ತಾಲೂಕು ಮಟ್ಟ ಕ್ರೀಡಾಕೂಟಕ್ಕೆ.ಹಿರೇನಗನೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಆಯ್ಕೆ
ಹಟ್ಟಿ ಚಿನ್ನದ ಗಣಿ:ಚಿನ್ನದ ಗಣಿಯ ದಾರವಾಲ ಕ್ರೀಡಾಂಗಣದಲ್ಲಿ. ವೀರಪುರ ಹಾಗೂ ಗೌಡುರು ವಲಯ ಮಟ್ಟ ಹಾಗೂ ಗುರುಗುಂಟ ಲಯಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟವು ಜುಲೈ 31.1.2 ಈ ಮೂರು ದಿನ ಕ್ರೀಡೆಗಳು ಅಚ್ಚುಕಟ್ಟಾಗಿ ನಡೆದವು.
ಈ ಕ್ರೀಡಾಕೂಟವನ್ನು ರೋಡಲ್ ಬಂಡ (ತವಾಗ) ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಅತ್ಯಂತ ಶಿಸ್ತು ಬದ್ಧವಾಗಿ ಕ್ರೀಡೆಗಳನ್ನು ನಡೆಸಿ ಕೊಟ್ಟವು.ಇದಕ್ಕೆಲ್ಲ ಸಹಕರಿಸಿದ ತಾಲೂಕು ಎಲ್ಲಾ ಶಿಕ್ಷಣ ಅಧಿಕಾರಿಗಳು ಹಾಗೂ ಸಿ ಆರ್ ಪಿಗಳು ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ದೈಹಿಕ ಶಿಕ್ಷಕರು ಹಾಗೂ ರೋಡಲ್ ಬಂಡ ಶಾಲೆಯ ಮುಖ್ಯ ಗುರುಗಳಾದ ಶಿವಕುಮಾರ್ ದೊಡ್ಮನಿ ದೈಹಿಕ ಶಿಕ್ಷಕಿಯಾದ ಭಾಗ್ಯಶ್ರೀ ಮತ್ತು ಶಿಕ್ಷಕರಾದ ನರಸಪ್ಪ ಗಾರಲದಿನ್ನಿ ಹಾಗೂ ಸಹ ಶಿಕ್ಷಕರ ಪ್ರಯತ್ನದಿಂದ ಈ ಕ್ರೀಡಾಕೂಟವು ನಡೆಯಿತು.
ಈ ಮೂರು ದಿನಗಳ ಕಾಲ ಹಟ್ಟಿ ಚಿನ್ನದ ಗಣಿಯ ಕಂಪನಿಯು ಕ್ರೀಡಾಪಟುಗಳಿಗೂ ಹಾಗೂ ದೈಹಿಕ ಶಿಕ್ಷಕರಿಗೂ ಮತ್ತು ಹಿರಿಯ ಅಧಿಕಾರಿಗಳಿಗೂ ಊಟದ ವ್ಯವಸ್ಥೆ ಹಾಗೂ ಕ್ರೀಡಾಂಗಣ ಅವಸ್ಥೆ ಮಾಡಲಾಗಿತ್ತು.
ತಾಲೂಕ ಮಟ್ಟಕ್ಕೆ ಆಯ್ಕೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇನಗನೂರು ವಿದ್ಯಾರ್ಥಿಗಳು. ವೀರಾಪುರ ಹಾಗೂ ಗೌಡೂರು ವಲಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿದ. ಮೌನೇಶ್ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ.ಪ್ರದೀಪ್ ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ.
ಮೈಮುದ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ.ಹಾಗೂ ಅಡೆತಡೆ(ಅಡೆಲ್ಸ್ )ನಲ್ಲಿ ಅಮರ್ ಸಂದೇಶ್. ಸಾಗರ್.ಈ ಎಲ್ಲಾ ವಿದ್ಯಾರ್ಥಿಗಳು ತಾಲೂಕ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ, ಕ್ರೀಡಾಪಟುಗಳಿಗೆ ಸಿಆರ್‌ಪಿ ಚಂದ್ರಶೇಖರ್ ಕಂಬಾರ್ ಹಾಗೂ ನರಸಪ್ಪ ಗಾರಲದಿನ್ನಿ ಶಿಕ್ಷಕರು ಕ್ರೀಡೆಯಲ್ಲಿ ಜಯಶಾಲಿಯಾದ ಕ್ರೀಡಾಪಟುಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಕ್ರೀಡೆಯಲ್ಲಿ ಶಾಲೆಗೆ ಮತ್ತು ಗ್ರಾಮಕ್ಕೆ ಕೀರ್ತಿತಂದ ವಿದ್ಯಾರ್ಥಿಗಳಿಗೆ
ಮುಖ್ಯ ಗುರುಗಳಾದ ಶ್ರೀಮತಿ ಮಮತಾ. ದೈಹಿಕ ಶಿಕ್ಷಕಿಯಾದ ಫಾತಿಮಾ.ಶಿಕ್ಷಕರದ ಬಸವರಾಜ್ ಸರ್ ಹಾಗೂ ಸಹ ಶಿಕ್ಷಕಿಯರು.ಎಸ್ ಡಿ ಎಮ್ ಸಿ.
ಕೋಚ್ ಆಬೆಲ್. ಗ್ರಾಮಸ್ಥರು.ಪಾಲಕರು. ವಲಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ವಿಜಯಶಾಲಿಯಾದ ಕ್ರೀಡಾಪಟುಗಳಿಗೆ ತುಂಬು ಹೃದಯದ ಅಭಿನಂದನೆಗಳು ಸಲ್ಲಿಸಿದರು.
(ಬಾಕ್ಸ್)
ತಾಲೂಕ ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಯಾಗಲಿ ಎಂದು ಶುಭ ಹಾರೈಸಿದ ---ಮೈನುದ್ದೀನ್ ಬೂದಿನಾಳ ಸಮಾಜ ಸೇವಕರು ಹಿರೇನಗನೂರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ