*ಹೊಸಳ್ಳಿ ಉಜ್ಜಯಿನಿ ಜಗದ್ಗುರು ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ವಿ.ಸಿ ಪಾಟೀಲ್ ಅವರಿಗೆ ಬೀಳ್ಕೊಡುಗೆ*
ಕಾನ ಹೊಸಹಳ್ಳಿ: ಶ್ರೀ ಉಜ್ಜಿನಿ ಜಗದ್ಗುರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 23 ವರ್ಷಗಳ ನಿರಂತರ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕ ವಿ.ಸಿ ಪಾಟೀಲ್ ಅವರನ್ನು ಶುಕ್ರವಾರ ಹಳೆ ವಿದ್ಯಾರ್ಥಿಗಳು ಸನ್ಮಾನಿಸಿ ಬೀಳ್ಕೊಟ್ಟರು. ಈ ಶಾಲೆಯಲ್ಲಿ ಶಿಕ್ಷಣ ಪಡೆದ ಎಲ್ಲಾ ಬ್ಯಾಚಿನ ಸಹಪಾಠಿ ವಿದ್ಯಾರ್ಥಿಗಳು ಭಾಗಹಿಸಿದ್ದರು. ತಮ್ಮ ಅಚ್ಚುಮೆಚ್ಚಿನ ಗುರುವಿನ ಸೇವಾ ನಿವೃತ್ತಿಗೆ ಶುಭ ಕೋರಿ, ಹೂವಿನ ಹಾರ ಸನ್ಮಾನಿಸಿ ಗ್ರುಪ್ ಪೋಟೋ ತೆಗೆಸಿಕೊಂಡು ಸಂತಸಪಟ್ಟರು.
ಈ ವೇಳೆ ಹಳೆಯ ವಿದ್ಯಾರ್ಥಿ ಮಾಂತೇಶ್ ಮಾತನಾಡಿ ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವವಾದುದು. ಇಂತಹ ಶಿಕ್ಷಕರು ನಮಗೆ ಸಿಕ್ಕಿದ್ದು ತುಂಬಾ ಅಪರೂಪ ಎಂದು ಅವರ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಎಸ್.ಎಂ ಮಂಜುನಾಥ ಮಾತನಾಡಿ ಶಿಕ್ಷಕರು ನಿವೃತ್ತಿ ಹೊಂದಿದ ನಂತರ ಶಿಕ್ಷಕರಿಗೆ ನಾವು ಕೊಡುವ ಗೌರವ, ಸನ್ಮಾನ ಅವರಿಗೆ ಉಳಿಯುತ್ತದೆ. ನಾವು ವ್ಯಾಸಂಗದ ಅವಧಿಯಲ್ಲಿ ಶಿಕ್ಷಕರು ನೀಡುವ ಸಲಹೆ, ಸೂಚನೆ ಮಾರ್ಗದರ್ಶನಗಳು ನಮ್ಮ ಜೀವನ ಪೂರ್ತಿ ನೆರವಾಗುತ್ತವೆ. ನಮಗೆ ದಾರಿ ತೋರಿದ ಶಿಕ್ಷಕರಿಗೆ ಸ್ಮರಿಸೋಣ ಎಂದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳಾದ ಕೆ ನಾರಪ್ಪ, ಶಿಕ್ಷಕರಾದ ರೇವಣಸಿದ್ದಪ್ಪ, ಶಿವಕುಮಾರ್, ರಾಧಿಕಾ, ರಾಧಮ್ಮ ಹಾಗೂ ಗ್ರಾ.ಪಂ ಮಾಜಿ ಅಧ್ಯಕ್ಷ ಎಂ ದುರುಗಪ್ಪ, ಎಂ.ಎನ್ ರಾಘವೇಂದ್ರ, ಜಿ ತಿಪ್ಪೇಶ್, ಸುರೇಶ್, ಅಜ್ಜಯ, ಶಿವಕುಮಾರ್, ನಂದೀಶ್, ರಮೇಶ್ ಡಿ.ಎನ್, ಸೇರಿದಂತೆ ಶಾಲೆಯ ಶಿಕ್ಷಕರು, ಜೈ ಭೀಮ ಯುವಸೇನೆ ಹೊಸಹಳ್ಳಿಯ ಯುವಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ