ಭಾರತ 70 ಪ್ರತಿಶತ ದಷ್ಟು ತೈಲವನ್ನು ಆಮದು.. ತಾಳೆ ಕೃಷಿ ಬೆಳೆಯಿಂದ ರೈತ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ - ಪ್ರಕಾಶ್ ಎಂ ಸಬರದ್

 

ಸಿಂಧನೂರು:- ಆ 1 ಕಬ್ಬು, ಭತ್ತ, ಮೆಕ್ಕೆಜೋಳ ಸಹಿತ ಯಾವುದೇ ಬೆಳೆಗಳಿಗಿಂತ ಅಧಿಕ ಲಾಭ, ಕಡಿಮೆ ಚಿಂತೆ ತಾಳೆ ಬೆಳೆಯಲ್ಲಿದೆ. ಜನರು ತಾಳೆ ಕೃಷಿಗೆ ಮುಂದಾಗಬೇಕು.ಬೇರೆ ಕೃಷಿಗೆ ಮಾಡಬೇಕಾದ ಕೆಲಸದ ಅರ್ಧವೂ ಇಲ್ಲಿಲ್ಲ ಎಂಬುದನ್ನು ಅವರು ನೋಡುತ್ತಿಲ್ಲ.ತಾಳೆ ಕೃಷಿ ಮಾಡುವವರಿಗೆ ತೋಟಗಾರಿಕೆ ಇಲಾಖೆಯು ಪ್ರೋತ್ಸಾಹ ಧನ ಸಹ ನೀಡುತ್ತದೆ ಹಾಗೂ ಹನಿ ನೀರಾವರಿ ವ್ಯವಸ್ಥೆಗೆ ಸಬ್ಸಿಡಿ ನೀಡಲಾಗುವುದು. ಈ ಬೆಳೆಯಿಂದ ರೈತ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಅಪರ ನಿರ್ದೇಶಕರು ತೋಟಗಾರಿಕೆ ಇಲಾಖೆ,ಲಾಲ್ ಬಾಗ್ ಬೆಂಗಳೂರು ಪ್ರಕಾಶ್ ಎಂ ಸಬರದ್ ಹೇಳಿದರು.

      ತಾಲೂಕಿನ ಹೆಡಿಗಿನಾಳ ಗ್ರಾಮದಲ್ಲಿ ಬುಧವಾರದಂದು ಜಿಲ್ಲಾ ಪಂಚಾಯತ, ರಾಯಚೂರು ತಾಳೆ ಬೆಳೆ ಅಭಿವೃದ್ಧಿ ಯೋಜನೆ ತೋಟಗಾರಿಕೆ ಇಲಾಖೆ ರಾಯಚೂರು ಜಿಲ್ಲೆ 3ಎಫ್ ಆಯಿಲ್ ಪಾಮ್ ಪ್ರೈವೇಟ್ ಲಿಮಿಟೆಡ್ ಇವರ ಸಹಯೋಗದೊಂದಿಗೆ ಆಯಿಲ್ ಪಾಮ್ ಪ್ಲಾಂಟೇಶನ್ ಮೇಗಾ ಡ್ರೈವ್ ಕಾರ್ಯಕ್ರಮ ಹಾಗೂ ರೈತರ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

     

 ನಂತರ ಮಾತನಾಡಿದ ಅವರು ಪ್ರತಿಯೊಂದು ರೆಸ್ಟೋರೆಂಟ್ ,ಮನೆ,ಹೋಟೆಲ್ ಹಾಗೂ ಮದುವೆ ಕಾರ್ಯಕ್ರಮಗಳಲ್ಲಿ ಬಳಕೆ ಮಾಡುವುದಲ್ಲದೆ ಜೊತೆಗೆ ಜಂಕ್ ಫುಡ್ ,ಬಜ್ಜಿ, ಫಾಸ್ಟ್ ಫುಡ್ ಗಳಲ್ಲಿ ಅತಿ ಹೆಚ್ಚು ಬಳಸುವುದು ಪಾಮ್ ಆಯಿಲ್ ಅಗಿದೆ .ಈ ಹಿಂದೆ ಪ್ರತಿ ತಾಲೂಕು ಕೇಂದ್ರದಲ್ಲಿ(ಎಣ್ಣಿ)ಗಾಣ ಇರುತ್ತಾ ಇತ್ತು.ನಾವು ಸಣ್ಣವರಿದ್ದಾಗ ಶೇಂಗಾ ಖುಷಿಬೀ ಇವುಗಳನ್ನ ಗಾಣಕ್ಕೆ ಹಾಕಿ ಬಂದಂತ

ಎಣ್ಣೆ ಬಳಸುತ್ತಿದ್ದಿವಿ .ಭಾರತದಲ್ಲಿ 30 ವರ್ಷ ಗಳ ಹಿಂದೆ ಒಬ್ಬ ವ್ಯಕ್ತಿಗೆ 1 ವರ್ಷಕ್ಕೆ ಎಂಟು ಕೆಜಿ ಎಣ್ಣೆ ಖರ್ಚಾಗುತ್ತಿತ್ತು.ಇವತ್ತಿನ ದಿನದಲ್ಲಿ ಒಬ್ಬರಿಗೆ ಇಪ್ಪತ್ತು ಕೆಜಿ ಎಣ್ಣೆ ಬೇಕು.ಒಟ್ಟು ದೇಶೀಯ ಬೇಡಿಕೆ ಮತ್ತು ಸ್ಥಳೀಯ ಉತ್ಪಾದನೆಯ ನಡುವಿನ 70 ಪ್ರತಿಶತ ದಷ್ಟು ಅಂತರವನ್ನು ಪೂರೈಸಲು ಈ ತೈಲವನ್ನು ಆಮದುಮಾಡಿಕೊಳ್ಳಬೇಕಾಗಿದೆ.ದೇಶಕ್ಕೆ ಬೇಕಾಗಿರುವ ವಾರ್ಷಿಕ ಎಣ್ಣೆ 24 ಮಿಲಿಯನ್ ಮೆಟ್ರಿಕ್ ಟನ್.ಉತ್ಪಾದನೆ ಆಗುತ್ತಿರುವುದು 11 ಮಿ ಮೆಟ್ರಿಕನ್ 13 ಮಿ ಮೆಟ್ರಿಕ್ ಟನ್ ವಿವಿಧ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ.ಭಾರತವು ವಿಶ್ವದ ಅತಿ ದೊಡ್ಡ ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳುವ ದೇಶವಾಗಿದೆ ಎಂದರು.

     ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕ ಹಂಪನಗೌಡ ಬಾದರ್ಲಿ ಅವರು ಪ್ರಗತಿಪರ ರೈತರಾದ ಎಮ್ ಸಿ ಅಂಕಯ್ಯ ನವರ ಸುಮಾರು ನೂರು ಎಕರೆ ಪ್ರದೇಶದಲ್ಲಿ ತಾಳೆ ಬೆಳೆ ಯೋಜನೆಯನ್ನು ರೂಪಿಸಿದ್ದಾರೆ.ತಾಳೆ ಬೆಳೆಯನ್ನು ಯಾವ ರೀತಿ ಸಸಿ ನಾಟಿ ಮಾಡಬೇಕು ಸಸಿಗಳನ್ನು ಹೇಗೆ ಬೆಳೆಸಬೇಕು ಬರುವಂಥ ಸಮಸ್ಯೆಗಳ ಬಗ್ಗೆ ಯೋಜನೆಯಡಿ,ರೈತರಿಗೆ ಗುಣಮಟ್ಟದ ನಾಟಿ ಸಾಮಗ್ರಿ, ಬೆಳೆ ನಿರ್ವಹಣೆಗೆ ಆರ್ಥಿಕ ನೆರವು ಮತ್ತು ಅಂತರ ಬೆಳೆ ಸೇರಿದಂತೆ ವಿವಿಧ ಪ್ರೋತ್ಸಾಹವನ್ನು ಸಹ ನೀಡಲಾಗುತ್ತದೆ. ಹೆಚ್ಚುವರಿಯಾಗಿ,ರೈತರಿಗೆ ಅವರ ಉತ್ಪನ್ನಗಳಿಗೆ ಖಾತರಿಯ ಬೆಲೆಯೊಂದಿಗೆ ಖಚಿತವಾದ ಮಾರುಕಟ್ಟೆಯನ್ನು ಸಹ ಒದಗಿಸಲಾಗಿದೆಂದು ಇಲಾಖೆ ಮತ್ತು ಕಂಪನಿಯ ವ್ಯವಸ್ಥಾಪಕರು ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ.ನೂತನವಾಗಿ ಯಾವುದೇ ಬೆಳೆ ಬೆಳೆಯಲಿಕ್ಕೆ ಪ್ರಾರಂಭಿಸಿದಾಗ ಅನೇಕ ಸಮಸ್ಯೆಗಳು ಸಹಜ ಕೆಲವೊಬ್ಬ ರೈತರಿಗೆ ಆ ಬೆಳೆಗಳ ಬಗ್ಗೆ ಸರಿಯಾದ ಮಾಹಿತಿ ,ಜ್ಞಾನ ಇರುವುದಿಲ್ಲ ಬೆಳೆಯುವ ವಿಧಿ ವಿಧಾನಗಳನ್ನು ತಿಳಿದಿರುವುದಿಲ್ಲ. ಪ್ರಾರಂಭದಲ್ಲಿ ರೈತರಿಗೆ ಸಮಸ್ಯೆಗಳ ಉದ್ಭವ ಇರುವುದೇ.ಬೆಳಿತಾ ಬೆಳಿತಾ ಸಂಶೋಧನಕಾರರ ಗಿಂತ ರೈತರು ಒಂದು ಹೆಜ್ಜೆ ಮುಂದಿದ್ದಾರೆ.ಬೆಳೆಯ ಪದ್ಧತಿಯಲ್ಲಿ ರೈತರ ಅನುಭವದಿಂದ ಬಂದಂತದ್ದು.ಅದೇ ರೀತಿ ಆಯಿಲ್ ಪಾಮ್ ಬೆಳೆಯಲ್ಲಿ ಕೂಡ ಅದೇ ರೀತಿ ಬೆಳವಣಿಗೆ ಆಗುತ್ತದೆ ಎಂದು ತಿಳಿಸಿದರು.

     ಇದೇ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ರಾಯಚೂರು ಮೊಹಮದ್ ಅಲಿ, ಹಿರಿಯ ಸಹಾಯಕ ತೋಟಗಾರಿಕೆ ಇಲಾಖೆ ನಿರ್ದೇಶಕರಾದ ಚಂದ್ರಶೇಖರ್ ಕುರಿ.

ಎ ಜಿ ಎಂ 3ಎಫ್ ಆಯಿಲ್ ಪಾಮ್ ಪ್ರೈವೇಟ್ ಲಿಮಿಟೆಡ್ ಬಸವ ಕುಮಾರ್, ಗ್ರಾಮ ಪಂಚಾಯತಿ ಅಧ್ಯಕ್ಷರು ಅಮರೇಗೌಡ ಹೆಡಿಗಿನಾಳ, ಪ್ರಗತಿಪರ ರೈತರು ಎ ವಿ ಎಸ್ ಕಾಲೇಜ್ ಸಿಂಧನೂರು ಎಮ್ ಸಿ ಅಂಕಯ್ಯ, ಪ್ರಗತಿಪ ರೈತರಾದ ಪಾಪರಾವ್ ಕ್ಯಾಂಪ್ ಚೌದರಿ ಪಿ., ರಾಮಚಂದ್ರಗೌಡ ಹೆಡಿಗಿನಾಳ ಸೇರಿದಂತೆ ಅನೇಕ ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*