ಕಾನಾ ಹೊಸಹಳ್ಳಿ 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ

ವಿಜಯನಗರ ಜಿಲ್ಲಾ ಕೂಡ್ಲಿಗಿ ತಾಲ್ಲೂಕು ಕಾನಾ ಹೊಸಹಳ್ಳಿ ಹೋಬಳಿ ಹೊಸಹಳ್ಳಿ ನಾಡಕಛೇರಿ 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಉಪ ತಹಶೀಲ್ದಾರರು ಜಿ ಚಂದ್ರ ಮೋಹನ್ ಧ್ವಜಾರೋಹಣ ನೆರವೇರಿಸಿ,

 ಉಪ ತಹಶೀಲ್ದಾರರು ಜಿ ಚಂದ್ರ ಮೋಹನ್ ಮಾತನಾಡಿ ಸ್ವಾತಂತ್ರ್ಯಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟು, ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ವೀರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನವನ್ನು ಸ್ಮರಿಸಿದರು.

ನಂತರ ನಿವೃತ್ತ ಶಿಕ್ಷಕರಾದ ಕೋಟ್ರಣ್ಣ ಮಾತನಾಡಿ ರಾಷ್ಟ್ರಕ್ಕಾಗಿ,ರಾಷ್ಟ್ರದ ಜನತೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಸಿಂಹ ಸದೃಶರ ತ್ಯಾಗ ಬಲಿದಾನಗಳಿಂದ 1947 ಆಗಸ್ಟ್ 14 ರ ಮಧ್ಯರಾತ್ರಿಯೆಂದು ದೇಶ ಸ್ವಾತಂತ್ರ್ಯವನ್ನು ಪಡೆಯಿತು. ಬ್ರಿಟೀಷರಿಂದ ಭಾರತವನ್ನು ಸ್ವಾತಂತ್ರಗೊಳಿಸುವುದಕ್ಕಾಗಿ ಅನೇಕ ಚಳುವಳಿಗಳು ನಡೆದವು.ಆ ನಿಟ್ಟಿನಲ್ಲಿ 1857 ರಲ್ಲಿ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು.ಈ ಸಮರದ ನೇತೃತ್ವವನ್ನು ಝಾನ್ಸಿರಾಣಿ ಲಕ್ಷ್ಮೀಬಾಯಿ,ತಾಂತ್ಯಾಟೋಪಿ,ನಾನಾ

ಸಾಹೇಬ್ ಮೊದಲಾದವರು ವಹಿಸಿದ್ದರು. ಆದರೆ ಈ ಒಂದು ಸಮರಕ್ಕೆ ವ್ಯಾಪಕ ಬೆಂಬಲ ದೊರೆಯದೇ ಸಂಗ್ರಾಮ ವಿಫಲವಾಯಿತು.ಎಂದು ತಿಳಿಸಿದರು .

 ಕೆ ಸುಭಾಷ್ ಚಂದ್ರ ಮಾತನಾಡಿ ನಮ್ಮ ದೇಶ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯುವುದಕ್ಕೆ ತ್ಯಾಗ ಬಲಿದಾನಗಳು ಸಂಘರ್ಷಗಳು ಹೋರಾಟಗಳು ನಡೆದಿವೆ ಕೊನೆಯದಾಗಿಅಹಿಂಸೆಯ ಮೂಲಕ ನಮಗೆ ಸ್ವಾತಂತ್ರ್ಯ ದಕ್ಕಿದೆ. ಯುವಜನತೆ ಸ್ವತಂತ್ರ ಹೋರಾಟ ಸಾಮಾಜಿಕ ರಾಜಕೀಯ ನೆಲೆಯಲ್ಲಿ ಇತಿಹಾಸ ಮತ್ತು ನಮ್ಮ ಭವ್ಯ ಪರಂಪರೆಯನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಯುವಕರಲ್ಲಿ ಸ್ವಾಭಿಮಾನ ದೇಶಪ್ರೇಮ ಹೆಚ್ಚುತ್ತದೆ.

 ನಮ್ಮ ರಾಷ್ಟ್ರಧ್ವಜ ನಮ್ಮ ಹೆಮ್ಮೆ ನಮ್ಮ ರಾಷ್ಟ್ರಧ್ವಜವು ತ್ಯಾಗ ಸತ್ಯ ಶಾಂತಿ ಪರಿಶುದ್ಧತೆ ಮತ್ತು ಸಸ್ಯ ಶಾಮ್ ಅಲೆಯಾದ ಭೂಮಿಯ ಸಂಕೇತವಾಗಿದ್ದು ಕೃಷಿಯ ಸಮೃದ್ಧಿಯನ್ನು ಸೂಚಿಸುತ್ತದೆ. ಯಾವುದೇ ಧರ್ಮ ಜಾತಿ ಬಣ್ಣವನ್ನು ಅದು ಒಳಗೊಂಡಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ವಿ ಮಹಾದೇವಪ್ಪ, ಕಂದಾಯ ಪರೀವೀಕ್ಷಕರಾದ ಸಿದ್ದಪ್ಪ .ಗ್ರಾಮಲೆಕ್ಕಾಧಿಕಾರಿಗಳಾದ , ಚನ್ನಬಸಯ್ಯ. ಕೊಟ್ರೇಶ ,ಶ್ರೀನಿವಾಸ ಕೋಂಡಿ ,ಕೊಟ್ರೇಶ್,ಇಮ್ರಾನ್, ಅಂಬುಜಾಕ್ಷಿ,ಮಮತಾ, ಸಿಬ್ಬಂದಿ ಅನಿತಾ ಪೂಜಾರಿ,ಮಂಜುನಾಥ , ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನೇತ್ರವತಿ ಮಂಜುನಾಥ್, ಗೌರಮ್ಮ,ಗ್ರಾಮ ಪಂಚಾಯತಿ ಸದಸ್ಯ ಹೊನ್ನೂರ ಸ್ವಾಮಿ, ಜೋಗಿಹಳ್ಳಿ ಸಿದ್ದಪ್ಪ, ಮುಖಂಡರಾದ ಫೋಟೋ ನಾಗರಾಜ, ನಡುಮನೆ ತಿಪ್ಪೇಸ್ವಾಮಿ,

ಕುಂಬಾರ್ ಹನುಮಂತಪ್ಪ ,ಹನುಮಂತಪ್ಪ. ಮಾರಪ್ಪ. ನಾಗರಾಜ್. ಸೇರಿದಂತೆ ಹಾಗು ಗ್ರಾಮ ಸಹಾಯಕರುಗಳು ಸೇರಿ ಇತರರು ಸಾರ್ವಜನಿಕರು ಉಪಸ್ಥಿತರಿದ್ದರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ