ಉಟಕನೂರು ಶ್ರೀ ಬಸವಲಿಂಗೇಶ್ವರ ಜಾತ್ರಾ ಮಹೋತ್ಸವ
ಮಸ್ಕಿ : ತಾಲೂಕಿನ ಹಾಲಾಪೂರ ಗ್ರಾಮದಲ್ಲಿ ಇರುವ ಉಟಕನೂರು ಶ್ರೀ ಬಸವಲಿಂಗೇಶ್ವರ ಜಾತ್ರಾ ಮಹೋತ್ಸವು ಜರುಗಿತು.
ಬೆಳಿಗ್ಗೆ ಉಟಕನೂರು ಶ್ರೀ ಬಸವಲಿಂಗೇಶ್ವರ ಗದ್ದುಗೆಗೆ ರುದ್ರಾಭೀಷೇಕ,ದೇವರ ಪಠಣ ಸಹಿತ ಪಂಚಾಮೃತ ಅಭಿಷೇಕ ಶಿವಶತನಾಮವಳಿ ಮೂಲಕ ತಾತನ ಗದ್ದುಗೆಗೆ ಅಭಿಷೇಕ ಪೂಜೆಯನ್ನು ಶ್ರೀ ಬಸವರಾಜಸ್ವಾಮಿ ಕಾಳಹಸ್ತಿಮಠ ನೆರವೇರಿಸಿದರು. ತದನಂತರ ಶ್ರೀ ಬಸವಲಿಂಗೇಶ್ವರರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇಟ್ಟು ಡೊಳ್ಳು, ಬಾಜಿ ಕುಂಭ, ಕಳಸ ಮುಖಾಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವವು ಶ್ರೀ ಬಸವಲಿಂಗೇಶ್ವರ ತಾತನವರ ಘೊಷಣಿಯನ್ನು ಭಕ್ತಿ ಭಾವದೊಂದಿಗೆ ಅತ್ಯಂತ ವಿಜೃಂಭಣೆಯಿಂದ ಜರುಗಿತು. ನಂತರ ಜರುಗಿದ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಉಟಕನೂರು ಶ್ರೀ ಮರಿ ಬಸವಲಿಂಗೇಶ್ವರ ತಾತನವರು ಹಾಗೂ ಜಂಗಮರಹಳ್ಳಿ ಸುಕ್ಷೇತ್ರದ ಪೂಜ್ಯರಾದ ಶ್ರೀ ದಂಡಗುಂಡಪ್ಪ ತಾತನವರು, ದೇವಸ್ಥಾನದ ಅರ್ಚಕರಾದ ಶ್ರೀ ಆದಯ್ಯಸ್ವಾಮಿ ಹಾಗೂ ಊರಿನ ಗುರುಹಿರಿಯರು,ತಾಯಂದಿರು ಉಪಸ್ಥಿತಿ ಇದ್ದರು ನಂತರ ಜಾತ್ರೆಗೆ ಬಂದಂತ ಸರ್ವ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ