ಕೊಟ್ಟೂರಿನಲ್ಲಿ ಪೊಲೀಸ್ ಇಲಾಖೆಯರಿಂದ ರಸ್ತೆ ಸುರಕ್ಷತಾ ಸಪ್ತಾಹ ಬೈಕ್ ರ್ಯಾಲಿ

ಕೊಟ್ಟೂರು ಪೊಲೀಸ್ ಠಾಣಾ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಪೊಲೀಸ್ ಠಾಣೆಯಿಂದ ಚಾಲನೆ ನೀಡಿದರು.

ಹರಪನಹಳ್ಳಿ ರಸ್ತೆ ಯಿಂದ ಉಜ್ಜಿನಿ ಸರ್ಕಲ್ ಹಾಗೂ ಬಸ್ ನಿಲ್ದಾಣ ಸರ್ಕಲ್ ವರೆಗೆ ಬೈಕ್ ರ್ಯಾಲಿ ಶಿಸ್ತು ಕ್ರಮ ಬದ್ಧವಾಗಿ ನಡೆಸಿದರು.ಈ ಸಂದರ್ಭದಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತ ಹೆಚ್ಚಾಗಿ ಕಂಡು ಬಂದಿದ್ದು.ಯುವಕ ಮತ್ತು ಯುವತಿಯರು ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಾ ಬೈಕ್ ಮತ್ತು ಇತರೆ ವಾಹನಗಳಲ್ಲಿ ಸಂಚಾರ ಮಾಡುವುದು ಸರ್ವೇ ಸಾಮಾನ್ಯವಾಗಿದೆ.ಡ್ರೈವಿಂಗ್ ಲೈಸೆನ್ಸ್ ಹಾಗೂ ಇನ್ಸೂರೆನ್ಸ್ ಇಲ್ಲದೆ ಚಲಾಯಿಸುವುದು ಮತ್ತು ಇತ್ತೀಚಿನ ದಿನಗಳಲ್ಲಿ ರೋಡ್ ಸಿಸಿ ಮತ್ತು ಡಾಂಬರ್ ಮಾಡಿರುತ್ತಾರೆ ಆದರೆ ಅಲ್ಲಿ ಸಿಗ್ನಲ್ ಮತ್ತು ತಿರುವುಗಳ ಸೂಚನೆ ಇರದೆ ಅನೇಕ ಅಪಘಾತಗಳು ನಡೆಯುತ್ತಲೇ ಬಂದಿರುವುದು ಅತಿಯಾಗಿ ಕಂಡು ಬರುತ್ತದೆ.

ಈ ಎಲ್ಲಾ ದೃಷ್ಟಿಕೋನದಿಂದ ಪೊಲೀಸ್ ಠಾಣೆ ವತಿಯಿಂದ ಜನರಲ್ಲಿ ಮೊಬೈಲ್ ಬಳಕೆ ಮಾಡುತ್ತಾ ವಾಹನ ಚಲಿಸುವುದು ಬೈಕಿನಲ್ಲಿ ಮಾತನಾಡುತ್ತಾ ಹೋಗುವುದು ಮತ್ತು ಅಲ್ಲಿರುವ ಸಿಗ್ನಲ್ ಮಾಹಿತಿ ಮತ್ತಿತರೆ ವಿಷಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ರಸ್ತೆ ಸುರಕ್ಷತಾ ಸಪ್ತಾಹವಾಗಿದೆ ಈ ಕಾರ್ಯಕ್ರಮವು ಕೊಟ್ಟೂರಿನಲ್ಲಿ ಅತ್ಯದ್ಭುತವಾಗಿ ಅಗತ್ಯಕ್ಕೆ ತಕ್ಕಂತೆ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಸಿಪಿಐ ವೆಂಕಟಸ್ವಾಮಿ ಪಿಎಸ್ಐ ಗೀತಾಂಜಲಿ ಶಿಂಧೆ, ಚಂದ್ರಮೌಳಿ, ಮತ್ತು ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ