ಕಂದಗಲ್ಲು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಬೇಕಿದೆ ಉಪನ್ಯಾಸಕ ಕೊರತೆ ವಿದ್ಯಾರ್ಥಿಗಳ ಪರಿಸ್ಥಿತಿ ಅತಂತ್ರ
ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ ವಿದ್ಯಾರ್ಥಿಗಳು ಟಾರ್ಗೆಟ್....?
ಸರ್ಕಾರದ ವಸತಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಇದಿಯಾ..!
ಕೊಟ್ಟೂರು ತಾಲ್ಲೂಕು ಕಂದಗಲ್ಲು ಗ್ರಾಮದ ಹತ್ತಿರವಿರುವ ಸಮಾಜ ಕಲ್ಯಾಣ ಇಲಾಖಾ ವತಿಯಿಂದ ನಡೆಯುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪಿ.ಯು. ವಿಭಾಗಕ್ಕೆ ಉಪನ್ಯಾಸಕರಿಲ್ಲದೇ ವಿದ್ಯಾರ್ಥಿಗಳು ಪರಿತಪಿಸುತ್ತಿದ್ದಾರೆ. ಶಿಕ್ಷಣದಲ್ಲಿ ಪದವಿ ಪೂರ್ವ ಘಟ್ಟ ಬಹು ಮಹತ್ವದ್ದು. ಈ ಘಟ್ಟದಲ್ಲಿಯೇ ವಿದ್ಯಾರ್ಥಿಗಳ ಮುಂದಿನ ಬದುಕು ನಿರ್ಧಾರವಾಗುವುದು. ಆದರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪಿ.ಯು. ವಿಭಾಗಕ್ಕೆ ಉಪನ್ಯಾಸಕರ ಕೊರತೆ ಎದ್ದು ಕಾಣುತ್ತಿದೆ. ಅತಿಥಿ ಉಪನ್ಯಾಸಕರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡಲಾಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಪ್ರಪ್ರಥಮವಾಗಿ ಬೇಕಾಗಿರುವುದು ನುರಿತ ಪ್ರತಿಭಾವಂತ ಉಪನ್ಯಾಸಕರು. ಆದರೆ ನುರಿತ ಖಾಯಂ ಉಪನ್ಯಾಸಕರಿಲ್ಲದೇ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದಾದ ಲಕ್ಷಣಗಳು ಎದ್ದು ಕಾಣುತ್ತಿವೆ. ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಮಾಣ ಮಾಡುತ್ತಿರುವ ವಿದ್ಯಾಸಂಸ್ಥೆಗಳಿಗೆ ಉಪನ್ಯಾಸಕರಿಲ್ಲದೇ, ವಿದ್ಯಾರ್ಥಿಗಳು ಕಲಿಯುವುದೆಂತು? ಗ್ರಾಮೀಣ ಬಡ ವಿದ್ಯಾರ್ಥಿಗಳು ವಸತಿ ಶಾಲೆಗೆ ಬರುತ್ತಿರುವುದರಿಂದ ಅವರಿಗೆ ಹೊರಗಡೆ ಟ್ಯೂಷನ್ ಹೋಗಲು ಸಾಧ್ಯವಾಗುವುದಿಲ್ಲ. ಹೊರಗೆ ಟ್ಯೂಷನ್ ಹೋಗಲು ಆರ್ಥಿಕ ತೊಂದರೆಗಳು ಒಂದು ಕಡೆಯಾದರೆ, ಗ್ರಾಮೀಣ ಭಾಗದಲ್ಲಿ ಟ್ಯೂಷನ್ ನಡೆಸುವಂತಹ ಗೋಜಿಗೆ ಯಾವ ಉಪನ್ಯಾಸಕರೂ ಹೋಗಲಾರರು. ಇದರಿಂದ ನಷ್ಟವುಂಟಾಗುವುದು ವಿದ್ಯಾರ್ಥಿಗಳಿಗೆ. ಹೈದ್ರಾಬಾದ್ ಕರ್ನಾಟಕದ ಈ ಭಾಗ ಶೈಕ್ಷಣಿಕವಾಗಿ ಹಿಂದುಳಿಯಲು ಉಪನ್ಯಾಸಕರ ಕೊರತೆಯೂ ಕಾರಣವಾಗಿದೆ. ನಾಡಿನ ಜನರ ಬದುಕನ್ನು ಹಸನು ಮಾಡಲು ಭಾಗ್ಯಗಳನ್ನು ನೀಡಿರುವ ಸಿದ್ಧರಾಮಯ್ಯನವರ ಕಾಂಗ್ರೆಸ್ ಸರ್ಕಾರ ವಸತಿ ಶಾಲೆಗಳಿಗೆ ಉಪನ್ಯಾಸಕರ ಭಾಗ್ಯವನ್ನು ಕರುಣಿಸಿ ಈ ಭಾಗದ ಬಡ ಹಿಂದುಳಿದ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯವನ್ನು ಹಸನು ಮಾಡಲು ಕ್ರಮ ವಹಿಸಿದರೆ ವಿದ್ಯಾರ್ಥಿಗಳ ಬದುಕಲ್ಲಿ ಹೊಸ ಚೈತನ್ಯವನ್ನು ತುಂಬಿದಂತಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಮತ್ತು ಸಂಬಂಧಪಟ್ಟ ಕಂದಗಲ್ಲು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರು ನಿರ್ಲಕ್ಷದ ಉತ್ತರ , ವಿಜಯನಗರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಸಮಸ್ಯೆ ಬಗ್ಗೆ ದೂರವಾಣಿ ಸಂಪರ್ಕಿಸಿದರೆ ಯಾವುದೇ ಪ್ರತಿಕ್ರಿಯೆ ಇಲ್ಲ ,ಡಿ ಎಸ್ ಎಸ್ ತಾಲೂಕು ಅಧ್ಯಕ್ಷ ಪಿ ಚಂದ್ರಶೇಖರ್, ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
ಕೊಟ್ -1
ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಮಕ್ಕಳ ಭವಿಷ್ಯ ಈ ಹಾಳಾಗುತ್ತಿದೆ. ಪ್ರಾಂಶುಪಾಲರು ಮತ್ತು ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಕ್ಕಳು ಮತ್ತು ಪಾಲಕರು ಪ್ರಕಾಶ್, ಒತ್ತಾಯ ಕೇಳಿಬರುತ್ತಿದೆ.
ಕೊಟ್ -2
ಇಲ್ಲಿಯ ವಸತಿ ಶಾಲೆಯಲ್ಲಿ ಈ ಹಿಂದೆ ಮಕ್ಕಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಅಂತಹ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಏನಾದರೂ ತಪ್ಪು ಹೊರಿಸಿ ಅವರನ್ನು ಶಾಲೆ, ಕಾಲೇಜಿನಿಂದ ಹೊರಗಿಡುವ, ಅವರ ಬಾಯಿ ಮುಚ್ಚಿಸುವಂತ ವ್ಯವಸ್ಥಿತ ಸಂಚು ನಡೆದುಕೊಂಡು ಬಂದಿದೆ ಎನ್ನುವ ಆರೋಪವೂ ಇದೆ. ಯಾವ ವಿದ್ಯಾರ್ಥಿಗಳೂ ಈ ಬಗ್ಗೆ ಹೊರಗೆ ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ ಎನ್ನುತ್ತಾರೆ.? ಸ್ಥಳೀಯರಾದ ಕೆ ರೇಣುಕಮ್ಮ ಗಜಾಪುರ ಹೇಳಿದರು

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ