ಯುವ ಪೀಳಿಗೆಗೆ ಪ್ರೇರಣೆ : ಗ್ರಾಮೀಣ ಭಾಗದ ವಿದ್ಯಾರ್ಥಿ ಇಸ್ರೋ ವಿಜ್ಞಾನಿ ಬಿ.ಎಚ್.ಎಂ.ದಾರುಕೇಶ್
ನಾಡಿನ ಹೆಮ್ಮೆಯ ವಿಜ್ಞಾನಿ ಬಿ.ಎಚ್.ಎಂ. ದಾರುಕೇಶ್ ಸಂದರ್ಶನ ನಡೆಯಿತು. ಬಾಲ್ಯದ ಅನುಭವಗಳನ್ನು ನೆನಪಿನ ಬುತ್ತಿಯನ್ನು ಬಿಚ್ಚುವ ಮೂಲಕ ಹೇಳಿದರು.
ಕೊಟ್ಟೂರು: ಶಿವಾನಿ ರೆಸಿಡೆನ್ಸಿ ಹೊಟೇಲ್ನಲ್ಲಿ ಹಳೆ ಕೊಟ್ಟೂರು ಸಂದರ್ಶನದ ನಂತರ ಕರ್ನಾಟಕ ಪತ್ರಕರ್ತರ ಸಂಘ ಕೊಟ್ಟೂರು ಇವರು ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಗ್ರಾಮೀಣ ಪ್ರದೇಶದಿಂದ ಬಂದವನು ನಾನು ಮೊದಲಿನಿಂದಲೂ ನನ್ನ ಕನಸು ಐಎಎಸ್ ಆಗಬೇಕೆಂಬುದು ಇಸ್ರೋದಲ್ಲಿ ವಿಜ್ಞಾನಿಗಳಾಗಿರುವುದು ವಿಶೇಷ ಎಂದು ಇಸ್ರೋ ವಿಜ್ಞಾನಿ ಬಿ.ಎಚ್.ಎಂ. ದಾರುಕೇಶ್ ಹೇಳಿದರು.
ಹೂವಿನ ಹಡಗಲಿ ಮೂಲ ನಿವಾಸಿ, ಕೊಟ್ಟೂರಿನಲ್ಲಿ ಶಿಕ್ಷಣ: ಇನ್ನು ಇಸ್ರೋ ವಿಜ್ಞಾನಿ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಬಾವಿಹಳ್ಳಿಯ ಮೂಲದ ಸುವರ್ಣಮ್ಮ ಹಾಗೂ ಮಹದೇವಯ್ಯ ದಂಪತಿ ಮೊದಲ ಪುತ್ರರಾಗಿ 1979ರ ಆ.6ರಂದು ದಾರುಕೇಶ್ ಜನಿಸಿದ್ದಾರೆ. ತಂದೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಕೂಡ್ಲಿಗಿ ತಾಲೂಕಿನ ಶಿವಪುರ ಗೊಲ್ಲರಹಟ್ಟಿಯಲ್ಲಿ ಏಕೋಪಧ್ಯಾಯ ಶಿಕ್ಷಕರಾಗಿದ್ದ ತಂದೆಯ ಸರ್ಕಾರಿ ಶಾಲೆಯಲ್ಲೇ ಒಂದರಿಂದ ನಾಲ್ಕನೇ ತರಗತಿ ಓದಿದ್ದು, ನಂತರ ಕೊಟ್ಟೂರು ನಾಗರಾಜ ಸರ್ಕಾರಿ ಪ್ರಾಥಮಿಕ ಶಾಲೆ, ಎಸ್ ಎಸ್ ಎಲ್ ಸಿ ಬಾಯ್ಸ್ ಹೈಸ್ಕೂಲ್ , ಕೊಟ್ಟೂರೆಶ್ವರ ಕಾಲೇಜು ಪಿಯುಸಿ ವಿಜ್ಞಾನ, ಬಿಎಸ್‌ಸಿ ಹಾಗೂ ಎಂಎಸ್ಸಿ ಹಾಗೂ ಪಿಎಚ್.ಡಿ ಪೂರ್ಣಗೊಳಿಸಿದ್ದಾರೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮಲ್ಲಿನ ಕೀಳರಿಮೆಯನ್ನು ಬಿಟ್ಟು ಉತ್ತಮ ಅಭ್ಯಾಸ ಮಾಡುವ ಮೂಲಕ ಸಿಕ್ಕ ಅವಕಾಶಗಳನ್ನು ಬಳಸಿಕೊಂಡರೆ ಪ್ರತಿಯೊಬ್ಬರು ಉನ್ನತವಾದದ್ದನ್ನು ಸಾಧಿಸಬಹುದು ಎಂದು ತಿಳಿಸಿದರು.
ಐಟಿಐ, ಡಿಪ್ಲೋಮೋ, ಫಿಸಿಕಲ್ ಸೈನ್ಸ್, 6ನೇ ತರಗತಿ ಹಾಗೂ ಡಿಗ್ರಿಯ ವಿದ್ಯಾಭ್ಯಾಸ ಒಳಗೊಂಡಿರಬೇಕು ಇಸ್ರೋ ಡಾಟ್ ಕಾಮ್ ಎಂಬ ವೆಬ್ಸೈಟ್ನಲ್ಲಿ ಆಸಕ್ತಿಲ್ಲಿರಬೇಕು ಎಂದರು
25 ವರ್ಷಗಳಿಂದ ಇಸ್ರೋ ವಿಜ್ಞಾನಿಯಾಗಿ ಸೇವೆ: ಎಂಎಸ್‌ಸಿ ವಿದ್ಯಾರ್ಥಿಯಾಗಿದ್ದಾಗ ಅಹಮದಾಬಾದ್ ಫಿಸಿಕಲ್ ರಿಸರ್ಚ್ ಲ್ಯಾಬರೋಟರಿಯಲ್ಲಿ ನೀಡಲಾಗುವ 2 ತಿಂಗಳ ತರಬೇತಿಗೆ ದಾರುಕೇಶ್ ಆಯ್ಕೆಯಾಗಿದ್ದರು. ದೇಶದ 25 ವಿದ್ಯಾರ್ಥಿಗಳಲ್ಲಿ ಇವರೂ ಒಬ್ಬರಾಗಿದ್ದರು. ಇದಾದ ನಂತರ, ದಾರುಕೇಶ್ ಅವರ ಜೀವನದ ಗುರಿ ಬದಲಾಯಿತು. ಭೌತಶಾಸ್ತ್ರದಲ್ಲಿ ಮುಂದುವರಿಯಲು ನಿರ್ಧರಿಸಿದ್ದ ಅವರು, 1998ರಲ್ಲಿ ಇಸ್ರೋ ವಿಜ್ಞಾನಿಯಾಗಿ ನೇಮಕವಾದರು. ಅಲ್ಲಿಂದ ಬರೋಬ್ಬರಿ 25 ವರ್ಷಗಳವರೆಗೆ ಹಲವು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಸದ್ಯ ಇಸ್ರೋ ಬೆಂಗಳೂರು ಕೇಂದ್ರ ಕಚೇರಿಯ ಸಹ ನಿರ್ದೇಶಕರಾಗಿದ್ದಾರೆ.
ನಳಂದ, ತಕ್ಷಶಿಲಾ ಕಾಲದಲ್ಲೇ ಭಾರತ ವಿಶ್ವಕ್ಕೆ ಜ್ಞಾನ ಹಂಚುತಿತ್ತು. ಆದರೂ ನಮ್ಮಿಂದ ಕೈಗಾರಿಕೆ ಕ್ರಾಂತಿ, ವಿದ್ಯುನ್ಮಾನ ಕ್ರಾಂತಿ ಸಾಧ್ಯವಾಗಲಿಲ್ಲ. ಈಗ ವಿಜ್ಞಾನ, ತಂತ್ರಜ್ಞಾನದಲ್ಲೂ ದೇಶ ಜಗತ್ತಿಗೆ ಜ್ಞಾನ ಹಂಚುವ ಮಟ್ಟಕ್ಕೆ ಬೆಳೆದಿದೆ’ ಎಂದು ತಿಳಿಸಿದರು.
ಈ ಮೂಲಕ ಭವಿಷ್ಯದ ಬದುಕನ್ನು ಕಟ್ಟಿಕೊಳ್ಳುವ ವಿದ್ಯಾರ್ಥಿಗಳಿಗೆ ಮೌಲ್ಯಯುತ ಸಲಹೆಗಳನ್ನು ನೀಡಿ ಪ್ರತಿಯೊಬ್ಬರು ಶಿಕ್ಷಣದ ಬಗ್ಗೆ ಮಹತ್ವ ನೀಡಬೇಕು ಎಂದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ