ಉದ್ಯೋಗ ಖಾತ್ರಿ ಯೋಜನೆ ೨೦೦ ದಿನಗಳ ಕೆಲಸ ಮತ್ತು ೬೦೦ ಕೂಲಿ ಹೆಚ್ಚಿಸಲು ಮನವಿ
ಕೊಟ್ಟೂರು : ಭೂರಹಿತರಿಗೆ ಭೂಮಿ, ನಿವೇಶನ, ವಸತಿ ರಹಿತರಿಗೆ ಮನೆ ಸೌಕರ್ಯ, ಸರ್ಕಾರದ ಭೂಮಿ ಸಾಗುವಳಿಗೆ ಪಟ್ಟಾಕ್ಕಾಗಿ ಒತ್ತಾಯ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ೨೦೦ ದಿನಗಳ ಕೆಲಸ ಮತ್ತು ೬೦೦ ಕೂಲಿ ಹೆಚ್ಚಿಸಲು ಒತ್ತಾಯಿಸಿ ಜಿಲ್ಲಾಧ್ಯಕ್ಷ ಹುಲಿಕಟ್ಟಿ ಮೈಲಪ್ಪ ತಾಲೂಕು ಉಪತಹಶೀಲ್ದಾರ್ ಅನ್ನದಾನೇಶ್ ಬಿ.ಪತ್ತಾರ್ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಶುಕ್ರವಾರ ಮನವಿ ಪತ್ರ ಸಲ್ಲಿಸಿ ಮಾತನಾಡಿ ಭೂಕಬಳಿಕೆಗೆ ಸಂಬಧಿಸಿದಂತೆ ಹೇಸರಿನಲ್ಲಿ ಸಣ್ಣ ಪುಟ್ಟ ರೈತರು ತಲೆ ತಲೆಮಾರುಗಳಿಂದ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲಿಸುವ ಸರ್ಕಾರದ ನಿರ್ಧಾರವನ್ನು ಅರ್ಯಲಾ ಸಂಘಟನೆಯು ಬಲವಾಗಿ ಖಂಡಿಸುತ್ತದೆ ಎಂದರು.
ನಗರಗಳಿಗೆ ಹೊಂದಿಕೊಂಡಿರುವ ಸಣ್ಣ ಪಟ್ಟಣಗಳು, ಗ್ರಾಮ ಕೇಂದ್ರಗಳಲ್ಲೂ ಭೂ ಕಬಳಿಕೆ ಬೃಹತ್ ಪ್ರಮಾಣದಲ್ಲಿ ನಡೆಯುತ್ತಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೆಲೆಬಾಳುವ ಸರ್ಕಾರಿ ಜಮೀನುಗಳನ್ನು ಕಬಳಿಸುವವರನ್ನು ಕಾನೂನಿನ ವ್ಯಾಪ್ತಿಗೆ ತಂದು ಶಿಕ್ಷೆಗೆ ಗುರಿಪಡಿಸಬೇಕು
ರೈತರು ಜೀವನೋಪಾಯಕ್ಕಾಗಿ ಮಾಡಿಕೊಂಡಿರುವ ಮೂರು ಎಕರೆವರೆಗಿನ ಒತ್ತುವರಿಯನ್ನು ತೆರವುಗೊಳಿಸದಿರುವ ನಿರ್ಧಾರವನ್ನು ರಾಜ್ಯ ಸರ್ಕಾರವು ೨೦೧೫ರಲ್ಲೇ ಕೈಗೊಂಡಿತ್ತು. ಅಂತಹ ರೈತರ ವಿರುದ್ಧ ಭೂಕಬಳಿಕೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸುವುದನ್ನು ತಡೆಯುವ ಅವಕಾಶ ಸರ್ಕಾರದ ಕೈಯಲ್ಲೇ ಇತ್ತು. ಈಗಲೂ, ಅಂತಹ ರೈತರ ವಿರುದ್ಧದ ಪ್ರಕರಣಗಳನ್ನಷ್ಟೇ ಕೈಬಿಡುವ ತೀರ್ಮಾನ ಮಾಡುವುದಕ್ಕೂ ಅವಕಾಶ ಇದೆ.ಇಂತಹ ನಿಲುವನ್ನು ರಾಜ್ಯ ಸರ್ಕಾರ ತಾ ತಳ್ಳುತ್ತಿರುವುದು ದುರದೃಷ್ಟಕರ. ಭೂ ಒತ್ತುವರಿ ತೆರವು ಗುರಿಯಾಗಿಟ್ಟು ಕೊಂಡು ಜನರನ್ನು ಓಲೈಸಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂಬ ಅನುಮಾನವೂ ಇದೆ. ಈ ವಿಚಾರದಲ್ಲಿ ವಿರೋಧ ಪಕ್ಷಗಳೂ ಜವಾಬ್ದಾರಿಯಿಂದ ವರ್ತಿಸಬೇಕು. ಕಾಯ್ದೆ ತಿದ್ದುಪಡಿಯ ಸಾಧಕ– ಬಾಧಕಗಳ ಕುರಿತು ವಿಸ್ತೃತವಾಗಿ ಚರ್ಚಿಸಿದ ಬಳಿಕವೇ ತೀರ್ಮಾನಕ್ಕೆ ಬರಬೇಕೆಂದು ಅಯರ್ಲಾ ಸಂಘಟನೆಯ ಸರ್ಕಾರಕ್ಕೆ ಒತ್ತಾಯಿಸುತ್ತದೆ.ಭೂಮಿಯಿಲ್ಲದವರು, ನಿವೇಶನ ಮತ್ತು ಮನೆಯಿಲ್ಲದವರು ಸಂಘಟನೆಗೊಂಡು ಸಂವಿಧಾನಬದ್ದ ಹಕ್ಕುಗಳನ್ನು ಪಡೆದುಕೊಳ್ಳಲು ಸರ್ಕಾರಕ್ಕೆ ಒಕ್ಕೊರಲಿನಿಂದ ಆಗ್ರಹಿಸುತ್ತೇವೆ.
ಎಲ್ಲಾ ಬಗೆಯ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮತ್ತು ಅರಣ್ಯ ಹಕ್ಕು ಅರ್ಜಿಗಳನ್ನು ಹಾಕಿದ ರೈತರಿಗೆ ಶೀಘ್ರವೇ ಭೂ ಮಂಜೂರಾತಿ ಆದೇಶ ಹಾಗೂ ಹಕ್ಕುಪತ್ರ ನೀಡಬೇಕು. ಭೂ ಕಬಳಿಕೆ ತಡೆ ಕಾಯ್ದೆ ಹೆಸರಿನಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು. ಪ್ರತಿ ಗ್ರಾಮವಾರು ಸರ್ವೆ ನಡೆಸಿ, ಮನೆ, ನಿವೇಶನ ಹಾಗೂ ಭೂಮಿ ಇಲ್ಲದವರಿಗೆ ನಿವೇಶನ, ಭೂಮಿ ಹಂಚಬೇಕು. ಫಾರಂ ನಂ.೫೭ ಪುನಃ ಅರ್ಜಿ ಹಾಕಲು ಅವಕಾಶ ಒದಗಿಸಬೇಕು. ಉದ್ಯೋಗ ಖಾತರಿ ೨೦೦ ದಿನಗಳ ಕೆಲಸ ನೀಡಿ, ೬೦೦ ಕೂಲಿ ಹೆಚ್ಚಿಸಿ,ಉದ್ಯೋಗ ಇಲ್ಲದವರಿಗೆ ನಿರುದ್ಯೋಗ ಭತ್ಯೆ ನೀಡಬೇಕು. ವೃದ್ಧಾಪ್ಯ ವೇತನ ೨೦೦೦ ಮತ್ತು ಅಂಗವಿಕಲರಿಗೆ ೩೦೦೦,ವಿದೇವೆ ೨೦೦೦ ವೇತನ ಹೆಚ್ಚಿಸಬೇಕು.ಹೇಳಿದರು
ಈ ಸಂದರ್ಭದಲ್ಲಿ ಎಂ.ಬಿ.ಹಾಲಯ್ಯ , ಎಚ್ ಪರಸಪ್ಪ, ಅಜ್ಜಪ್ಪ, ಬಾಲಗಂಗಾಧರ್, ಸಂತೋಷ್ ವೀರಭದ್ರಯ್ಯ , ಉದಯ್ ಗೌಡ್ರು, ಇಬ್ರಾಮ್ ಸಾಬ್, ಸಿದ್ದಲಿಂಗಪ್ಪ,ಪೂಜಾರ್, ನಾಗರಾಜ್ರು, ಜಾರ್ ಲಕ್ಷö್ಮಣ್, ಬೂದಿಹಾಳ್, ಕಾಳಪ್ಪ , ಸಂದೇರ್ ಪರಶುರಾಮ್ ಮನವಿ ಪತ್ರ ಸಲ್ಲಿಕೆಯಲ್ಲಿ ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ