ಸರಕಾರಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗೆ ಗ್ರಾಮ ಪಂಚಾಯತಿ ವತಿಯಿಂದ ಸನ್ಮಾನ
ವರದಿ - ಮಂಜುನಾಥ್ ಕೋಳೂರು ಕೊಪ್ಪಳ
ಕೊಪ್ಪಳ : - ತಾಲೂಕಿನ ಕಾತರಕಿ ಗುಡ್ಲಾನೂರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿ 2023-24ರ ಸಾಲಿನ ಎಸ್ .ಎಸ್. ಎಲ್ .ಸಿ . ಪರೀಕ್ಷೆಯಲ್ಲಿ ಗರಿಷ್ಠ 625 ಅಂಕಗಳಿಗೆ ಕನಿಷ್ಠ 607 ಅಂಕಗಳನ್ನು ಪಡೆದು ಶೇಕಡವಾರು 97.12℅ ಹಾಗೂ 2024 - 25ರ ಸಾಲಿನ ಪಿ.ಯು.ಸಿ ಪ್ರಥಮ ವರ್ಷದ ಸೈನ್ಸ್ ಪಿ.ಸಿ.ಎಂ .ಬಿ ವಿಭಾಗದಲ್ಲಿ 93.25℅ ಶೇಕಡವಾರು ಅಂಕ ಪಡೆದು ಗ್ರಾಮದ ಸರ್ಕಾರಿ ಶಾಲೆಯಲ್ಲಿ ತಾಲೂಕಿಗೆ ಹೆಚ್ಚಿನ ಅಂಕಪಡೆದು ಕೊಪ್ಪಳ ತಾಲೂಕು ಹಾಗೂ ಕಾತರಕಿ ಗುಡ್ಲಾನೂರ್ ಗ್ರಾಮಕ್ಕೆ ಕೀರ್ತಿ ತಂದಂತ ಹಾಗೂ ಜಿಲ್ಲಾಧಿಕಾರಿಗಳಿಂದ ಲ್ಯಾಪಟ್ಯಾಪ್ ಹುಡುಗರಿಯಾಗಿ ವಿದ್ಯಾಭ್ಯಾಸ ಸಲಕರಣೆ ಪಡೆದಂತ ವಿದ್ಯಾರ್ಥಿ ನವೀನ್ ಕುಮಾರ್ ತಂದೆ ಪರಮೇಶಪ್ಪ ಬಡಿಗೇರ್ ಈ ವಿದ್ಯಾರ್ಥಿಗೆ ಕಾತರಕೀ ಗುಡ್ಲಾನೂರ್ ಗ್ರಾಮಪಂಚಾಯತಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪುಣೆ೯ಂದ್ರಯ್ಯ
ವಿದ್ಯಾರ್ಥಿಯ ಸಾಧನೆ ಬಗ್ಗೆ ಮಾತನಾಡುತ್ತಾ ಎಸ್ .ಎಸ್ .ಎಲ್ .ಸಿ ಯಲ್ಲಿ ನಮ್ಮ ಕಾತರಕಿ ಗುಡ್ಲನ್ನೂರ ಗ್ರಾ,ಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಕೊಪ್ಪಳ ತಾಲೂಕಿಗೆ ಹಾಗೂ ಕಾತರಕಿ ಗುಡ್ಲನ್ನೂರ ಗ್ರಾಮಕ್ಕೆ ಹಾಗೂ ಅವರ ತಂದೆ ತಾಯಿಯ ಹೆಸರು ತಂದಂತ ನವೀನ್ ಕುಮಾರ ಪರಮೇಶ್ವರಪ್ಪ ಬಡಿಗೇರ ಈ ವಿದ್ಯಾರ್ಥಿಯ ಬಗ್ಗೆ ಇಡೀ ಊರಿಗೆ ಊರು ಮಾತನಾಡುವ ಹಾಗೆ ಕೀರ್ತಿ ಪಡೆದಿರುವಂತ ಈತನ ಮುಂದಿನ ಹೆಚ್ಚಿನ ವಿದ್ಯಾಭ್ಯಾಸವು ಮಾಡಿ ಇನ್ನೂ ಉತ್ತುಂಗದ ಮಟ್ಟಕ್ಕೆ ಏರಲಿ. ಮುಂದಿನ ದಿನಮಾನಗಳಲ್ಲಿ ರಾಜ್ಯಕ್ಕೆ ಮತ್ತು ಜಿಲ್ಲೆಗೆ ಕೀರ್ತಿ ತರುವಂತ ಆಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಮುತ್ತಪ್ಪ ಇಡಗಲ್, ಮಾಜಿ ಗ್ರಾಮ್ ಪಂಚಾಯತಿ ಅಧ್ಯಕ್ಷರಾದ ಎರಿಯಪ್ಪ ಗೌಡ್ರು, ಸದಸ್ಯರಾದ ವಿರುಪಾಕ್ಷಗೌಡರು ಪೊಲೀಸ್ ಪಾಟೀಲ್, ನಾಗರಾಜ್ ತಳಕೇರಾ , ಬಸವರಾಜಪ್ಪ ಹುಬ್ಬಳ್ಳಿ, ಮಲ್ಲಪ್ಪ ಮ್ಯಾಗಳಮನಿ , ಈಶಪ್ಪ ಬೈರಣ್ಣವರ್, ಸಂಜೀವ್ ರೆಡ್ಡಿ ಮೇಟಿ ಪರಮೇಶ್ ಬಡಿಗೇರ್, ನಾಗರಾಜ್ ಪಡೇಗೌಡರ, ವರದಿಗಾರರಾದ ಮಂಜುನಾಥ್ ಕೋಳೂರು ಹಾಗೂ ಉದಯ್ ತೋಟದ , ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಿಂದ್ರಯ್ಯ , ಕರ ವಸಲಿಗಾರ ಮರ್ಧನ ಸಾಬ್ ಆಲಿಬಾಯಿ, ಗ್ರಾಮ ಪಂಚಾಯತಿ ಸಿಬ್ಬಂದಿಯವರಾದ ಮಾರುತಿ ಪೂಜಾರ್ , ನಿಂಗಜ್ಜ ಕರಿಗಾರ್ , ಬಾಬು ಸಾಬ್ ನದಾಫ್ , ಅಶೋಕ್ ಪೂಜಾರಿ , ಯಮನೂರಪ್ಪ ಪೂಜಾರ್ ಹಾಗೂ ಊರಿನ ಗುರಿಯರು ಮುಖಂಡರು ಶುಭ ಹಾರೈಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ