ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರ ಬೆಳಸಿಕೊಳ್ಳಿ : ಎನ್ ರಾಮಣ್ಣ ಪಿಡಿಒ

 

ಮಸ್ಕಿ : ತಾಲ್ಲೂಕಿನ ಹಾಲಾಪೂರ ಗ್ರಾಮದಲ್ಲಿರುವ ಜನನಿ ಪದವಿ ಪೂರ್ವ ಕಾಲೇಜ್ ನಲ್ಲಿ ಪ್ರಥಮ ಪಿಯಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ನಡೆಯಿತು. 

ಕಾರ್ಯಕ್ರಮದ ಸಾನಿಧ್ಯವನ್ನು ಜಂಗಮರಹಳ್ಳಿಯ ಪರಮಪೂಜ್ಯರಾದ ಶ್ರೀ ದಂಡಗುಂಡಪ್ಪ ತಾತನವರು ವಹಿಸಿದ್ದರು, ನಂತರ ಮಾತನಾಡಿದ ಹಾಲಾಪುರ ಗ್ರಾಮ ಪಂಚಾಯತ್ ಪಿಡಿಓ ಎನ್. ರಾಮಣ್ಣ ಅವರು ವಿದ್ಯಾರ್ಥಿಗಳು ನಿರಂತರ ಶಿಕ್ಷಣಕ್ಕೆ ಒತ್ತು ಕೊಡಬೇಕು ಶಿಕ್ಷಣ ಮನುಷ್ಯನ ಬದುಕಿಗೆ ಶಕ್ತಿ ಇದ್ದಂತೆ ಜೊತೆಯಲ್ಲಿ ಉತ್ತಮ ಸಂಸ್ಕಾರ ಜೀವನ ನಡೆಸಬೇಕು ಎಂದು ಹೇಳಿದರು.

ನಂತರ ಮಾತನಾಡಿದ ರೈತ ಸಂಪರ್ಕ ಕೇಂದ್ರದ  ಕೃಷಿ ಅಧಿಕಾರಿ ಮಾರುತಿಯವರು ವಿದ್ಯಾರ್ಥಿಗಳು ಸತತ ಓದು,ನಿರಂತರ ಪರಿಶ್ರಮದಿಂದ ಯಶಸ್ಸು ಸಾಧಿಸಲು ಸಾಧ್ಯ ಎಂದು ಹೇಳಿದರು. ನಂತರ ಮಾತನಾಡಿದ ಮಸ್ಕಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಮಂಜುನಾಥ ಉತ್ತಮ ಗುರಿ ಉದ್ದೇಶಗಳನ್ನು ಸಾಧಿಸಬೇಕಾದರೆ ಗುರು - ಹಿರಿಯರಿಗೆ ಗೌರವಕೊಡಬೇಕು ಮಾನವೀಯ ಮೌಲ್ಯವನ್ನು ರೂಪಿಸಿಕೊಳ್ಳಿ ಎಂದು ಹೇಳಿದರು.

ಈ ಸಂದರ್ಭದಲ್ಲಿ  ಕಾಲೇಜ್ ಗೌರವಧ್ಯಕ್ಷರಾದ ಲಿಂಗರಾಜ ಪಾಟೀಲ್, ಪ್ರಾಚಾರ್ಯರಾದ ನಾಗೇಶ ಜಂಗಮರಹಳ್ಳಿ, ಸುಭಾಷ್ ಸಿಂಗ್ ಹಜಾರೆ,ಅರವಿಂದ್ ಪಾಟೀಲ್, ಹನುಮಂತರಾಯ ದೇಸಾಯಿ, ಉಪನ್ಯಾಸರಾದ ಸಿದ್ದಾರ್ಥ ಪಾಟೀಲ್, ಮರಿಸ್ವಾಮಿ,ವಿರೇಶ ಜೆ , ಶ್ರೀದರ ಗುಡಿ, ಯುನಿಸ್ ಅಕ್ರಮ, ಸಿದ್ದಪ್ಪ ಜಿ,ಅಮರೇಶ ಇತರರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ