78ನೇ ಸ್ವಾತಂತ್ರ್ಯ ದಿನಾಚರಣೆ.ಹಿರೇನಗನೂರು ಸರಕಾರಿ ಶಾಲೆಯಲ್ಲಿ.ಎಲ್ ಕೆ ಜಿ. ಯು ಕೆ ಜಿ.ಮಕ್ಕಳಿಂದ ಛದ್ಮಾ ವೇಷ ಪ್ರದರ್ಶನ.

ಲಿಂಗಸಗೂರು:15 ಹಟ್ಟಿ ಚಿನ್ನದ ಗಣಿ ಸಮೀಪದ ಹಿರೇನಗನೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು 78ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವು ಬಹಳ ಅದ್ದೂರಿಯಿಂದ ನಡೆಯಿತು.

ಪ್ರತಿ ವರ್ಷವೂ ಅಗಸ್ಟ್ 15 ಬಂತೆಂದರೆ ಪುಟಾಣಿ ಮಕ್ಕಳಲ್ಲಿ ಎಲ್ಲಿಲ್ಲದ ಸಂತಸ ಸಡಗರದಿಂದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಮಕ್ಕಳಲ್ಲಿ ಸಂತೋಷ ಮನೆ ಮಾಡಿದಷ್ಟು ಖುಷಿ. ಬೆಳಗ್ಗೆ ಏಳು ಗಂಟೆಗೆ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಸೇರಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಪ್ರಭಾತ್ ಪೇರಿ ಮಾಡುತ್ತಾ ಸ್ವತಂತ್ರಹೋರಾಟಗಾರರ ಹೆಸರನ್ನು ಹೇಳಿ ಘೋಷಣೆ ಕೂಗುತ್ತಾ ಶಾಲಾ ಆವರಣದಲ್ಲಿ 8-15ಕ್ಕೆ ಗ್ರಾಮದ ಹಿರಿಯರು ಗ್ರಾಮ ಪಂಚಾಯತಿ ಸದಸ್ಯರು ಎಸ್ ಡಿ ಎಂ ಸಿ ಅಧ್ಯಕ್ಷರು.ಸದಸ್ಯರು. ಯುವ ನಾಯಕರು. ಹಾಗೂ ಸಮಾಜ ಸೇವಕರು.ಶಾಲೆಯ ಮುಖ್ಯೋಪಾಧ್ಯಾಯರು ಸಹ ಶಿಕ್ಷಕರು.ಹಾಗೂ ಶಾಲಾ ಮುದ್ದು ಮಕ್ಕಳ ಜೊತೆಗೂಡಿ ಧ್ವಜಾರಣ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿಸಿ ಕೊಟ್ಟರು.

ನಂತರ ಮುದ್ದು ಮಕ್ಕಳಿಂದ ರಾಷ್ಟ್ರಗೀತೆ ಹಾಗೂ ರಾಷ್ಟ್ರಧ್ವಜಕ್ಕೆ ಗೌರವ ನಮನ ಸಲ್ಲಿಸಲಾಯಿತು.

78ನೇ ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಹಿರಿಯರು ಹಾಗೂ ಶಿಕ್ಷಣ ಪ್ರೇಮಿಗಳಾದ ಬಸವರಾಜಪ್ಪ ಕುರುಗೋಡು.

78ನೆಯ ಸ್ವತಂತ್ರ ದಿನಾಚರಣೆ ಬಗ್ಗೆ ಮಾತನಾಡಿದರು.

ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಹೋಬಳಿ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.ಹಾಗೂ ಒಂದನೇ ತರಗತಿಯಿಂದ 8ನೇ ತರಗತಿಯ ಮಕ್ಕಳು ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ವಿಶೇಷವಾಗಿ ಇದೇ ವರ್ಷ ಪ್ರಾರಂಭವಾದ ಎಲ್ ಕೆಜಿ.ಯುಕೆಜಿ. ಮಕ್ಕಳಿಂದ 

ಛದ್ಮಾ ವೇಷ ಪ್ರದರ್ಶನ ಹಾಗೂ ನೃತ್ಯ ಮತ್ತು ಭಾಷಣವನ್ನು ತುಂಬಾ ಅಚ್ಚುಕಟ್ಟಾಗಿ ದರ್ಶನ ಮಾಡಿದ ಮಕ್ಕಳಿಗೆ ಗ್ರಾಮಸ್ಥರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಹಾಗೂ ದೈಹಿಕ ಶಿಕ್ಷಕಿಯಾದ ಶ್ರೀಮತಿ ಫಾತಿಮಾ ಮೇಡಂ ಅವರು ನೇತೃತ್ವದಲ್ಲಿ ಪಥ ಸಂಚಲನ ನೋಡುಗರ ಮನಸ್ಸನ್ನು ಮನಸೂರೆ ಗೊಳಿಸಿದವು.ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವನ್ನು ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಮಮತಾ ಹಾಗೂ ಸಹ ಶಿಕ್ಷಕರು78ನೇ ಸ್ವಾತಂತ್ರ್ಯ ಆಚರಣೆಯನ್ನು ಅಚ್ಚು ಕಟ್ಟಾಗಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ನಿರೂಪಣೆಯನ್ನು ಸಹ ಶಿಕ್ಷಕರಾದ ಬಸವರಾಜ್ ಸಾರ್ ನೆರವೇರಿಸಿ ಕೊಟ್ಟರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ