರ್ಕಾರದಿಂದ ಹೊರಡಿಸಲಾದ ಆದೇಶಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಕಾರ್ಯಗಾರ ಏರ್ಪಡಿಸಲಾಗಿತ್ತು. ಉದ್ಘಾಟನೆಯ ಸಮಾರಂಭದ ಅಧ್ಯಕ್ಷತೆಯನ್ನು ಸ್ನೇಹ ಸಂಸ್ಥೆಯ ನಿರ್ದೇಶಕ ಟಿ ರಾಮಾಂಜನೇಯ ವಹಿಸಿ ಮಾತನಾಡಿದರು.
ಸಮಾರಂಭದ ಉದ್ಘಾಟನೆಯನ್ನು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಗುಂಡ್ಲಾನೂರ್ ನೆರವೇರಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮೀಡಿಯಾ ಕ್ಲಬ್ ಅಧ್ಯಕ್ಷ ಶರಣಪ್ಪ ಬಾಚಲಾಪುರ್ ,
ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿಯ ಸದಸ್ಯ ಜಿಎಸ್ ಗೋನಾಳ , ವುಡ್ ಸಂಸ್ಥೆಯ ನಿರ್ದೇಶಕ ಎಂ ವಿ ಚಕ್ರಪಾಣಿ , ಸ್ನೇಹ ಸಂಸ್ಥೆಯ ಸಹಾಯಕ ನಿರ್ದೇಶಕಿ ಕೆ ಪಿ ಜಯಾ, ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಎಂ ಸಾಧಿಕ ಅಲಿ ಮತ್ತಿತರರು ಪಾಲ್ಗೊಂಡಿದ್ದರು . ಆರಂಭದಲ್ಲಿ ಕಾರ್ಯಕ್ರಮದ
ಪ್ರಾರ್ಥನೆ ಗೀತೆಯನ್ನು ಶೇಕರವ್ವ ನಡೆಸಿಕೊಟ್ಟರು, ಜಿಕೆ ಮಹಾಲಕ್ಷ್ಮಿ ಸ್ವಾಗತಿಸಿದರು , ಸಂಯೋಜಕೀ ಎಂ ಶೋಭಾ ನಿರೂಪಣೆ ಮಾಡಿದರು , ಸಂಯೋಜಕಿ ಗಾಯತ್ರಿ ಕೊನೆಯಲ್ಲಿ ವಂದಿಸಿದರು. ಕಾರ್ಯಗಾರದಲ್ಲಿ ಪತ್ರಕರ್ತರಾದ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ್ ವಾಯ್ , ಜಿಲ್ಲಾ ಸಂಘದ ಸದಸ್ಯ ಮಂಜುನಾಥ ಕೋಳೂರು , ಅಬ್ದುಲ್ ಅಜೀಜ ಮಾನ್ವಿ ಕರ್, ಕಿಶೋರಿ ಸಂಘದ ತರಬೇತಿ ಸಿಬ್ಬಂದಿಗಳಾದ ರೇಣುಕಾ ಜಿ ಹಾಗೂ ಸರೋಜಾ ಹವಳದ ಸೇರಿದಂತೆ ಮಹಿಳೆಯರು , ಯುವ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ