ಹಿರೇನಗನೂರು ಗ್ರಾಮದ ಆರಾಧ್ಯ ದೈವ ಕರಿಲಿಂಗೇಶ್ವರ ಪಲ್ಲಕ್ಕಿ ಉತ್ಸವ.ಅಯ್ಯಾಳಪ್ಪ ತಾತನ ಜಾತ್ರಾ.
ಹಟ್ಟಿ ಚಿನ್ನದ ಗಣಿ:26 ಲಿಂಗಸಗೂರು ತಾಲೂಕಿನ ಹಿರೇನಗನೂರು ಗ್ರಾಮದ ಹಾಲುಮತ ಸಮುದಾಯದ ಭಕ್ತರ ಆರಾಧ್ಯ ದೈವ ಶ್ರೀಕರಿಲಿಂಗೇಶ್ವರ ಜಾತ್ರಾ ಮಹೋತ್ಸವ ಪ್ರತಿ ವರ್ಷ ಶ್ರಾವಣ ಮಾಸದ ನಾಲ್ಕನೆಯ ಸೋಮವಾರ ಗ್ರಾಮದ ಆರಾಧ್ಯ ದೈವ ಭಕ್ತರಿಗೆ ಬೇಡಿದ ವರವ ನೀಡುವ ಶ್ರೀಕರಿಲಿಂಗೇಶ್ವರ ದೇವರ ಪಲ್ಲಕ್ಕಿ ಉತ್ಸಾಹವು ಸಡಗರ ಸಂಭ್ರಮದಿಂದ ಜರುಗಿತು.
ಗ್ರಾಮದ ಹೃದಯ ಭಾಗದಲ್ಲಿರುವ ಕರಿಲಿಂಗೇಶ್ವರ ದೇವರ ಮನೆಯಲ್ಲಿ ಹಿರೇನಗನೂರಿನ ಹೋರಪೇಟಿ ಹಾಲುಮತ ಬಂಧುಗಳ ಗುರುಗಳಾದ ಶ್ರೀ ಪರಮೇಶ್ವರ ಸ್ವಾಮಿ ಗಳು ರುದ್ರಾಭಿಷೇಕ ಹಾಗೂ ಮಂಗಳಾರತಿ ಮಾಡಿ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು.ನಂತರ ಅಗಸೆಬಾಗಲಿಯ ಮುಖಾಂತರ ಹೊರಬಂದ ಪಲ್ಲಕ್ಕಿ. ಮುಖ್ಯ ರಸ್ತೆ ಮೂಲಕ ಶ್ರೀಅಯ್ಯಾಳಪ್ಪ ತಾತನ ಗದ್ದಿಗೆವರಿಗೆ ಹೋಗಿ ಅಲ್ಲಿ ಶ್ರೀಅಯ್ಯಾಳಪ್ಪ ತಾತನ ಗದ್ದುಗೆಯಲ್ಲಿ ಪೂಜೆ ನೆರವೇರಿದವು. ಹಿರೇನಗನೂರು ಚುಕ್ಕನಟ್ಟಿ ಗ್ರಾಮದ ಸಾವಿರಾರು ಭಕ್ತರು ಮಧ್ಯದಲ್ಲಿ ಹಿರಿಯರಾದ ಸಿದ್ದಣ್ಣ ಪೂಜಾರಿ "ಎರಡು ಕಾರ್ತಿಕ ಮಳೆ ಅಂದಾನ ಅಯ್ಯಾಳ"ಬುಡುಸಿನ್ಯಾಗ ನುಚ್ಚುಇಟ್ಟೀನಿ. ಗಂಗಾದೇವಿ ಇಂದ ಆದ್ಯಾಳ.ಹೀಗೆ ಅಯ್ಯಳಪ್ಪ ತಾತನ ಹೇಳಿಕೆ ಆಯಿತು.ನಂತರ ಪಲ್ಲಕ್ಕಿ ಉತ್ಸವಕ್ಕೆ ಆಗಮಿಸಿದ ಪಂಚಾಯತಿ ಸದಸ್ಯರು. ಗುರುಗಳಾದ ಪರಮೇಶ್ವರ ಸ್ವಾಮಿ. ಮಂಗಳಮುಖಿಯರು ಹಾಗೂ ಗ್ರಾಮದ ಹಿರಿಯರಿಗೆ ವಿಶ್ವಚೇತನ ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಶ್ರೀ ಬಸವರಾಜ ಹೊರಪೇಟೆ ಇವರಿಂದ ದಂತ ಗಂಡರಿಗೆ ಸನ್ಮಾನ ಮಾಡಲಾಯಿತು.
ನಂತರ ಭಕ್ತರು ಕಾಯಿ ಕರ್ಪೂರ ಅರ್ಪಿಸಿ ಕರಿಲಿಂಗೇಶ್ವರ ಹಾಗು ಶ್ರೀ ಅಯ್ಯಾಳಪ್ಪ ತಾತನ ಕೃಪೆಗೆ ಪಾತ್ರರಾದರು.ಭಕ್ತರು ಯಾವುದೇ ಜಾತಿ ಭೇದವಿಲ್ಲದೆ ದೇವರ ಮಹಾ ಪ್ರಸಾದವನ್ನು ಸ್ವೀಕರಿಸಿ.ಶ್ರೀಕರಿ ಲಿಂಗೇಶ್ವರ ಹಾಗೂ ಶ್ರೀ ಅಯ್ಯಪ್ಪ ತಾತನ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಹಾಲುಮತ ಸಮಾಜದ ಪ್ರಮುಖರಾದ ಅಮರಪ್ಪ ಹಿರೇಕುರುಬರು. ಕರಿಯಣ್ಣ ಹಳೆಮನೆ. ಬಸುವ ಬೆಂಗಳೂರು. ಬಸವರಾಜ್ ಹೊರಪೇಟೆ. ಅಮರಗುಂಡ ಮಿಂಚಿ. ಅಯ್ಯಾಳಪ್ಪ ಹೊರಪೇಟೆ.ಹಾಗೂ ಹಿರೇನಗನೂರ್ ಚುಕನಟ್ಟಿ ಗ್ರಾಮದ ಸಾವಿರಾರು ಜನರು ಕರಿಲಿಂಗೇಶ್ವರ ಪಲ್ಲಕ್ಕಿ ಉತ್ಸವ ಹಾಗೂ ಅಯ್ಯಾಳಪ್ಪ ತಾತನ ಆಶೀರ್ವಾದ ಪಡೆದರು.
ಹಿರಿನಾಗನರ್
ಪ್ರತ್ಯುತ್ತರಅಳಿಸಿ