ಭಾಷಾ ತರಬೇತಿ ಕಾರ್ಯಕ್ರಮ
ಬೆಳಗಾವಿ : ಜಿಲ್ಲಾ ಪಂಚಾಯತ್ ಬೆಳಗಾವಿ ಶಾಲಾ ಶಿಕ್ಷಣ ವಿಭಾಗ ಹಾಗೂ ಸಿ.ಕೆ ಸಂಸ್ಥೆ ಮುಂಬೈ ಇವರುಗಳ ಸಂಯುಕ್ತ ಆಶ್ರಯದಲ್ಲಿ ಟೀಚರ್ ಇನ್ನೋವೇಟರ್ ಪ್ರೋಗ್ರಾಮ್ ದಡಿ 2024- 25 ನೇ ಸಾಲಿನ ಭಾಷಾ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಆಂಜನೇಯ, ಹಿರಿಯ ಉಪನ್ಯಾಸಕರು, ಡಯಟ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ
ಬಹಳಷ್ಟು ಸರ್ಕಾರೇತರ ಸಂಸ್ಥೆಗಳು ಸರ್ಕಾರಿ ಶಾಲೆಗಳೊಂದಿಗೆ ಕಾರ್ಯನಿರ್ವಹಿಸಲು ಮುಂದೆ ಬರುತ್ತಿದ್ದು ,ಅದರಲ್ಲಿ ಸಿ.ಕೆ ಸಂಸ್ಥೆಯು ಒಂದಾಗಿದ್ದು. ಸಿ.ಕೆ ಸಂಸ್ಥೆ ಅತ್ಯುತ್ತಮವಾದ ತರಬೇತಿಯನ್ನು ನೀಡುತ್ತಿದೆ. ಶಿಕ್ಷಕರೆಲ್ಲರೂ ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಶ್ರೀಮತಿ ಶಿಲ್ಪಾ ದೇಸಾಯಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಸದಾಶಿವ ಕಾಂಬ್ಳೆ ಡಿಸ್ಟಿಕ್ ಮ್ಯಾನೇಜರ್, ರೂಪ ತುಬಚಿ ಹಾಗೂ ಸರಿತಾ ಗೋವೇಕರ್, ಕೋಚ್ ಇವರುಗಳ ಆಯೋಗದೊಂದಿಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಐ.ಡಿ ಹಿರೇಮಠ, ಕ್ಷೇತ್ರ ಸಮನ್ವಯ ಅಧಿಕಾರಿಗಳು, ಬೆಳಗಾವಿ ನಗರ ವಲಯ ಶ್ರೀಮತಿ ಲಲಿತ ಕ್ಯಾಸನವರ್,ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳು, ನಗರ ವಲಯ, ಜಯಕುಮಾರ ಹೆಬ್ಬಳಿ, ಅಧ್ಯಕ್ಷರು, ಜಿಲ್ಲಾ ಶಿಕ್ಷಕ ಸಂಘ,ಬೆಳಗಾವಿ ಹಾಗೂ ವರ್ಷಾ ಪಾರ್ಚೂರೆ, ನ್ಯಾಷನಲ್ ಪ್ರೋಗ್ರಾಮ್ ಕೋ ಆಡಿನೇಟರ್ ಸಿ.ಕೆ ಸಂಸ್ಥೆ ಮುಂಬೈ ಮುಂತಾದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ