*ಕಾಯಕ ನಿಷ್ಠೆಯೇ ಮೇಲು ಎಂದು ಸಾರಿದವರು ನುಲಿಯ ಚಂದಯ್ಯ : ಕೆ ಕೊಟ್ರೇಶ್ *
"ನುಲಿಯ ಚಂದಯ್ಯ ಕಲ್ಯಾಣ ನಾಡಿನ ಶ್ರೇಷ್ಠ ಶರಣ"
ಕೊಟ್ಟೂರು : ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಸೋಮವಾರ ರಂದು ನಡೆದ 917ನೇ ನುಲಿಯ ಚಂದಯ್ಯ ಜಯಂತಿಯನ್ನು ಆಚರಿಸಲಾಯಿತು.
ಸಮಾಜದ ಮುಖಂಡರಾದ ಅಖಿಲ ಕರ್ನಾಟಕ ಕುಳವ ಮಹಾ ಸಂಘದ ರಾಜ್ಯ ಉಪ ಕಾರ್ಯದರ್ಶಿ ಕೆ.ಕೊಟ್ರೇಶ್ ಅವರು ಮಾತನಾಡಿ ಹನ್ನೆರಡನೇ ಶತಮಾನದಲ್ಲಿ ಕಾಯಕಕ್ಕೆ ಒತ್ತು ನೀಡುವ ಮೂಲಕ ಕೊರಚ, ಕೊರವ ಕೊರಮ ಸಮುದಾಯದ ಸಾಂಸ್ಕೃತಿಕ ಪ್ರತಿನಿಧಿಯಾಗಿ ಕಾಯಕದ ಮಹತ್ವವನ್ನು ಸಾರಿದ ನುಲಿಯ ಚಂದಯ್ಯನವರು ಕಾಯಕದಲ್ಲಿಯೇ ದೇವರನ್ನು ಕಂಡ ಮಹಾಶರಣರು
ಕಲ್ಯಾಣ ನಾಡಿನ ಶ್ರೇಷ್ಠ ಶರಣ, ಅನುಭಾವಿ, ವಚನಕಾರ ನುಲಿಯ ಚಂದಯ್ಯನವರು ಕಾಯಕ ನಿಷ್ಠೆ ಶಿವನಿಗೆ ಅರ್ಪಿತವಾಗುತ್ತದೆ ಎಂದು ಅಚಲವಾಗಿ ನಂಬಿ ಅದರಂತೆ ನಡೆದರು. ಪೂಜೆ, ಪುನಸ್ಕಾರಗಳಿಗಿಂತ ಕಾಯಕ ನಿಷ್ಠೆಯೇ ಮೇಲು ಎಂದು ಸಾರಿದವರು. ಅಂತಹ ಮಹಾನ್ ಶರಣರ ಮೌಲ್ಯಗಳನ್ನು ಜೀವನ ದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ನಂತರ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎ ನಸ್ರುಲ್ಲಾ ಅವರು ಮಾತನಾಡಿ ನುಲಿಯ ಚಂದಯ್ಯ 12ನೇ ಶತನಮಾನದ ದಾರ್ಶನಿಕ, ಬಸವಾದಿ ಶರಣ ಸಮೂಹದ ವಚನಕಾರನಾಗಿದ್ದು, ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆಗೆ ಅತ್ಯುನ್ನತ ಕೊಡುಗೆ ನೀಡಿದ್ದಾರೆ .ಎಂದರು
ಈ ಕಾರ್ಯಕ್ರಮದಲ್ಲಿ ತಾಲೂಕು ಕುಳವ ಸಮಾಜದ ಅಧ್ಯಕ್ಷರಾದ ಮಂಜುನಾಥ ಭಜಂತ್ರಿ, ಪಕ್ಕೀರಪ್ಪ ಮುಖಂಡರು, ಭತ್ತನಹಳ್ಳಿ ದುಗ್ಗಪ್ಪ, ದ್ಯಾಮಪ್ಪ, ಪರಶುರಾಮ್,ನಾಗರಾಜ , ತಾಲೂಕು ಉಪಾಧ್ಯಕ್ಷ ಕಾಂತಪ್ಪ,ಆರುಬಳ್ಳು ಕೊಟ್ರೇಶ್, ಈಶ್ವರ,ಗಾಳೇಪ್ಪ,ಗಜಾಪುರ ಮಲ್ಲಿಕಾರ್ಜುನ್, ಉಜ್ಜಿನಿ ಹನುಮಂತಪ್ಪ,ಮುಂತಾದವರು ಹಾಜರಿದ್ದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಭಾವಿಕಟ್ಟಿ ಶಿವನಾಂದ,ಪಟ್ಟಣ ಪಂಚಾಯಿತಿ ಇಂಜಿನಿಯರ್ ಬಿರಾದಾರ್ ,ಅನುಷಾ ಆರ್ ಐ ಕೊಟ್ರೇಶ್, , ಪರಶುರಾಮ್,ಮಂಜುನಾಥ,ವಿಜ್ಜಣ್ಣಇತರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ