ತಾಪವನ್ನು ಕೆಳೆದು ಕೊಳ್ಳಲು ಜನವರಿ 03 ರ ಮೆದಿಕಿನಾಳ ಚನ್ನಮಲ್ಲ ಶಿವಯೋಗಿಗಳ ಅಜ್ಜನ ಜಾತ್ರೆಗೆ ಬನ್ನಿ

ಮಸ್ಕಿ: ತಾಲೂಕಿನ ಮೆದಕಿನಾಳ ಗ್ರಾಮದಲ್ಲಿ ಸುವರ್ಣಗಿರಿ ಶ್ರೀ ಚನ್ನಮಲ್ಲ ಶಿವಯೋಗಿಗಳ 68ನೇ ಜಾತ್ರಾ ಮಹೋತ್ಸವವನ್ನು ಜ.3ರಂದು ಅದ್ದೂರಿಯಾಗಿ ಆಯೋಜಿಸಲು ಸಿದ್ಧತೆ ನಡೆಸಲಾಗಿದೆ. ತಾಪವನ್ನು ಕೆಳೆದು ಕೊಳ್ಳಲು ಅಜ್ಜನ ಜಾತ್ರೆಗೆ ಬನ್ನಿ ಎಂದು ಶ್ರೀ ಮಠದ ಸಮಿತಿ ಸದಸ್ಯರಾದ ಶಿವಪುತ್ರಯ್ಯ ಸ್ವಾಮಿ ಮಾಲಿಮಠ ಮೆದಕಿನಾಳ ಹೇಳಿದರು.

ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಚನ್ನಮಲ್ಲ ಶಿವಯೋಗಿಗಳ ವಿಶೇಷ ಭಾವೈಕ್ಯದ ತೇರು ಸಿದ್ದಗೊಂಡಿದೆ. ಈ ತೇರು ಸರ್ವ ಜನಾಂಗದ ಐಕ್ಯತೆಯನ್ನು ಸಾರುವ ಅಧ್ಬುತ ತೇರು ಸ್ಥಾಪನೆ ಮತ್ತು ಮೂರ್ತಿ ಪ್ರತಿಷ್ಠಾಪನೆ, ಉಡಿತುಂಬುವ 'ಕಾರ್ಯಕ್ರಮ ಹಾಗೂ ಸಾಮೂಹಿಕ ವಿವಾಹಗಳು ನಡೆಯಲಿವೆ. ವಿವಿಧ ಜಿಲ್ಲೆಗಳ 38 ರಿಂದ 40 ಕ್ಕೂ ಅಧಿಕ ಸ್ವಾಮೀಜಿಗಳು ಹಾಗೂ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬ್ರಾಹ್ಮೀ

ಮುಹೂರ್ತದಲ್ಲಿ ಮಹಾರುದ್ರಾಭಿಷೇಕ, ಲಿಂಗದೀಕ್ಷೆ, ನೂತನ ರಥಕ್ಕೆ ಕಲಶಾರೋಹಣ ಹಾಗೂ ಮಡಿತೇರು ಜರುಗಲಿದೆ ಎಂದರು. 

ಈ ವೇಳೆ,ಮಲ್ಲಿಕಾರ್ಜುನ ಪರಡ್ಡಿ, ರಾಜಣ್ಣ ಪರಡ್ಡಿ, ಲಕ್ಷ್ಮೀಕಾಂತ ಶಿವಪುತ್ರಯ್ಯ ಮೆದಕಿನಾಳ,ಗ್ಯಾನಪ್ಪ ದೊಡ್ಡಮನಿ, ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*