ತಾಲ್ಲೂಕಿನ ವಿವಿಧಡೆ ಸ್ವಾತಂತ್ರ್ಯ ದಿನಾಚರಣೆ
ಮಸ್ಕಿ : ಭಾತೃತ್ವ ಸಮಾಜ ನಿರ್ಮಾಣ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಹಶೀಲ್ದಾರರಾದ ಡಾ.ಮಲ್ಲಪ್ಪ ಕೆ.ಯರಗೋಳ ತಿಳಿಸಿದರು.
ಪಟ್ಟಣದ ಕೇಂದ್ರ ಶಾಲೆಯಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ನಂತರ ಮಾತನಾಡಿ ಭಾರತ ಹೆಮ್ಮೆಯ ರಾಷ್ಟ್ರ. ಕುವೆಂಪು ರವರ ಕವಿತೆಗಳು ದೇಶವನ್ನು ವರ್ಣಿಸಿವೆ. ಅಂಬೇಡ್ಕರ್ ಸಂವಿಧಾನದ ಮೂಲಕ ತಳಮಟ್ಟದವರನ್ನು ಮೇಲೆತ್ತುವ ಕಲ್ಯಾಣ ಕಾರ್ಯ ನೆರವೇರಿಸಿದರು. ಮಕ್ಕಳಲ್ಲಿ ದೇಶಪ್ರೇಮ ಮೂಡಿಸಬೇಕು’ಧರ್ಮ,ಜಾತಿ,ಬಡವ ಮತ್ತು ಶ್ರೀಮಂತ ಎಂಬ ಭೇದ ಭಾವ ಮರೆತು ನಾವೆಲ್ಲರೂ ಒಂದೇ ಎಂಬ ಭತೃತ್ವ ಭಾವದಿಂದ ಬದುಕಬೇಕು
ಎಂದು ಹೇಳಿದರು. ನಂತರ ವಿವಿಧ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಮಸ್ಕಿ ಪತ್ರಕರ್ತರ ಸಂಘದ ಸದಸ್ಯ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತರು ಆದ ವಿಠ್ಠಲ್ ಕೆಳೂತ್ ಅವರನ್ನು ತಾಲೂಕ ಆಡಳಿತದ ವತಿಯಿಂದ ಸನ್ಮಾನಿಸಲಾಯಿತು.
ತಾಲ್ಲೂಕ ಪಂಚಾಯತಿ ಕಾರ್ಯಾಲಯ,ಪುರಸಭೆ, ಕೆ.ಇ.ಬಿ.ಕಾರ್ಯಾಲಯ,ರೈತ ಸಂಪರ್ಕ ಕೇಂದ್ರ ಹಾಗೂ ತಾಲ್ಲೂಕಿನ ಅಡವಿಬಾವಿ ತಾಂಡ ವಸತಿ ಶಾಲೆ,ಸೇರಿದಂತೆ ಮೊರಾರ್ಜಿ ವಸತಿ ಶಾಲೆ ನಿಲಯಗಳು,ಪ್ರಾಥಮಿಕ ಆರೋಗ್ಯ ಕೇಂದ್ರ,ಶಾಸಕರ ಕಾರಾಯಲ್ಲಯ,ಸರ್ಕಾರಿ ಪಬ್ಲಿಕ್ ಶಾಲೆ,
ಸರಕಾರಿ ಪ್ರಥಮ ದರ್ಜೆ ಕಾಲೇಜ ,ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸನ್ ರೈಸ್ ಮಹಿಳಾ ಪದವಿ ಮಹಾವಿದ್ಯಾಲಯ ಕಿತ್ತೂರು ರಾಣಿ ಚೆನ್ನಮ್ಮ ಪದವಿ ಪೂರ್ವ ಕಾಲೇಜ್
ಸೇರಿದಂತೆ ತಾಲ್ಲೂಕಿನ ವಿವಿಧಡೆ ಪೋಲಿಸ್ ಇಲಾಖೆಯ ಸಹಕಾರ ಬಂದೋಬಸ್ತ್ ನಡುವೆ ಶಾಂತಿಯುತವಾಗಿ ಸ್ವಾತಂತ್ರ್ಯ ದಿನ ಆಚರಣೆ ಮಾಡಲಾಯಿತು.
*ಬಾಕ್ಸ್*
ಪಟ್ಟಣದ ಸರಕಾರಿ ಧನಗರವಾಡಿ ಪ್ರಾಥಮಿಕ ಶಾಲೆ ಯಲ್ಲಿ ಬಾವುಟವನ್ನು ಏರಿಸುವಾಗ ಬಾವುಟವು ಉಲ್ಟಾ ಏರಿಸಿ ನಂತರ ಕಟ್ ಆಗಿ ಕೆಳಗೆ ಬಿದ್ದು ಗೊಂದಲ ಉಂಟು ಆಯಿತು ನಂತರ ಪುನಃ ಸರಿ ಪಡಿಸಿ ಧ್ವಜವನ್ನು ಏರಿಸಲಾಯಿತು.
ಹಾಗೆಯೇ ಸಹಕಾರಿ ಕ್ಷೇತ್ರದ ಎಚ್ ಡಿ ಎಫ್ ಸಿ ಶಾಖೆ ಮಸ್ಕಿ ನಲ್ಲಿಯೂ ಇಡೀ ದೇಶವೇ 78 ನೇ ಸ್ವಾತಂತ್ರ್ಯ ದಿನಾಚರಣೆ ಮಾಡಿದರೇ ಇವರು ಮಾತ್ರ ಧ್ವಜಾರೋಹಣ ಮಾಡದೇ ಸರಕಾರದ ಆದೇಶ ಉಲ್ಲಂಘಿಸಿ ಭಾರತ ದೇಶಕ್ಕೆ ಅಪಮಾನ ಮಾಡಿರುವ ಘಟನೆ ಜರುಗಿದೆ.
ಕೇಂದ್ರ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಿಗದಿಪಡಿಸಿದ ಆಸನಗಳ ವರೆತುಪಡಿಸಿ ಆದನಗೌಡ ಗ್ರಾಮ ಪಂಚಾಯ್ತಿ ಸದಸ್ಯರು ಸಂತೆಕೆಲ್ಲೂರು ಇವರು ಕಾರ್ಯಕ್ರಮದ ಆರಂಭದಿಂದ ಮುಗಿಯುವ ವರೆಗೆ ಇವರು ವೇದಿಕೆಯ ಮೇಲೆ ಕುಳಿತುಕೊಳ್ಳುವ ಮೂಲಕ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ