ಮಸ್ಕಿ ಆಟೋ ದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ.
ನೆರೆಹೊರೆ ಮಹಿಳೆಯರು ಆಟೊ ಸುತ್ತ ಪರದೆ ಕಟ್ಟಿ ಹೆರಿಗೆಗೆ ಸಹಕಾರ.
ಮಸ್ಕಿ : ಗರ್ಭಿಣಿಯೊಬ್ಬರು ಹೆರಿಗೆಗಾಗಿ ಆಸ್ಪತ್ರೆಗೆ ತೆರಳುವ ವೇಳೆ ಆಟೊದಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಪಟ್ಟಣದ ವಾರ್ಡ 08 ರಲ್ಲಿ ಬರುವ ದುರ್ಗಾದೇವಿ ದೇವಸ್ಥಾನದ ಹತ್ತಿರ ಶೇಷಮ್ಮ ಗಂ ಮಲ್ಲಯ್ಯ ಕಾನಿಹಾಳ ಎಂಬ ಮಹಿಳೆಗೆ ಬೆಳಿಗ್ಗೆಯೇ ಹೆರಿಗೆ ನೋವು ಕಾಣಿಸಿಕೊಂಡಿದೆ
ಮನೆಯಿಂದ ಆಟೋ ದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಹರಿಗೆ ನೋವು ಹೆಚ್ಚಾಗಿದೆ. ಇದನ್ನು ಅರಿತು ತಕ್ಷಣ ಮಾರ್ಗ ಮಧ್ಯದಲ್ಲಿಯೇ ಆಟೋ ಚಾಲಕ ಶಿವಕುಮಾರ್ ಅಟೊ ನಿಲ್ಲಿಸಿದ್ದಾನೆ.
ತಕ್ಷಣ ಕುಟುಂಬದ ಮಹಿಳೆ ಶಾರದಮ್ಮ ಮತ್ತು ಅಕ್ಕ ಪಕ್ಕದ ಮಹಿಳೆಯರು ಆಟೊದ ಸುತ್ತ ಸಿರಿ ಪರದೆ ಕಟ್ಟಿ ಹೆರಿಗೆಗೆ ಸಹಕಾರ ನೀಡಿದ್ದರು
ಮಹಿಳೆಯು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ ಹೆರಿಗೆ ಸಹಕರಿಸಿದ ನರೆ ಹೊರೆಯವರ ಸಹಾಯಕ್ಕೆ ಸಾರ್ವಜನಿಕರ ಮಚ್ಚಗೆ ವ್ಯಕ್ತಪಡಿಸಿದ್ದಾರೆ.
ಹರಿಗೆ ನಂತರ ಆಶಾ ಕಾರ್ಯಕರ್ತೆಯರು ಮಹಿಳೆ ಹಾಗೂ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ