ಪ್ರಗತಿಯ ಪಥದ ಹಾದಿಯಲ್ಲಿಬ್ಯಾಂಕ - ರಾಜಶೇಖರ ಗೌಡ ಆಡೂರ

ವರದಿ - ಮಂಜುನಾಥ್ ಕೋಳೂರು ಕೊಪ್ಪಳ 

ಕೊಪ್ಪಳ :- ಈ ದಿನಮಾನಗಳಲ್ಲಿ ' ಸಾಕಷ್ಟು ಪೈಪೋಟಿ ಮತ್ತು ಒತ್ತಡಗಳ ನಡುವೆಯೂ ಬ್ಯಾಂಕ್ ವ್ಯವಹಾರಿಕವಾಗಿ ಉತ್ತಮ ಪ್ರಗತಿ ಪಥದ ಹಾದಿಯಲ್ಲಿ ಸಾಗುತ್ತಿದೆ . ಈ ಒಂದು ಒಳ್ಳೆ ಕಾರ್ಯಕ್ಕೆ ಗ್ರಾಹಕರ ಬೆಂಬಲವೇ ಕಾರಣ ಎಂಬುದು ಸದಾ ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು' ಎಂದು ಗವಿಸಿದ್ದೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ರಾಜಶೇಖರ್ ಗೌಡ ಆಡೂರ ಹೇಳಿದರು. ನಗರದಲ್ಲಿರುವ ಶಿವ ಶಾಂತವೀರ ಕಲ್ಯಾಣ ಮಂಟಪದಲ್ಲಿ ನಡೆದ ಬ್ಯಾಂಕಿನ 91ನೇ ಸಾಮಾನ್ಯ ಸಭೆಯಲ್ಲಿ ವಾರ್ಷಿಕ ವರದಿ ಮಂಡಿಸಿ ಅವರು ಮಾತನಾಡಿದರು . ' ಗ್ರಾಹಕರೊಂದಿಗೆ ನಾವು ಉತ್ತಮ ಬಾಂಧವ್ಯ ಹೊಂದುವುದು ಮೊದಲ ಆದ್ಯತೆ ಆಗಬೇಕು. ಗ್ರಾಹಕರ ವಿಶ್ವಾಸ ಗಳಿಸಿ ಉತ್ತಮ ಸೇವೆ ನೀಡಲು ವಿಶೇಷ ಗಮನ ನೀಡಲಾಗುತ್ತಿದೆ.

ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಬ್ಯಾಂಕ್ ವ್ಯವಹಾರ ಸೇವೆಗಳನ್ನು ನೀಡಲಾಗುತ್ತಿದ್ದು ಬ್ಯಾಂಕಿನ ಆರ್ಥಿಕ ಸಹಾಯ ಪಡೆದ ಅನೇಕ ಗ್ರಾಹಕರು ಇಂದು ಆರ್ಥಿಕವಾಗಿ ಬಲಿಷ್ಠರಾಗಿದ್ದಾರೆಂದು , ಪ್ರಸಕ್ತ ವರುಷದಲ್ಲಿ ಹಲವಾರು ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಗ್ರಾಹಕರ ಹಾಗೂ ಶೇರುದಾರಿಗೆ " ಕೋರ್ ಬ್ಯಾಂಕಿಂಗ್ " ಜನಪ್ರಿಯತೆ ಪಡೆದಿದ್ದು , ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಕೊಪ್ಪಳದ ಆರಾಧ್ಯ ದೈವ ಶ್ರೀಗವಿಸಿದ್ದೇಶ್ವರ ಸ್ವಾಮಿರವರ ಭಾವ ಚಿತ್ರಕ್ಕೆ , ರಾಷ್ಟ್ರದ ಪ್ರಪ್ರಥಮ ಸಹಕಾರ ಸಂಘ ಸಂಸ್ಥಾಪಕರಾದ ದಿ.ಶ್ರೀ ಸಿದ್ದನಗೌಡ ಸಣ್ಣ ರಾಮನಗೌಡ ಪಾಟೀಲ್ ರವರ ಭಾವಚಿತ್ರಕ್ಕೆ , ಶ್ರೀ ಗವಿಸಿದ್ದೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಕೊಪ್ಪಳ ಬ್ಯಾಂಕಿನ ಸಂಸ್ಥಾಪಕರಾದ ಯಜಮಾನ್ ಶ್ರೀ ವೀರಣ್ಣನವರು ಅಂಗಡಿ ರವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಲಾಯಿತು. ಇದೇ ವೇಳೆ ಬ್ಯಾಂಕ್ ಸದಸ್ಯರ ಮಕ್ಕಳಿಗೆ ಉನ್ನತ ಮಟ್ಟದ ಶೈಕ್ಷಣಿಕವಾಗಿ ಪ್ರೇರಣೆಯಾಗಲಿ ಎಂದು ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆಗಳಲ್ಲಿ ಶೇಕಡಾ 90 % ಹಾಗೂ ಹೆಚ್ಚಿನ ಅಂಕ ಪಡೆದು ಸಾಧನೆ ಮಾಡಿರುವಂತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ " ಪ್ರತಿಭಾ ಪುರಸ್ಕಾರ" ನೀಡಲಾಯಿತು . ಬ್ಯಾಂಕಿನ ನಿಹಮಾವಳಿಗನುಗುಣವಾಗಿ ಬ್ಯಾಂಕಿನ ಜೊತೆ ಒಳ್ಳೆಯ ರೀತಿಯಲ್ಲಿ ವ್ಯವಹಾರವನ್ನು ಮಾಡಿರುವಂತಹ ಶೇರುದಾರರು ಹಾಗೂ ಗ್ರಾಹಕರಿಗೆ " ಗ್ರಾಹಕ ಸೇವಾ ರತ್ನ ಪ್ರಶಸ್ತಿ " ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರುಗಳಾದ ಬ್ಯಾಂಕಿನ ಉಪಾಧ್ಯಕ್ಷ ಬಸಯ್ಯ .ಎಸ್. ಹಿರೇಮಠ , ಬ್ಯಾಂಕ್ ನಿರ್ದೇಶಕರುಗಳಾದ ಶಿವಾರಡ್ಡಿ.ಹೇ. ಭೂಮಕ್ಕನವರ , ಬಸವರಾಜ ಶಹಾಪೂರ , ಶಿವಕುಮಾರ ಪಾವಲಿ ಶೆಟ್ಟರ , ರಮೇಶ್ ಎಂ ಕವಲೂರ , ನಾಗರಾಜ .ಡಿ. ಅರಕೇರಿ , ರಾಜೇಂದ್ರ ಕುಮಾರ್ ಶೆಟ್ಟರ್, ವಿಶ್ವನಾಥ್ ಅಗಡಿ , ಗವಿಸಿದ್ದಪ್ಪ ತಳಕಲ್ , ವಿ.ಬಿ. ಅಂಗಡಿ , ಎ.ಎಸ್. ಮಂಗಳೂರ, ಸುಮಂಗಲಾ ಸೋಮಲಾಪುರ, ಸೈಯದಾ ಸೈನಾಜಬೇಗಂ, ಜಯಶ್ರೀ ಬಬಲಿ, ಬ್ಯಾಂಕಿನ ಸಿಬ್ಬಂದಿ ವರ್ಗದವರಾದ ಪ್ರಧಾನವ್ಯವಸ್ಥಾಪಕರಾದ ಪ್ರಭಾಕರ್ .ಎಚ್. ಜೋಶಿ , ವ್ಯವಸ್ಥಾಪಕ/ ಮಾರಾಟಾಧಿಕಾರಿಯಾದ ಮಲ್ಲಿಕಾರ್ಜುನ ಸಿದ್ನೆ ಕೊಪ, ಸಹಾಯಕ ವ್ಯವಸ್ಥಾಪಕರಾದ ವೀರಮ್ಮ ನರಗುಂದ, ಹಿರಿಯ ಸಹಾಯಕರಾದ ಐ.ಜೆ.ನದೀಮುಲ್ಲಾ, ಪರಿಚಾರಕರಾದ ತಿಪ್ಪಣ್ಣ ತಿಮ್ಮಾಪುರ, ಸಿಪಾಯಿಗಳಾದ ನಾಗರಾಜ ನಿಡಸೇಸಿ, ಮೆಹಬೂಬ ತಬೇಲಿ, ಬ್ಯಾಂಕಿನ ಗುತ್ತಿಗೆ ಆಧಾರ ನೌಕರರು , ಪಿಗ್ಮಿ ಏಜೆಂಟರು , ಬ್ಯಾಂಕಿನ ಸಲಹೆಗಾರರು , ಬಂಗಾರ ಆಭರಣ ಮೌಲ್ಯಮಾಪಕರು, ಬ್ಯಾಂಕಿನ ಶೇರುದಾರರು ಹಾಗೂ ಬ್ಯಾಂಕಿನ ಗ್ರಾಹಕರುಪಾಲ್ಗೊಂಡಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ