*30 ವರ್ಷಗಳ ಒಳಮೀಸಲಾತಿಗೆ ಮಾದಿಗ ಸಮುದಾಯದಕ್ಕೆ ಸಿಕ್ಕ ಜಯ, ಸಿಹಿ ಹಂಚಿ ಸಂಭ್ರಮಿಸಿದ ಮುಖಂಡರು*

ವಿಜಯ ನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಡಾಕ್ಟರ್ ಬಿಆರ್ ಅಂಬೇಡ್ಕರ್ ವೃತ್ತದಲ್ಲಿ ಮಾದಿಗ ದಂಡೋರ ಸಂಘಟನೆ , ಅಂಬೇಡ್ಕರ್ ಯುವ ಸೇನೆ, ದಲಿತ ಸಂಘರ್ಷ ಸಮಿತಿ, ಸಾಗರ ಬಣ, ದಲಿತ ಸಂಘರ್ಷ ಸಮಿತಿ ಪ್ರೊಪೆಸರ್, ಕೃಷ್ಣಪ್ಪ ಬಣದ ಕೂಡ್ಲಿಗಿ ತಾಲೂಕಿನ ಎಲ್ಲಾ ದಲಿತ ಪರ ಸಂಘಟನೆಯ ಮುಖಂಡರು ಗಳು ಸುಪ್ರೀಂ ಕೊರ್ಟ್ ನ 7 ನ್ಯಾಯಾಧಿಶರ ಪೀಠವು ಇ ವಿ ಚಿನ್ನಯ್ಯ ತೀರ್ಪುನ್ನು ರದ್ದು ಗೊಳಿಸಿ ಮತ್ತು ಸಂತೋಷ ಹೆಗ್ಡೆ ರವರ ತೀರ್ಪನ್ನು ರದ್ದುಗೊಳಿಸಿ ಮತ್ತು ಪಂಜಾಬ್ ಮತ್ತು ಹರಿಯಾಣದ ದೇವೀಂದ್ರ ಸಿಂಗ್ ಪ್ರಕರಣದ ತೀರ್ಪು ನ್ನು ಎತ್ತಿಹಿಡಿದಿದೆ. ಅಂದರೆ ಭಾರತದ ಸಂವಿಧಾನವು ಆಯಾ ರಾಜ್ಯಗಳಲ್ಲಿ ಆಂತರಿಕ ಮೀಸಲಾತಿಯನು ಅನುಮತಿಸುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ,

ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಸಮರ್ಥನೀಯ ಎಂದು ಒಳಮೀಸಲಾತಿ ಪರ ತೀರ್ಪು ಪ್ರಕಟಿದ ಮಾನ್ಯ ಸರ್ವೋಚ್ಚ ನ್ಯಾಯಾಲಯ 30 ವರ್ಷ ಗಳ ನಿರಂತರ ಹೋರಾಟಕ್ಕೆ ಗುರುವಾರ ರಂದು ಕೊನೆಗೂ ಕಾನೂನು ಸಮರ್ಥನೆ ದೊರತಿದೆ ಎಂದು ಅಂಬೇಡ್ಕರ್ ಸಂಘದ ಜಿಲ್ಲಾಧ್ಯಕ್ಷರಾದ ಪಿ.ಸಂತೋಷ್ ಕುಮಾರ್ ಮಾತನಾಡಿದರು, ಈ ಸಂದರ್ಭದಲ್ಲಿ ಡಿಎಸ್ಎಸ್ ತಾಲೂಕ ಪಂಚಾಲಕರಾದ ಡಿ ಎಚ್ ದುರ್ಗೇಶ್ ಸಹ ಸುಪ್ರೀಂಕೋರ್ಟಿನ ತೀರ್ಪಿಗೆ ಅಭಿನಂದನೆ ಸಲ್ಲಿಸಿದರು, ಹಾಗೆ ಡಿಎಸ್ಎಸ್ ಮುಖಂಡರಾದ ಎಸ್ ದುರ್ಗೇಶ್ ಅನೇಕ ಹೋರಾಟಗಳ ಮೂಲಕ ಹೋರಾಟ ಮಾಡಿದಂತ ರಾಜ್ಯದ ಮುಖಂಡರಿಗೂ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದರು, ಹಾಗೂ ಹೋರಾಟಗಾರದ ಬಸಣ್ಣ ತಿಮ್ಮನಹಳ್ಳಿ ಇವರು ಸಹ ಮಾತನಾಡಿ ರಾಜ್ಯದ ಒಳ ಮೀಸಲಾತಿಗೆ ಹೋರಾಡಿದ ಪ್ರಮುಖ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು, ಈ ಸಂದರ್ಭದಲ್ಲಿ ಮಾದಿಗಂಡರ ತಾಲೂಕ ಅಧ್ಯಕ್ಷರಾದ ಮಹೇಶ್ ಹೆಗ್ಡಾಳ್, ಪ್ರಕಾಶ್ ವಕೀಲರು ಅಂಜನಪ್ಪ ವಕೀಲರು ಜಾಗಟ್ಗೆರೆ, ಬಸಣ್ಣ ಚೌಡಾಪುರ, ನಾಗರಾಜ ಹೆಗ್ಡಾಳ್, ವೆಂಕಟೇಶ್ ಸೋಲ್ಧರಹಳ್ಳಿ, ಪ್ರಶಾಂತ ರಾಜಶೇಖರ್, ಹೀಗೆ ಅನೇಕ ಮುಖಂಡರುಗಳು ಡಾ. ಬಿಆರ್ ಅಂಬೇಡ್ಕರ್ ವೃತ್ತದಲ್ಲಿ ಒಳ ಮೀಸಲಾತಿಯ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಗೌರವಿಸಿ ಕೂಡ್ಗಿ ತಾಲೂಕಿನ ಹೋರಾಟಗಾರರು ಪಟಾಕಿ ಹಚ್ಚುವುದರ ಜೊತೆಗೆ ಸಿಹಿ ತಿಂಡಿ ತಿನಿಸಿ ಸಂಭ್ರಮಾಚರಣೆ ಮೆರೆದರು.

ವರದಿ ರಾಘವೇಂದ್ರ ಸಾಲುಮನೆ ಕೂಡ್ಲಿಗಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*