ಮಾದಿಗರ ರಕ್ಷಣಾ ವೇದಿಕೆಯ ಜಿಲ್ಲಾ ಕಮಿಟಿ ರಚನೆ : ಗುಡಿಮನಿ

 

 ವರದಿ - ಮಂಜುನಾಥ ಕೋಳೂರ ಕೊಪ್ಪಳ 

ಕೊಪ್ಪಳ : - ನಗರದ ತಾಲೂಕು ಪಂಚಾಯಿತಿ ಅವರಣದಲ್ಲಿರುವ ಸಭಾಂಗಣದಲ್ಲಿ ದಿ.31 ಆಗಸ್ಟ್ ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ (ಕೆ.ಎಂ.ಆರ್.ಎ) ಜಿಲ್ಲಾ ಕಮಿಟಿ ರಚಿಸಲಾಗುವುದು ಎಂದು ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಕರಿಯಪ್ಪ ಗುಡಿಮನಿ ಹೇಳಿದರು.

ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ, ಉದ್ದೇಶಿಸಿ ಮಾತನಾಡಿ ಸಂಘಟನೆಗೆ ಸೇರಬಯಸುವವರು ವೇದಿಕೆ ಸ್ವಾಭಿಮಾನ-ಸ್ವಾತಂತ್ರ್ಯ-ಸಮಾನತೆ ಸಿದ್ದಾಂತ ಬದ್ಧತೆಯಲ್ಲಿ ನಂಬಿಕೆ ಇರುವವರು ರಾಜಿ ರಹಿತ ರಾಜಕೀಯ ರಹಿತ ಅಳವಡಿಸಿಕೊಂಡು ನೋವುಂಡ ಜನರನ್ನು ಸಂಘಟಿಸಲು ಸದಸ್ಯರಾಗಬಹುದು. ಇಡೀ ಕೊಪ್ಪಳ ಜಿಲ್ಲೆಯಲ್ಲಿ ಅಸ್ಪೃಶ್ಯತೆ ತಾಂಡವಾಡುತ್ತಿದ್ದು ಮೂರು ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಗ್ರಾಮಗಳಲ್ಲಿ ಶೋಸಿತ ಮಾದಿಗರ ಸಮುದಾಯದ ಮೇಲೆ ಜಾತಿಯತೇಯಿಂದ ಹಲ್ಲೆಯಾಗಿರುವುದು ಜಿಲ್ಲೆಯಲ್ಲಿ ఎల్లరిಗುಾ ಗೊತ್ತಿರುವ - ವಿಷಯವಾಗಿದೆ. ಇತ್ತೀಚಿನ ಕೆಲವು ದಿನಗಳ ಹಿಂದೆ ಯಲಬುರ್ಗಾ ತಾಲೂಕು ಸಂಗನಾಳ ಗ್ರಾಮದಲ್ಲಿ ಕಟ್ಟಿಂಗ್ ವಿಷಯಕ್ಕೆ ಅಸ್ಪೃಶ್ಯತೆ ಆಚರಣೆಯಿಂದ ಗ್ರಾಮದ ಯಮನೂರಪ್ಪ ಹತ್ಯೆಯಾಗಿರುವುದು ಖಂಡಿಸುತ್ತಾ ಅಸ್ಪೃಶ್ಯತೆ ನಾಶಕ್ಕಾಗಿ ಸೌಹಾರ್ಧತೆ ನಿರ್ಮಾಣಕ್ಕಾಗಿ ಅಭಿಯಾನ ಸಾರಬೇಕಾಗಿದೆ.ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಬೇಕಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಿಂದಲೇ ಅಸ್ಪೃಶ್ಯತೆ ನಾಶಮಾಡೋಣ ಸಮಾನತೆಗಾಗಿ ಕೈ ಜೋಡಿಸೋಣ ಅನ್ನುವ ಮೂಲಕ ಕಹಳೆ ಊದಿಸೋಣ. ನಮ್ಮ ಜೊತೆಗೆ ಎಲ್ಲರೂ ಕೈ ಜೋಡಿಸಬೆಕೆಂದು ಮನವಿ ಮಾಡಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮುದುಕಪ್ಪ ಹೊಸಮನಿ,ವಿರುಪಾಕ್ಷಪ್ಪ ಎಡೆಯಾಪುರ,ಹುಲುಗಪ್ಪ ಹ್ಯಾಟಿ,ಯಮನೂರಪ್ಪ ಮುದ್ದಾಬಳ್ಳಿ, ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ