ಹಿರೇನಗನೂರು ಪ್ರೌಢಶಾಲೆಯಲ್ಲಿ 78ನೇ ಸ್ವಾತಂತ್ರ ದಿನಾಚರಣೆ

 

ಲಿಂಗಸುಗೂರು ತಾಲೂಕಿನ ಹಿರೇನಗನೂರು ಸರಕಾರಿ ಪ್ರೌಢಶಾಲೆಯಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ವಂದೇ ಮಾತರಂ ಗೀತೆ ಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮ ಮುಖ್ಯಗುರುಗಳಾದ ವಿಜಯಲಕ್ಷ್ಮೀ ಹಿರೇಮಠ ರವರು ಹಾಗೂ ದೈ.ಶಿ ಮುಸ್ತಾಖ್ ಅಹ್ಮದ್ ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರಾದ ಚಿನ್ನಪ್ಪ ಕೊಟ್ರಿಕಿಯವರು ಧ್ವಜಾರೋಹಣ ಕಾರ್ಯಕ್ರಮ ನೇರವೇರಿಸಿದರು.

ವಿಧ್ಯಾರ್ಥಿಗಳಿಂದ ರಾಷ್ಟ್ರಗೀತೆ ಮತ್ತು ಧ್ವಜಗೀತೆ ಮೊಳಗಿದವು.ಶ್ರೀರವೀಂದ್ರಸ್ವಾಮಿ ಸ.ಶಿ.ಸ್ವಾಗತಿಸಿದರು.ನಂತರ ವಿದ್ಯಾರ್ಥಿಗಳಿಂದ ಪಥಸಂಚಲನ ಮತ್ತು ಗೌರವ ಸಮರ್ಪಣೆ ಜರುಗಿತು.

ನಂತರ ಪ್ರಾಸ್ತಾವಿಕ ಮಾತುಗಳನ್ನಾಡಿದ ಮುಖ್ಯಗುರುಗಳು ಸ್ವತಂತ್ರ ಭಾರತದ ಯಶೋಗಾಥೆಯನ್ನು ಮಕ್ಕಳಿಗೆ ವಿವರಿಸಿದರು. ಮತ್ತು ಶಾಲೆಯ ಶೈಕ್ಷಣಿಕ ಸಾಧನೆ ಕುರಿತು ಮಾಹಿತಿ ನೀಡಿದರು.ನಂತರ ಸುಮಾರು 15 ರಿಂದ 20 ವಿದ್ಯಾರ್ಥಿಗಳು ಕನ್ನಡ ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಸ್ವಾತಂತ್ರ್ಯದಿನದ ಕುರಿತು ಭಾಷಣಗಳನ್ನು ಮಂಡಿಸಿದರು.ಇದೇ ವೇಳೆ ಕಳೆದ ಸಾಲಿನಲ್ಲಿ ಶಾಲೆಗೆ ಹಾಗೂ ವಿಷಯವಾರು ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮು ಗು ಮತ್ತು ಸಹಶಿಕ್ಷಕರಿಂದ ಹಾಗೂ ಗ್ರಾಮದ ಹಿರಿಯರಾದ ಬಸವರಾಜ ಕುರುಗೋಡು ರವರಿಂದ ವಯಕ್ತಿಕವಾಗಿ ನಗದು ಬಹುಮಾನ ನೀಡಿದರು.

ಸುಶ್ರಾವ್ಯ ವಾಗಿ ದೇಶಭಕ್ತಿ ಹಾಡಿದ ವಿದ್ಯಾರ್ಥಿನಿ ಸಂಗೀತಾ ಗೆ ಸಮಾಜ ಸೇವಕರಾದ ಮೌನೂದ್ದೀನ್ ರವರು ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.

ನಂತರ ಬಸವರಾಜ ಕುರುಗೋಡು ರವರು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.ಇದೇ ವೇಳೆ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮೌನುದ್ದೀನ್ ಬೂದಿನಾಳ್ ರವರು ಬಹುಮಾನಗಳನ್ನು ನೀಡಿದರು.

ಕಳೆದ ವರ್ಷ ಘೋಷಿಸಿದ ಹಾಗೆ ಶರಣಪ್ಪ ಗುಂಡೂರು ರವರು ಶಾಲೆಗೆ ಸ್ಮಾರ್ಟ್ ಟಿವಿ ಕೊಡುಗೆ ನೀಡಿದರು.ಅದೇ ರೀತಿ ಮೌನುದ್ದೀನ್ ಬೂದಿನಾಳ್ ಇವರು ವೇದಿಕೆಯ ಸ್ಟಿಲ್ ಟೇಬಲ್ ಕೊಡುಗೆ ನೀಡಿದರು,ಅದೇ ರೀತಿ ಶಾಲೆಯ ಬೇಡಿಕೆ ರಂಗಮಂದಿರ ವನ್ನು ಹಿರಿಯರಾದ ಬಸವರಾಜ ಕುರುಗೋಡು ರವರು ಶಾಲೆಗೆ ಕಟ್ಟಿಸಿಕೊಡುವುದಾಗಿ ಒಪ್ಪಿಕೊಂಡರು. 

ನಂತರ ಎಸ್ ಡಿ ಎಂ ಸಿ ಅಧ್ಯಕ್ಷರಾದ ಚಿನ್ನಪ್ಪ ಕೊಟ್ರಿಕಿ ಮಾತನಾಡಿ ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದರು. ಶಿಕ್ಷಕರಾದ ಸುರೇಖಾ ಸಶಿ ರವೀಂದ್ರಸ್ವಾಮಿ ಸಶಿ ರಾಘವೇಂದ್ರ ಸಶಿ ಪವಿತ್ರಾ ಅಶಿ ಹನುಮಂತಿ ಅಶಿ ಹಾಗೂ

ಊರಿನ ಹಿರಿಯರಾದ ತಿಮ್ಮನಗೌಡ್ರು ಬಸವರಾಜ ಕುರುಗೋಡು ಮತ್ತು ಭೂದಾನಿಗಳಾದ ಬಸನಗೌಡ ಮಾಲಿ ಪಾಟೀಲ್,ಗ್ರಾಮ ಪಂಚಾಯತ ಸದಸ್ಯರು ಮತ್ತು ಎಸ್ ಡಿ ಎಂ ಸಿ ಸದಸ್ಯರು ಮತ್ತು ಇತರರು ಹಾಜರಿದ್ದರು

ದೈ ಶಿ ರಾದ ಮುಸ್ತಾಖ್ ಅಹ್ಮದ್ ರವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ ವಂದಿಸಿದರ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ