ಸ್ವಾತಂತ್ರ್ಯದ ಘನತೆ ಎತ್ತಿ ಹಿಡಿಯಬೇಕು --- ಡಾ.ಷಣ್ಮಖಯ್ಯ ತೋಟದ

 

 ವರದಿ - ಮಂಜುನಾಥ ಕೋಳೂರು ಕೊಪ್ಪಳ

 ಕೊಪ್ಪಳ : - ತಾಲೂಕಿನ ಅಳವಂಡಿ ಹೋಬಳಿ ಮೈನಹಳ್ಳಿ ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯದಿನೋತ್ಸವದಂದು ಶ್ರೀ ಅಡವಿಬಸಯ್ಯ ತೋಟದ ಶಿಕ್ಷಣ , ಸಾಹಿತ್ಯ, ಮತ್ತು ಸಾಂಸ್ಕೃತಿಕ ಸಂಸ್ಥೆ (ರಿ) ಮೈನಹಳ್ಳಿ ಸಂಸ್ಥೆಯ ಸಂಸ್ಥಾಪಕರಾದ ಡಾ.ಷಣ್ಮುಖಯ್ಯ ತೋಟದ ಸಾಹಿತಿ, ಕಲಾವಿದ, ಸಮಾಜಸೇವಕರು ಮಾತಾಡುತ್ತ ಸ್ವಾತಂತ್ರ್ಯಕ್ಜಾಗಿ ಅನೇಕ ಮಾಹನಾಯಕರು ತಮ್ಮ ಜೀವನ ಬಲಿದಾನ ಮಾಡಿದ್ದಾರೆ . ಆ ಸ್ವಾತಂತ್ರ್ಯಕ್ಕೆ ದಕ್ಕೆಯಾಗದಂತೆ ಅದರ ಘನತೆ ಎತ್ತಿ ಹಿಡಿಯಬೇಕೆಂದು ತಿಳಿಸಿದರು.  

 ತಂದೆ ತಾಯಿಯವರ ಸವಿನೆನಪಗಾಗಿ ಶಾಲೆಯ ಎಲ್ಲಾ ವಿಧ್ಯಾರ್ಥಿಗಳಿಗೆ ನೋಟ ಬುಕ್ಕ್, ಪೆನ್ನು, ಪೆನ್ಸಿಲ್, ಜಾಮೆಟ್ರಿ ಬಾಕ್ಸ್ ಮತ್ತು ಮೂರು ಅಂಗನವಾಡಿ ಕೇಂದ್ರಗಳಿಗೆ ಬುಕ್ಕ್ ರಾಕ್ ವಿತರಣೆ ಮಾಡಿದರು ಮತ್ತು ೫ ಮತ್ತು ೮ ನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಸಮಾರಂಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಡಾ.ಷಣ್ಮುಖಯ್ಯ ತೋಟದವರಿಗೆ ಸನ್ಮಾನ ಮಾಡಿದರು .

        ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯರು ಮತ್ತು ಕ.ರಾ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಂಭುಲಿಂಗನಗೌಡ್ರು ಪಾಟೀಲ ಮಾತನಾಡುತ್ತ ಶಾಲೆಯ ಸುಧಾರಣೆ ಮತ್ತು ಸ್ವಾತಂತ್ರ್ಯದ ಬಗ್ಗೆ ತಿಳಿಸಿದರು. ಎಸ್.ಡಿ.ಎಮ್.ಎಸ್. ಅಧ್ಯಕ್ಷರಾದ ಮಹೇಂದ್ರಕಮಾರ ಕುರಡಿಗಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು. ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಮರಿಶಾಂತವೀರಸ್ವಾಮಿ ಚಕ್ಕಡಿ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದರು . ಕಾರ್ಯಕ್ರಮದಲ್ಲಿ ಸಿದ್ದರಡ್ಡಿ ಡಂಬ್ರಳ್ಳಿ, 

ಅಂಗನವಾಡಿ ಕಾರ್ಯಕರ್ತೆಯರು , ಆಶಾ ಕಾರ್ಯಕರ್ತೆಯರು, ಊರಿನ ಗುರು‌ - ಹಿರಿಯರು , ಗಣ್ಯರು , ಶಾಲೆಯ ಸಹ ಶಿಕ್ಷಕರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ