"ಐದು ದಿನ ಆಚರಿಸುವ ಗ್ರಾಮೀಣ ಭಾಗದ ಸೊಗಡಿನ ಹಬ್ಬ ನಾಗರ ಪಂಚಮಿ "
*ಸಮಾಜಿಕ ಸಾಮರಸ್ಯ ಪ್ರತಿಬಿಂಬಿಸಿದ ನಾಗರ ಪಂಚಮಿ*
ಕೊಟ್ಟೂರು: ಸಹೋದರತ್ವ ಸಾರಿದ ನಾಗರ ಪಂಚಮಿ ಹಬ್ಬ ಅಣ್ಣ-ತಂಗಿ ಸಂಬಂಧ ಗಟ್ಟಿಗೊಳಿಸುವ ರಕ್ಷಾಬಂಧನ ಮುನ್ನವೇ ಅಣ್ಣ-ತಂಗಿ ಬಾಂಧವ್ಯ ಬೆಸೆಯುವಲ್ಲಿ ಮುನ್ನುಡಿ ಇಟ್ಟಿದೆ. ಗಂಡನ ಮನೆಗೆ ಹೋದ ತಂಗಿ ಹಬ್ಬಕ್ಕೆ ಕರೆಯಲು ಅಣ್ಣನಿಗೆ ನೆನಪಿಸುವ ಜನಪದ ಸಾಲುಗಳು ನಾಗರ ಪಂಚಮಿಯಲ್ಲಿ ಸಹೋದರತ್ವ ಸಾರಿದೆ ಎಂಬುದು ಮಹತ್ವದ್ದು.
ಪಂಚಮಿ ಬಂತು ಸನಿಯಾಕ.. ನಮ್ಮಣ್ಣಾ ಬರಲಿಲ್ಲ ಕರಿಯಾಕ, ಅವರೇನವ್ವ ಸಾವ್ಯಾರು.. ನಾವೇನವ್ವ ಬಡವು. ಎಂಬ ಜಾನಪದ ಹಾಡು ನಾಗರ ಪಂಚಮಿ ಹಬ್ಬವನ್ನು ಶ್ರೀಮಂತಗೊಳಿಸಿದೆ.
ಗಂಡನ ಮನೆಗೆ ಹೋದ ಮಹಿಳೆಯರಿಗೆ ತವರು ಮನೆ ನೆನಪಿಸುವ ಈ ಹಾಡು ಜನಪದ ಕವಿಗಳು ಅನುಭವದಿಂದ ರಚಿಸಿದ ಉತ್ಕೃಷ್ಟ ಗೀತೆ. ಉತ್ತರ ಕರ್ನಾಟಕ ಬಯಲು ಸೀಮೆಯಲ್ಲಿ ವಿಶೇಷವಾಗಿ ಪಂಚಮಿ ಹಬ್ಬ (ಐದು) ದಿನಗಳು ಆಚರಿಸುವ, ಮಹಿಳೆಯರು ಹೇಗೆ ಸಂಭ್ರಮಿಸುತ್ತಾರೆ. ಎಂಬುದನ್ನು ಜನಪದ ಕಲಾವಿದರು ಅಕ್ಷರಗಳಿಂದ ಬಣ್ಣಿಸುವ ಹಬ್ಬವಿದು. ನಾಗದೇವರು ಅಪಾಯ ತರದಿರಲಿ, ಮಳೆ-ಬೆಳೆ ಸಮೃದ್ಧವಾಗಲಿ ಎಂದು ರೈತರು ಪ್ರಾರ್ಥಿಸುವ ನಾಗರಪಂಚಮಿ ಬರ ಇರಲಿ, ಬೆಳೆ ಇರಲಿ ವೈಭವದಿಂದ ಆಚರಣೆಗೊಳ್ಳುತ್ತದೆ.
ಐದು ದಿನದ ಹಬ್ಬ: ನಾಗರ ಅಮಾವಾಸ್ಯೆಯಿಂದ 5 ದಿನಗಳು ಆಚರಿಸಲ್ಪಡುವ ನಾಗರ ಪಂಚಮಿ ಪ್ರಯುಕ್ತ ನಾಗರ ಹುತ್ತ, ದೇವರ ಜಗುಲಿ ಮುಂದೆ ನಾಗಮೂರ್ತಿ ಇಟ್ಟು ಮನೆಮಂದಿಯೆಲ್ಲ ಹಾಲೆರೆಯುವದು, ಹುತ್ತ ಮುರಿಯುವದು, ರೊಟ್ಟಿ ಪಂಚಮಿ, ವರ್ಷ ತೊಡಕು ಹೀಗೆ ಬಹು ಆಚರಣೆ ಹಬ್ಬವಾಗಿದೆ ನಾಗರ ಪಂಚಮಿ.
ರೊಟ್ಟಿ ಪಂಚಮಿ: ಕೋಮು ಸೌಹಾರ್ದದ ಪ್ರತೀಕ ರೊಟ್ಟಿ ಪಂಚಮಿ ದಿನದಂದು ಮೊದಲೇ ತಯಾ- ರಿಸಿದ ಕಡಕ್ ರೊಟ್ಟಿಯಲ್ಲಿ ತರತರದ ಪಲೈ, ಚಟ್ಟಿ,
ಉಂಡಿಗಳು ಪದಾರ್ಥವಿಟ್ಟು ಪರಸ್ಪರ ಮನೆಗೆ ಹಂಚಿ ಸಮಾಜದಲ್ಲಿ ಎಲ್ಲರೂ ಒಂದೇ ಎಂಬ ಭಾವ ಬಿಂಬಿಸುವಲ್ಲಿ ಸಮಾನತೆ ಸಾರಿದ ರೊಟ್ಟಿ ಪಂಚಮಿ. ಗ್ರಾಮೀಣ ಭಾಗದಲ್ಲಿ ಯುವತಿಯರು, ಯುವಕರು ಸಣ್ಣ ಮಕ್ಕಳು,ಜೋಕಾಲಿಯಾಡಿ ಹಬ್ಬವನ್ನು ಸಂಭ್ರಮಿಸುತ್ತಾರೆ.
ಕೊಟ್ -1
ಸಹೋದರತ್ವ ಸಾರಿದ ನಾಗರ ಪಂಚಮಿ ಹಬ್ಬ ಅಣ್ಣ-ತಂಗಿ ಸಂಬಂಧ ಗಟ್ಟಿಗೊಳಿಸುವ ರಕ್ಷಾಬಂಧನ ಮುನ್ನವೇ ಅಣ್ಣ-ತಂಗಿ ಬಾಂಧವ್ಯ ಬೆಸೆಯುವ ಪಂಚಮಿ ಹಬ್ಬ ಆಚರಣೆ ಎಂದು ಕವಿತಾ ಹೇಳಿದರು
ಕೊಟ್ -2
ಗಂಡನ ಮನೆಗೆ ಹೋದವರು ಯಾವುದೇ ಹಬ್ಬ ಕೈಬಿಟ್ಟರೂ ನಾಗರ ಪಂಚಮಿಗೆ ವಾರಗಟ್ಟಲೇ ತವರಿಗೆ ಹೋಗುವುದರಿಂದ ಇದು ಮಹಿಳೆಯರ ಹಬ್ಬವಾಗಿ ಗುರುತಿಸಿಕೊಂಡಿದೆ. ಉತ್ತರ ಕರ್ನಾಟಕ ಭಾಗದ ಗ್ರಾಮೀಣ ಪ್ರದೇಶದಲ್ಲಿ ಐದು ದಿನಗಳವರೆಗೆ ಸಾಮಾಜಿಕ ಸಾಮರಸ್ಯ ಪ್ರತಿಬಿಂಬಿಸಿದ ನಾಗರ ಪಂಚಮಿ ಸಂಭ್ರಮದಿಂದ ಆಚರಿಸಲ್ಪಡುತ್ತದೆ.
- ಟಿ ಮಹಾಂತೇಶ್ ಹ್ಯಾಳ್ಯ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ