ಗ್ರಾಮ ಆಡಳಿತ ಅಧಿಕಾರಿ ಧರೆಪ್ಪ ಮಾಳಿ ಆ.22 ರೊಳಗೆ ಕರ್ತವ್ಯಕ್ಕೆ ಹಾಜರಾಗದಿದ್ದರೆ ಕ್ರಮ

 

ಮಸ್ಕಿ : ತಾಲೂಕಿನ ಪಾಮನ ಕಲ್ಲೂರು ಹೋಬಳಿಯ ಪಾಮನಕಲ್ಲೂರು ಗ್ರಾಮದ ಗ್ರಾಮ ಆಡಳಿತ ಅಧಿಕಾರಿ ಧರೆಪ್ಪ ಮಾಳಿ ಇವರು 01/03/2024 ರಿಂದ ಇಂದಿನ ವರೆಗೂ ಅನಧಿಕೃತ ಗೈರು ಹಾಜರಾಗಿದ್ದು, ತಾಲೂಕ ದಂಡಾಧಿಕಾರಿಗಳು ತಹಶೀಲ್ದಾರ್ ಕಚೇರಿ ಮಸ್ಕಿ ಇವರ ಮುಖೇನ ಮೊದನೇ ನೋಟಿಸನ್ನು ದಿನಾಂಕ-10/04/204 ರಂದು ನೀಡಲಾಗಿದ್ದು, ಎರಡನೇ ನೋಟಿಸ್‌ನ್ನು 29/06/2024 ರಂದು ಹಾಗೂ ಅಂತಿಮ ನೋಟಿಸ್‌ನ್ನು ದಿನಾಂಕ-29/07/2024 ನೀಡಲಾಗಿ ಈ ಮೂರು ನೋಟಿಸಗೆ ಉತ್ತರವನ್ನು ನೀಡಿರುವುದಿಲ್ಲ ಮತ್ತು ಇಲ್ಲಿಯವರೆಗೂ ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ. ಆದ್ದರಿಂದ ದಿನಾಂಕ-22/08/2024 ರೊಳಗೆ ಕರ್ತವ್ಯಕ್ಕೆ ಹಾಜರಾಗಲು ತಿಳಿಸುತ್ತಾ ಒಂದು ವೇಳೆ ಸೂಚಿಸಿದ ದಿನಾಂಕದ ಒಳಗಡೆ ಕರ್ತವ್ಯಕ್ಕೆ ಹಾಜರಾಗದಿದ್ದರೆ ಕೆ ಸಿ ಎಸ್ ಆರ್ ನಿಯಮ 1957 ಪ್ರಕಾರ ಮುಂದಿನ ಕ್ರಮಕೈಗೊಳ್ಳಲಾಗುವುದೆಂದು ತಾಲೂಕ ದಂಡಾಧಿಕಾರಿ ಮಸ್ಕಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ