ಹಟ್ಟಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಪಕ್ಷೇತರ ಅಭ್ಯರ್ಥಿಯಾದ ಎಮ್.ಡಿ. ಸಮಾದಾನಿ.

 

ಹಟ್ಟಿ ಚಿನ್ನದ ಗಣಿ :27ಹಟ್ಟಿ ಚಿನ್ನದ ಗಣಿ ಪಟ್ಟಣ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಇಂದು ನಡೆದಿದ್ದು ಒಟ್ಟು 13 ಸಂಖ್ಯೆ ಬಲ ಹೊಂದಿದ ಹಟ್ಟಿ ಪಟ್ಟಣ ಪಂಚಾಯಿತಿ ಈಗಾಗಲೇ ಕಾಂಗ್ರೆಸ್ ಪಕ್ಷದ 8 ಸದಸ್ಯರು ಚುನಾಯಿತ ಪ್ರತಿನಿಧಿಗಳಾಗಿದ್ದರು ಅದರಲ್ಲಿ ಇಬ್ಬರು ಸದಸ್ಯರು ಮರಣ ಹೊಂದಿದ್ದು ಒಟ್ಟು ಕಾಂಗ್ರೆಸ್ ಪಕ್ಷದ ಆರು ಸದಸ್ಯರು ಇದ್ದಾರೆ ಮೂರು ಜನ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಾಗಿದ್ದು ಇಬ್ಬರು ಪಕ್ಷೇತರ ಅಭ್ಯರ್ಥಿಗಳಾಗಿ ಚುನಾಯಿತ ಪ್ರತಿನಿಧಿಗಳಾಗಿದ್ದರು. 

ಹಟ್ಟಿ ಪಟ್ಟಣ ಪಂಚಾಯತಿಯು ಈಗ 11 ಜನ ಸದಸ್ಯರನ್ನು ಹೊಂದಿದ್ದು ಹಟ್ಟಿ ಪಟ್ಟಣ ಪಂಚಾಯತಿ ಸಾಮಾನ್ಯ ಸ್ಥಾನಕ್ಕೆ ಅಧ್ಯಕ್ಷರಾಗಲು ಅದರಲ್ಲಿ ಮ್ಯಾಜಿಕ್ ನಂಬರ್ 6 ಸದಸ್ಯರಿದ್ದರೆ ಹಟ್ಟಿ ಪಟ್ಟಣ ಪಂಚಾಯತಿ ಅಧ್ಯಕ್ಷರಾಗಬಹುದು 

ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯ ಅಧಿಸೂಚಿ ಪ್ರಕಟವಾದ ಅಧ್ಯಕ್ಷ ಸ್ಥಾನ ಸಾಮಾನ್ಯ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ (ಎಸ್ ಟಿ )ಮಹಿಳೆ ಇದು 

 ಹಟ್ಟಿ ಪಟ್ಟಣ ಪಂಚಾಯತಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ 6 ಜನ ಸದಸ್ಯರಿದ್ದು ಕಾಂಗ್ರೆಸ್ ಪಕ್ಷದಿಂದ ಸಿರಾಜುದ್ದೀನ್ ಖುರೇಷಿ ಹೆಸರು ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿ ಕೇಳಿ ಬಂದಿತ್ತು ನಂತರ ಇದರ ಚಿತ್ರಣವೇ ಬೇರೆಯಾಯಿತು.

ಹಟ್ಟಿ ಪಟ್ಟಣ ಪಂಚಾಯಿತಿಗೆ ಈಗ ಪಕ್ಷೇತರ ಅಭ್ಯರ್ಥಿ ಅಧ್ಯಕ್ಷ ಆಗಿರುವುದನ್ನು ನೋಡಿದರೆ ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಕಾಂಗ್ರೆಸ್ ಪಕ್ಷದ ಸದಸ್ಯರು 

 ಮಾಜಿ ಶಾಸಕರಾದ ಡಿ ಎಸ್ ಹುಲಗೇರಿ ಇವರ ಹಿಡಿತದಲ್ಲಿ ಇಲ್ಲ ಅನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆ ಹಟ್ಟಿ ಪಟ್ಟಣ ಪಂಚಾಯಿತಿಯಲ್ಲಿ ಆರು ಜನ ಸದಸ್ಯ ಬಲ ಹೊಂದಿರುವ ಕಾಂಗ್ರೆಸ್ ಪಕ್ಷ ಹಟ್ಟಿ ಪಟ್ಟಣ ಪಂಚಾಯತಿಯ ಅಧ್ಯಕ್ಷ ಸ್ಥಾನವನ್ನು ತಮ್ಮ ತೆಕ್ಕಿಗೆ ತೆಗೆದುಕೊಳ್ಳುವಲ್ಲಿ ವಿಫಲವಾದ ಕಾಂಗ್ರೆಸ್ ಪಕ್ಷ ಮತ್ತು ಮಾಜಿ ಶಾಸಕರಾದ ಡಿ ಎಸ್ ಹುಲಗೇರಿ ಮತ್ತು ತಾಲೂಕು ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ಹಟ್ಟಿ ಪಟ್ಟಣದ ಕಾಂಗ್ರೆಸ್ ಅಧ್ಯಕ್ಷರು ಮುಖಂಡರು 

 ಪಕ್ಷೇತರ ಅಭ್ಯರ್ಥಿಯು ತನ್ನ ಸ್ವಂತ ಬಲದಿಂದ ಕಾಂಗ್ರೆಸ್ ಪಕ್ಷದ ಸದಸ್ಯರು ಮತ್ತು ಜೆಡಿಎಸ್ ಪಕ್ಷದ ಸದಸ್ಯರ ಬೆಂಬಲದಿಂದ ಹಟ್ಟಿ ಪಟ್ಟಣ ಪಂಚಾಯತಿಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ 

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಹಟ್ಟಿ ಪಟ್ಟಣ ಪಂಚಾಯತಿ ಅಧ್ಯಕ್ಷರಾಗಲು ಆರು ಜನರ ಸಂಖ್ಯೆ ಬಲವಿದ್ದರೂ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ. 

 ಜೆಡಿಎಸ್ ಪಕ್ಷದ ಮೂರು ಜನ ಸದಸ್ಯರು ಕಾಂಗ್ರೆಸ್ ಪಕ್ಷದ ನಾಲ್ಕು ಜನ ಸದಸ್ಯರ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಗೆ ಸಂದಾನಿ ಎಂ ಡಿ ಇವರು ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ 

ಹಟ್ಟಿ ಚಿನ್ನದ ಗಣಿ ಪಟ್ಟಣದ ಸರಳ ವ್ಯಕ್ತಿತ್ವ ಹೊಂದಿದ ದಿವಂಗತ ಎಂ ಡಿ ರಜಾಕ್ ಸೇಟ್ ಇವರ ಪುತ್ರರಾದ ಮಾಜಿ ಎಪಿಎಂಸಿ ಸದಸ್ಯರಾಗಿರುವ ಹಮ್ಜದ್ ಸೇಟ್ ಮತ್ತು ಅವರ ತಾಯಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರ ಪುತ್ರರಾದ ಸಂದಾನಿ ಎಂ ಡಿ ಕಳೆದ ಬಾರಿ ಹಟ್ಟಿ ಪಟ್ಟಣ ಪಂಚಾಯತಿ 11ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು 

ಹಟ್ಟಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಸ್ಥಾನಕ್ಕೆ ಬಯಸದೆ ಬಂದ ಭಾಗ್ಯ ಅನ್ನುವ ಹಾಗೆ ಜೆಡಿಎಸ್ ಪಕ್ಷದ ಅಭ್ಯರ್ಥಿ ನಾಗರತ್ನ ಶರಣಗೌಡ ಗುರಿಕಾರ್ ಮೂರನೇ ಬಾರಿಯೂ ಹ್ಯಾಟ್ರಿಕ್ ಮೂಲಕ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಎಸ್ ಟಿ ಮಹಿಳೆ ಒಬ್ಬರೇ ಇದ್ದ ಕಾರಣ ಈ ಬಾರಿಯೂ ಉಪಾಧ್ಯಕ್ಷ ಸ್ಥಾನವನ್ನು ಪಡೆದರು

 ಹಟ್ಟಿ ಪಟ್ಟಣ ಪಂಚಾಯಿತಿಯ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆ ಅಧಿಕಾರಿಯಾಗಿ ಲಿಂಗಸ್ಗೂರು ತಾಲೂಕು ತಹಸಿಲ್ದಾರ್ ಆಗಮಿಸಿ ಹಟ್ಟಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆ 

 ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದು ನಾಮಪತ್ರ ಸಲ್ಲಿಕೆ ಆದಕಾರಣ ಸಾಮಾನ್ಯ ಅಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿ ಸಂದಾನಿ ಎಂ ಡಿ ಉಪಾಧ್ಯಕ್ಷ ಸ್ಥಾನಕ್ಕೆ ಜೆ ಡಿ ಎಸ್ ಪಕ್ಷದ ನಾಗರತ್ನ ಶರಣಗೌಡ ಗುರಿಕಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡುವ ಮೂಲಕ ಪ್ರಮಾಣ ಪತ್ರವನ್ನು ನೀಡಿದರು 

 ಕಾಂಗ್ರೆಸ್ ಪಕ್ಷ ಆರು ಜನ ಸದಸ್ಯರನ್ನು ಹೊಂದಿದ್ದರು ಹಟ್ಟಿ ಪಟ್ಟಣ ಪಂಚಾಯಿತಿ ಸಾಮಾನ್ಯ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಮಾಡದೆ ಹಟ್ಟಿ ಪಟ್ಟಣದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಮತ್ತು ಮಾಜಿ ಶಾಸಕರಾದ ಡಿ ಎಸ್ ಹುಲಗೇರಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ತೀವ್ರ ಹಿನ್ನಡೆ ಯಾಗುವುದೇ ಅಥವಾ ಕಾರ್ಯಕರ್ತರು ಮತ್ತು ಮಾಜಿ ಶಾಸಕರ ನಡುವೆ ಅಸಮಾಧಾನವೇ ಹಟ್ಟಿ ಪಟ್ಟಣ ಪಂಚಾಯತಿ ಕಾಂಗ್ರೆಸ್ ಪಕ್ಷದ ಸದಸ್ಯರಾದ ಸಿರಾಜುದ್ದೀನ್ ಖುರೇಷಿ ಅಮರೇಗೌಡ ಬಯ್ಯಾಪೂರ್ ಆಪ್ತ ಕಾರ್ಯಕರ್ತ ಅನ್ನುವುದಕ್ಕಾಗಿ ಕೈಬಿಟ್ಟರೆ...?

 ಹಟ್ಟಿ ಪಟ್ಟಣ ಪಂಚಾಯತಿ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ಉಪಾಧ್ಯಕ್ಷರನ್ನು ಪಟ್ಟಣದ ಮುಖಂಡರು ಅಭಿನಂದನೆಗಳನ್ನು ಸಲ್ಲಿಸಿದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋವಿಂದ ನಾಯಕ್,ಲಿಂಗರಾಜ್, ಹೆಚ್ ಎ ನಿಂಗಪ್ಪ, ಯೋಗಪ್ಪ ದೊಡ್ಮನಿ, ಮೌನೇಶ್ ಕಾಕಾ ನಗರ, ಬಸರಾಜ್ ಗೌಡ ಗುರಿಕಾರ್,ಕನಕರಾಜ್ ಗೌಡ ಗುರಿಕಾರ್, ಆಂಜನೇಯ ಗೌಡ ಗುರಿಕಾರ್, ನಿಂಗಪ್ಪ ಮನಗೂಳಿ, ಶಿವರಾಜ್ ಗುರಿಕಾರ್,ಸೈಯದ್ ಟೈಲರ್,ಮೌಲಾಲಿ ಮಾಸ್ಟರ್,ಸೇರಿದಂತೆ ಅನೇಕ ಮುಖಂಡರು ಊರಿನ ಗಣ್ಯರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ