ತಿರ್ಥಭಾವಿ ಅಮರೇಶ್ವರ ಹೊಂಡದಲ್ಲಿ ಮಸ್ಕಿ ಮಲ್ಲಿಕಾರ್ಜುನ ದೇವರ ಪೂಜೆ
ಮಸ್ಕಿ: ಶ್ರಾವಣಮಾಸದ ನಾಲ್ಕನೇ ಸೋಮವಾರದ ಅಂಗವಾಗಿ ಪಟ್ಟಣದ ಆರಾಧ್ಯದೈವ ಐತಿಹಾಸಿಕ ಬೆಟ್ಟದ ಶ್ರೀಮಲ್ಲಿಕಾರ್ಜುನ ದೇವರ ವಿಶೇಷ ಪೂಜಾ ಹಾಗೂ ಪಲ್ಲಕ್ಕಿ ಮೆರವಣಿಗೆ ಪಾದಯಾತ್ರೆ ಶ್ರದ್ದಾಭಕ್ತಿಯಿಂದ ನಡೆಯಿತು.
ಬೆಳಿಗ್ಗೆ ಬೆಟ್ಟದಲ್ಲಿ ಸಾಲು ಸಾಲು ಭಕ್ತರು ಶ್ರೀಮಲ್ಲಿಕಾರ್ಜುನ ದೇವರ ದರ್ಶನ ಪಡೆದರು. ವಿಶೇಷ ಪೂಜೆ ಅಭಿಷೇಕದಂತೆ ಧಾರ್ಮಿಕ ಕೈಂಕರ್ಯಗಳಲ್ಲಿ ಪಾಲ್ಗೊಂಡಿದ್ದರು.
ನಾಲ್ಕನೇ ಸೋಮವಾರದ ವಿಶೇಷ ಪದ್ಧತಿಯಂತೆ ತಾಲ್ಲೂಕಿನ ತೀರ್ಥಬಾವಿ ಶ್ರೀಅಮರೇಶ್ವರ ದೇವಸ್ಥಾನಕ್ಕೆ ಮಲ್ಲಿಕಾರ್ಜುನ ದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಸಮೇತ ಆರ್ಚಕರು, ಭಕ್ತರು ಪಾದ ಯಾತ್ರೆ ಮೂಲಕ ತೆರಳಿ ತಿರ್ಥಭಾವಿ ಅಮರೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಅಲ್ಲಿನ ದೇವರ ಹೊಂಡದಲ್ಲಿ ಮಲ್ಲಯ್ಯಗೆ ಹಾಗೂ ಅಮರಯ್ಯನಿಗೆ ಪೂಜೆ ಸಲ್ಲಿಸಿ ಹೊಂಡದಲ್ಲಿನ ನೀರು ತುಂಬಿಕೊಂಡು ಮಲ್ಲಯ್ಯನ ಪಲ್ಲಕ್ಕಿಯ ಮೆರವಣಿಗೆ ಅಡವಿಭಾವಿ ತಾಂಡ, ಬೆಲ್ಲದಮರಡಿ ಹೀಗೆ ವಿವಿಧ ಹಳ್ಳಿಗಳಲ್ಲಿ ಪಾದಯಾತ್ರೆಯ ಮೂಲಕ ಮಸ್ಕಿಗೆ ಸಂಜೆ ಆಗಮಿಸಿತು.
ಊರಿನ ದೈವ ಮಲ್ಲಯ್ಯನ ಹೂವಿನಿಂದ ಅಲಂಕೃತಗೊಂಡ ಪಲ್ಲಕ್ಕಿ ಹಾಗೂ ಕುಂಬವನ್ನು ವಾದ್ಯಮೇಳ, ಮಹಿಳೆಯರ ಕಳಸಕನ್ನಡಿಯೊಂದಿಗೆ ಮುಖ್ಯಬಜಾರ ಮೂಲಕ ಶ್ರೀವೀರಭದ್ರೇಶ್ವರ ದೇವಸ್ಥಾನ, ಬಸವಣ್ಣ ದೇವಸ್ಥಾನದಿಂದ ತೇರಿನ ಮನೆಯತ್ತ ಬರಮಾಡಿ ಕೊಳ್ಳಲಾಯಿತು.
ನಂತರ ಸಾಯಂಕಾಲ ಮಲ್ಲಿಕಾರ್ಜುನ ದೇವರ ಪಲ್ಲಕ್ಕಿ ಮೇಲಿನ ಹೂವಿನ ಹರಾಜು ಕಾರ್ಯಕ್ರಮ ನಡೆಯಿತು.
ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ ದೇವಸ್ಥಾನದ ಅರ್ಚಕರಾದ ಸಿದ್ದಯ್ಯ ಹೆಸರೂರು ಹಿರೇಮಠ, ಬಸವರಾಜ ಬೂದಿಹಾಳ ಮಠ,ಅಮರಯ್ಯ ವೆಂಕಾಟಾಪುರ, ಬಸವರಾಜ ಪೂಜಾರಿ, ಶರಣಬಸವ ಸೊಪ್ಪಿಮಠ,
ಶ್ರೀ ಧರ ಬೂಳ್ಳಳಿ, ಸೇರಿದಂತೆ ಪೂಜಾರಿ ಪೇಟೆಯ ಅರ್ಚಕರ ಬಳಗ ಆಕಾಶ ಸ್ವಾಮಿ ಹಿರೇಮಠ ಹಾಗೂ ದೇವಸ್ಥಾನದ ಕಮಿಟಿ ಅಧ್ಯಕ್ಷ ಅಮರಪ್ಪ ಗುಡುದೂರು ಸೇರಿದಂತೆ ಮಲ್ಲಿಕಾರ್ಜುನ ಭಕ್ತರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ