ಸ್ಪೂರ್ತಿ ಧಾಮಕ್ಕೆ ಡಾ.ಮಲ್ಲಪ್ಪ.ಕೆ ಯರಗೋಳ ತಹಶೀಲ್ದಾರ್ ಭೇಟಿ
ಮಸ್ಕಿ : ಪಟ್ಟಣದ ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಡಿಯಲ್ಲಿ ಸ್ಥಾಪಿತವಾಗಿರುವ ಅಭಿನಂದನ್ ಸ್ಪೂರ್ತಿ ಧಾಮಕ್ಕೆ ಮಸ್ಕಿಯ ತಹಶೀಲ್ದಾರ್ ರಾದ ಡಾ.ಮಲ್ಲಪ್ಪ ಕೆ ಯರಗೋಳ ಭೇಟಿ ನೀಡಿ ಮಕ್ಕಳ ಕುಸಲೋಪಚಾರವನ್ನು ವಿಚಾರಿಸಿದರು.
ಈ ಒಂದು ಸಂಸ್ಥೆಯು ಶಿಕ್ಷಣದಿಂದ ವಂಚಿತ ಮಕ್ಕಳ ಶಿಕ್ಷಣಕ್ಕಾಗಿ ಈ ಆಶ್ರಮವನ್ನು ಸ್ಥಾಪಿಸಿದ್ದು ಈ ಆಶ್ರಮಕ್ಕೆ ನಾವು ಎಲ್ಲಾ ಇಲಾಖೆಗಳಿಂದ ನೆರವನ್ನು ನೀಡುತ್ತೇವೆ ಹಾಗೂ ಇಂತಹ ಸೇವೆಯಿಂದ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸಾಧ್ಯ ಎಂದರು ಈ ಆಶ್ರಮದ ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರೆಯುತ್ತಿದ್ದು ವಿಶೇಷವಾಗಿ ಖೋ ಖೋ ಕ್ರೀಡೆಯಲ್ಲಿ ಮಿನಿ ಪ್ಯಾರ ಒಲಂಪಿಕ್ ಗೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ ಎಂದರು ನಾವು ಬಿಡುವಿನ ವೇಳೆಯಲ್ಲಿ ಈ ಆಶ್ರಮಕ್ಕೆ ನಿರಂತರವಾಗಿ ಭೇಟಿ ನೀಡುತ್ತೇವೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಅಭಿನಂದನ್ ಸಂಸ್ಥೆಯ ಸಂಸ್ಥಾಪಕ ರಾಮಣ್ಣ ಹಂಪರಗುಂದಿ ಶಿಕ್ಷಕರಾದ ಜಾಫರ್ಮಿಯ, ಮಲ್ಲಿಕಾರ್ಜುನ್ ಬಡಿಗೇರ್, ಸ್ಪೂರ್ತಿ ಧಾಮದ ಮಕ್ಕಳು ಉಪಸ್ಥಿತರಿದ್ದರು.
ವರದಿ ಪ್ರಸಾರ ಮಾಡಿದ್ದಕ್ಕಾಗಿ ಅನಂತ ಕೋಟಿ ನಮನಗಳು ಸರ್
ಪ್ರತ್ಯುತ್ತರಅಳಿಸಿ