ಬಿಜೆಪಿ ತೆಕ್ಕೆಗೆ ಮಸ್ಕಿ ಪುರಸಭೆ ಅದ್ದೂರಿ ಸಂಭ್ರಮ
ಮಸ್ಕಿ: ಪಟ್ಟಣದ ಪುರಸಭೆಯ 15 ತಿಂಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದು, ಅಧ್ಯಕ್ಷ, ಉಪಾಧ್ಯಕ್ಷರು ಅವಿರೋಧ ಆಯ್ಕೆಯಾಗಿದ್ದಾರೆ.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ತಾಲೂಕ ಚುನಾವಣಾ ಅಧಿಕಾರಿ ಡಾ.ಮಲ್ಲಪ್ಪ.ಕೆ.ಯರಗೋಳ ಅವರ ಉಪಸ್ಥಿತಿಯಲ್ಲಿ ಹಿಂದುಳಿದ ವರ್ಗ( ಎ )ಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮಲ್ಲಪ್ಪ ತಂದೆ ಅಮರಪ್ಪ ವಾರ್ಡ್ 12 ಕುರುಬರ ಓಣಿ, ಪರಿಶಿಷ್ಟ ಜಾತಿ ಮಹಿಳೆ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಗೀತಮ್ಮ ಗಂಡ ಶಿವರಾಜ ಬುಕ್ಕಣ್ಣ ವಾರ್ಡ್ 15 ಪಿಂಜಾರ ಓಣಿ ಅವಿರೋಧವಾಗಿ ಆಯ್ಕೆಯಾದರು ನಂತರ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷೆ ಗೆ ಗೆಲುವಿನ ಪ್ರಮಾಣ ಪತ್ರ ನೀಡುವ ಮೂಲಕ ಶುಭಾಷಯ ಕೋರಿದರು.
ಒಟ್ಟು 23 ಸದಸ್ಯರ ಸಂಖ್ಯಾಬಲದಲ್ಲಿ ಬಿಜೆಪಿಯ 14 ಸದಸ್ಯರ ಬಲ ಹೊಂದಿದ್ದ ಬಿಜೆಪಿಯು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡು ತಮ್ಮ ತೆಕ್ಕೆಗೆ ಪಡೆಯುವ ಮೂಲಕ ಅಚ್ಚರಿ ಮೂಡಿಸಿತು.ಬಿಜೆಪಿ 14 ಸದಸ್ಯರ ಬಲದೊಂದಿಗೆ ಗೆಲುವು ಅನಾಯಾಸ ಎನ್ನುವಂತಾಗಿತ್ತು. ಆದರೆ, ಎಂಎಲ್ಸಿ,ಶಾಸಕರ,ಸಂಸದರ ಬೆಂಬಲ ನಿರೀಕ್ಷೆ ಇದ್ದರು ಇನ್ನು ಮೂರು ಸದಸ್ಯರ ಕೊರತೆ ಇದ್ದರಿಂದ ಕಾಂಗ್ರೇಸ್ ಬಹುಮತ ಸಿಗುವ ಸಾಧ್ಯತೆ ಕಡಿಮೆಯಾಗಿದ್ದರಿಂದ ಕಣದಿಂದ ಹಿಂದೆ ಸರಿಯುವ ಮೂಲಕ ಬಿಜೆಪಿ ಹಾದಿ ಸುಗಮವಾಯಿತು.
ನಂತರ ಪಟ್ಟಣದ ಪುರಸಭೆ ಕಾರ್ಯಾಲಯದಿಂದ ಹಳೇ ಬಸ್ ನಿಲ್ದಾಣದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ರಸ್ತೆ ಉದ್ದಕ್ಕೂ ತೆರೆದ ವಾಹನದಲ್ಲಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಮಾಜಿ ಶಾಸಕರು ಹಾಗೂ ಬಿಜೆಪಿ ಪಕ್ಷದ ಮುಖಂಡರನ್ನು ಅದ್ಧೂರಿ ಮೆರವಣಿಗೆಯ ಮೂಲಕ ಡಿಜೆ ಯೊಂದಿಗೆ ಕುಣಿದು ಕುಪ್ಪಳಿಸುತ್ತಾ ಮೆರವಣಿಗೆ ಉದ್ದಕ್ಕೂ ಹೂವಿನ ಹಾರಗಳ ಸುರಿಮಳೆ ಮಾರ್ಗ ಮಧ್ಯೆ ಬೃಹತ್ ಗಾತ್ರದ ಕ್ರೇನ್ ಮೂಲಕ ದೊಡ್ಡ ಹೂವಿನ ಹಾರವನ್ನು ಹಾಕುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ