ಕೊಟ್ಟೂರು ದಿನಾಂಕ: 19.08.2024 :- ಪೂಜೆಗಿಂತ ಕಾಯಕ ಶ್ರೇಷ್ಠ – ಅಮರೇಶ್ ಜಿ ಕೆ
ಕೊಟ್ಟೂರು: ಕಲ್ಯಾಣದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಶರಣ ಚಳುವಳಿಯಲ್ಲಿ ಅನೇಕ ಕೆಳಸಮುದಾಯದವರು ತಮ್ಮ ಕಾಯಕ ಮತ್ತು ನಿಷ್ಠೆಯಿಂದ ಶರಣಾಗಿ ಇಂದಿಗೂ ಜನರ ಮನದಲ್ಲಿ ಉಳಿದಿದ್ದಾರೆ. ಅಂತಹ ಶರಣದಲ್ಲಿ ನುಲಿಯ ಚಂದಯ್ಯನವರು ಸಹಾ ಒಬ್ಬರು. ಕಲ್ಯಾಣ ರಾಜ್ಯದ ಹೊರವಲಯದ ಕೆರೆಯ ಹಿನ್ನೀರ ದಡದಲ್ಲಿ ಬೆಳೆದ ಸೊಗಸಾದ ಹುಲ್ಲನ್ನು ತಂದು ರೈತರಿಗೆ ಬೇಕಾದ ಹಗ್ಗ, ಮಿಣಿ, ಕುಕ್ಕಿ ಮುಂತಾದವುಗಳನ್ನು ಮಾರಿ ಬಂದ ಹಣದಲ್ಲಿ ದಾಸೋಹ ಮಾಡಿ ಜೀವಿಸುತ್ತಿದ್ದರು. ಅವರು ಲಿಂಗ ಪೂಜೆಗಿಂತ ಕಾಯದ ಶ್ರೇಷ್ಠ, ಕಾಯಕದಲ್ಲಿ ಸಮನಾದ ಕೂಲಿಯನ್ನು ಪಡೆಯಬೇಕಲ್ಲದೇ ದುರಾಶೆ ಪಡಬಾರದು ಎನ್ನುವ ಸಂದೇಶವನ್ನು ಈ ಸಮಾಜಕ್ಕೆ ನೀಡಿದ್ದಾರೆ. ಅವರ ಈ ಸಂದೇಶವನ್ನು ಸ್ಮರಿಸಿಕೊಂಡು ಜೀವಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಾಲೂಕ ಕಛೇರಿಯಲ್ಲಿ ನಡೆದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಸ್ಮರಿಸಿಕೊಂಡರು.
ನುಲಿಯ ಚಂದಯ್ಯ ಹುಲ್ಲು ಕೊಯ್ಯುವ ಸಮಯದಲ್ಲಿ ಕೊರಳಲ್ಲಿನ ಲಿಂಗ ಜಾರಿ ನೀರಿಗ ಬಿದ್ದುಹೋಗುತ್ತದೆ. ಇದನ್ನು ಗಮನಿಸದೇ ಹುಲ್ಲಿನ ಹೊರೆಯನ್ನು ಹೊತ್ತು ಹೋಗುತ್ತಾನೆ. ಚಂದಯ್ಯನ ಭಕ್ತಿಯನ್ನು ಕಂಡಿದ ಲಿಂಗಯ್ಯನು ಹಿಂದೆಯೇ ಹೋಗುತ್ತಾನೆ. ಅದರೆ ಚಂದಯ್ಯನು ನಾನು ನಿನ್ನನ್ನು ಬಿಟ್ಟಿಲ್ಲ, ನೀನೇ ಹೋಗಿದ್ದೀಯ ಎಂದು ಹಟಹಿಡಿಯುತ್ತಾರೆ. ಕೊನೆಗೆ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಡಿವಾಳ ಮಾಚಿದೇವರ ಮಧ್ಯಸ್ಥಿಕೆಯಲ್ಲಿ ಪುನ: ಲಿಂಗವನ್ನು ಧರಿಸುತ್ತಾರೆ. ಹೀಗೆ ಚಂದಯ್ಯನವರ ಕಾಯಕ ನಿಷ್ಠೆಯನ್ನು ಕಾಣಬಹುದು ಎಂದು ಅಖಿಲ ಕರ್ನಾಟಕ ಕುಳವ ಮಹಾ ಸಂಘದ ರಾಜ್ಯ ಉಪ ಕಾರ್ಯದರ್ಶಿ ಕೆ.ಕೊಟ್ರೇಶ್ ಚಂದಯ್ಯನ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕು ಕುಳವ ಸಮಾಜದ ಅಧ್ಯಕ್ಷರಾದ ಮಂಜುನಾಥ ಭಜಂತ್ರಿ, ಪಕ್ಕೀರಪ್ಪ ಮುಖಂಡರು, ಭತ್ತನಹಳ್ಳಿ ದುಗ್ಗಪ್ಪ, ಪರಶುರಾಮ್,ನಾಗರಾಜ , ತಾಲೂಕು ಉಪಾಧ್ಯಕ್ಷ ಕಾಂತಪ್ಪ,ಆರುಬಳ್ಳು ಕೊಟ್ರೇಶ್, ಈಶ್ವರ,ಗಾಳೇಪ್ಪ,ಗಜಾಪುರ ಮಲ್ಲಿಕಾರ್ಜುನ್, ಉಜ್ಜಿನಿ ಹನುಮಂತಪ್ಪ,ಮುಂತಾದವರು ಹಾಜರಿದ್ದರು. ಉಪತಹಶೀಲ್ದಾರ್ ಅನ್ನದಾನೇಶ ಬಿ ಪತ್ತಾರ, ಹಾಲಸ್ವಾಮಿ ಕಂದಾಯ ನಿರೀಕ್ಷಕರು ಮಂಗಳ ಅರಮನೆ, ಸುಧಾ ಜೈನರ್, ಬಿ ಮಂಜುನಾಥ ಆಹಾರ ನಿರೀಕ್ಷಕರು ಹಾಗೂ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು. ಸಿ.ಮ.ಗುರುಬಸವರಾಜ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ