*ಹೂವುಗಳ ರಾಶಿಯೊಂದಿಗೆ ಅಲಂಕಾರ ಗೊಂಡ ಮರಿ ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನ*
"ಹೊಸ ವರ್ಷದ ಮೊದಲನೇ ಸೋಮವಾರದಂದು ಮರಿಕೊಟ್ರೇಶ್ವರ ಕಾರ್ತಿಕೋತ್ಸವ"
ಕೊಟ್ಟೂರು : ಲಕ್ಷಾಂತರ ಭಕ್ತರ ಆರಾಧ್ಯದೈವ ಶ್ರೀಗುರುಕೊಟ್ಟೂರೇಶ್ವರ ಸ್ವಾಮಿಯ ಹಿರೇಮಠ ಕಾರ್ತೀಕೋತ್ಸವದ ನಂತರ ಮೊದಲನೇ ಸೋಮವಾರ ದಂದು ಕಾರ್ತಿಕೋತ್ಸವಕ್ಕೆ ಮರಿಕೊಟ್ರೇಶ್ವರ ದೇವಸ್ಥಾನ ಹೂವಿನ ಅಲಂಕಾರ ಮೆರುಗು ಮೂಡಿಸಿತು.
ಪ್ರತಿ ಕಾರ್ತೀಕ ಮಾಸದಲ್ಲಿ ಮರಿ ಕೊಟ್ಟೂರೇಶ್ವರ ದೇವಸ್ಥಾನವನ್ನು ಹೂವುಗಳಿಂದ ಶೃಂಗರಿಸುವ ಸೇವೆಯನ್ನು ಮುಂದುವರೆಸಿಕೊAಡು ಬಂದಿರುವ ಕಾರು ಚಾಲಕರು ಮತ್ತು ಆಟೋ ಚಾಲಕರ ಸಂಘದ ಭಕ್ತರು .
ಹೂಗಳಿಂದ ಶೃಂಗಾರಗೊAಡ ಶ್ರೀಸ್ವಾಮಿಯ ದೇವಸ್ಥಾನವನ್ನು ಸೋಮವಾರ ದಿನವಿಡೀ ಭಕ್ತರು ಕಣ್ತುಂಬಿಕೊಂಡು ಶ್ರೀಸ್ವಾಮಿಯ ದರ್ಶನಾರ್ಶಿವಾದ ಪಡೆದುಕೊಂಡರಲ್ಲದೆ ಬಹುತೇಕರು ತಮ್ಮ ಮೊಬೈಲ್ ಕ್ಯಾಮರಗಳಿಂದ ಶೃಂಗಾರಗೊAಡ ದೇವಸ್ಥಾನವನ್ನು ಸೆರೆ ಹಿಡಿದರು.
ಹೊಸ ವರ್ಷದ ಮೊದಲನೇ ಸೋಮವಾರ ಮರಿಕೊಟ್ಟೂರೇಶ್ವರ ಕಾರ್ತಿಕೋತ್ಸವ ದೀಪ ಹಚ್ಚುವ ಕಾರ್ಯಕ್ರಮ ಸಂಜೆ 6 ಗಂಟೆಗೆ ವಿಜೃಂಭಣೆಯಿಂದ ನಡೆಯುತ್ತಿದೆ. ಎಂದು ಕಾರು ಚಾಲಕರು, ಆಟೋ ಚಾಲಕರು ಹಾಗೂ ದೇವಸ್ಥಾನ ಅರ್ಚಕರು ತಿಳಿಸಿದರು.




ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ