ಎರಡನೆಯ ಅವಧಿಯ ಪ ಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ: ರಾಜಕೀಯ ಚಟುವಟಿಕೆಗಳು ಗರಿಗೆದರಿದೆ
ಕೊಟ್ಟೂರು: ಕಳೆದ ಒಂದುವರೆ ವರ್ಷದಿಂದ ನೆನಗುದಿಗೆ ಬಿದ್ದಿದ್ದ ಸ್ಥಳೀಯ ಕೊಟ್ಟೂರು ಪಟ್ಟಣ ಪಂಚಾಯಿತಿ ಎರಡನೆಯ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ಪ್ರಕಟಿಸಿ ಇಲ್ಲಿನ ಅಭಿವೃದ್ಧಿಗೆ ಹಿಡಿದಿದ್ದ ಗ್ರಹಣ ಬಿಟ್ಟಿದೆ.
ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲು ಪ್ರಕಟಿಸಿ ನಗರಾಭಿವೃದ್ಧಿ ಇಲಾಖೆ, ಆದೇಶ ಹೊರಡಿಸಿದೆ.
2018 ರಲ್ಲಿ ಚುನಾವಣೆ ನಡೆದು ಈ ಮೊದಲು 30 ತಿಂಗಳು ಅಧಿಕಾರ ನಡೆಸಿದ್ದು, ತದನಂತರದಲ್ಲಿ ಸರ್ಕಾರವು ಉಳಿದ 30 ತಿಂಗಳ ಅವಧಿಗೆ ಮೀಸಲು ಪ್ರಕಟಿಸಿದ್ದನ್ನು ಓಬಿಸಿ ವರ್ಗಕ್ಕೆ ಸ್ಥಾನ ದೊರಕಿಲ್ಲವೆಂದು ನ್ಯಾಯಾಲಯದ ಮೊರೆ ಹೋಗಿತ್ತು. ಸುಧೀರ್ಘ ವಿಚಾರಣೆ ನಂತರ ಇದೀಗ ಸರ್ಕಾರ 2022 ರಂದು ಹಿಂದೆ ಪ್ರಕಟಿಸಿದ್ದ ಮೀಸಲಾತಿಗೆ ಕೋರ್ಟ್ ಅಸ್ತು ಎಂದಿದೆ.
ಗರಿಗೆದರಿದ ರಾಜಕೀಯ ಚಟುವಟಿಕೆ :
ಪಟ್ಟಣ ಪಂಚಾಯಿತಿ ವ್ಯಾಪ್ತಿಯ 20 ವಾರ್ಡುಗಳಲ್ಲಿ ಇಬ್ಬರು ಪಕ್ಷೇತರ ಸೇರಿದಂತೆ 11 ಜನ ಕಾಂಗ್ರೆಸ್ನ ಸದಸ್ಯರು ಬಹುಮತ ಹೊಂದಿ ಅಧಿಕಾರ ಹಿಡಿದಿತ್ತು. 20ನೇ ವಾರ್ಡಿನಿಂದ ಆಯ್ಕೆಗೊಂಡ ಪಕ್ಷೇತರ ಸದಸ್ಯೆ ಹಾಗೂ ಐದು ನೇ ವಾರ್ಡಿನಿಂದ ಆಯ್ಕೆಗೊಂಡ ಕಾಂಗ್ರೆಸ್ ಪಕ್ಷದ ಮಹಿಳೆ ಸದಸ್ಯರು ಇದೀಗ ಪ್ರಕಟಿಸಿದ ಅಧ್ಯಕ್ಷ ಸ್ಥಾನದ ಮೀಸಲಿಗೆ ಅರ್ಹರಾಗಿದ್ದಾರೆ. ಇದೀಗ ರಾಜಕೀಯ ಪರಿಸ್ಥಿತಿ ಬದಲಾಗಿದ್ದು, ಕ್ಷೇತ್ರದ ಮಾಜಿ ಶಾಸಕರ ಹಾಗೂ ಹಾಲಿ ಶಾಸಕರು ಅಖಾಡಕ್ಕೆ ಇಳಿಯಲಿದ್ದು ಯಾರ ಕೈ ಮೇಲಾಗಲಿದೆ ಎಂಬುದು ಆಗಸ್ಟ್ 9ರಂದು ಸರ್ಕಾರವು ಚುನಾವಣೆ ದಿನಾಂಕವನ್ನು ಪ್ರಕಟಿಸುವ ನಿರೀಕ್ಷೆ ಇದ್ದು ಅಂದೇ ಎಲ್ಲದಕ್ಕೂ ತೆರೆ ಬೀಳಲಿದೆ.
ಆಡಳಿತಾಧಿಕಾರಿಗಳ ಅಧಿಕಾರದಲ್ಲಿ ಒಂದುವರೆ ವರ್ಷದಿಂದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ತಳಮಳ ಉಂಟಾಗಿತ್ತು ಇದೀಗ ಮೀಸಲು ಘೋಷಣೆಯಾಗಿ ಸದಸ್ಯರಲ್ಲಿ ಮಂದಹಾಸ ಮೂಡಿದ್ದು, ತೆರೆಮರೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ