ಯಮನೂರಪ್ಪ ಹರಿಜನ ಕೊಲೆ ಆರೋಪಿತರಿಗೆ ಕಠಿಣ ಶಿಕ್ಷೆ ವಿಧಿಸಲು : ಡಿ.ಎಸ್.ಎಸ್ ಮನವಿ

ಮಸ್ಕಿ : ಪಟ್ಟಣದ ಬಸವೇಶ್ವರ ನಗರದ ತಹಶೀಲ್ದಾರರ ಕಚೇರಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾ ಸಾಹೇಬ್ ಡಾಕ್ಟರ್ ಎನ್ ಮೂರ್ತಿ ಸ್ಥಾಪಿತ ತಾಲೂಕ ಸಮಿತಿ ವತಿಯಿಂದ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದ ಯಮನೂರಪ್ಪ ಹರಿಜನ ಇವರನ್ನು ಧಾರುಣವಾಗಿ ಕೊಲೆ ಮಾಡಿದ ಆರೋಪಿತರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ನೊಂದ ಕುಟುಂಬಕ್ಕೆ 1 ಕೋಟಿ ಪರಿಹಾರ ಹಾಗೂ ಸರಕಾರಿ ನೌಕರಿ ನೀಡಬೇಕು 4 ಎಕರೆ ಜಮೀನು ನೀಡಬೇಕು ಎಂದು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ನೀಡಲಾಯಿತು.

ಭಾರತ ದೇಶ ಸ್ವತಂತ್ರವಾಗಿದೆ ಆದರೆ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಪ್ರತಿ ಮೂರು ನಿಮಿಷಕ್ಕೆ ಎಂಬಂತೆ ದಲಿತರ ಕೊಲೆಯಾಗುತ್ತಿದೆ. 18 ನಿಮಿಷಕ್ಕೆ ಒಮ್ಮೆ ಒಬ್ಬ ಮಹಿಳೆ ಮೇಲೆ ಅತ್ಯಾಚಾರ ನಡೆಯುತ್ತಿದೆ. ದೌರ್ಜನ್ಯ, ಅತ್ಯಾಚಾರ, ಕೊಲೆ, ಜಾತಿ ನಿಂದನೆ ಪ್ರಕರಣಗಳಲ್ಲಿ ಕೇವಲ ಬೆರಳಣಿಕೆ ಎಷ್ಟು ಶಿಕ್ಷೆ ಆಗುತ್ತದೆ ಆರೋಪಿಗಳು ಶಿಕ್ಷೆಯಿಂದ ಪಾರಾಗುತ್ತಾರೆ ದಲಿತರಿಗೆ ಭಯ ಹುಟ್ಟಿಸುತ್ತಾರೆ.

ಕಂಬಾಲಪಲ್ಲಿ ಯಿಂದ ಖೈರ್ಲಂಜಿ ವರೆಗೆ ಆಧುನಿಕ 21ನೇ ಶತಮಾನದಲ್ಲಿ ನಿರಂತರವಾಗಿ ದಲಿತ ಮಹಿಳೆ ಮೇಲೆ ಅತ್ಯಾಚಾರ, ಬಲತ್ಕಾರ, ಮಾನಭಂಗ ಕೃತ್ಯಗಳು ಅವಿರತವಾಗಿ ನಡೆಯುತ್ತವೆ ಇವತ್ತಿಗೂ ಕೂಡ ದಲಿತ ಜನರು ಅಪಾಯದ ಬದುಕು ಸಾಗಿಸುತ್ತಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶವಿಲ್ಲ. ಕ್ಷೌರ ಮಾಡುವುದಿಲ್ಲ. ಗುಡಿ ಪ್ರವೇಶವಿಲ್ಲ. ಹೋಟೆಲ್ ಪ್ರವೇಶವಿಲ್ಲ ಮತ್ತು ದಲಿತರಿಗೆ ಮಂಜೂರಾದ ಭೂಮಿಯನ್ನು ಕೊಡದೆ, ಭೂಮಾಲೀಕರು ದೌರ್ಜನ್ಯವೆಸಗಿ ತಾವೇ ಸಾಗುವಳಿ ಮಾಡುತ್ತಿದ್ದು. ಭೂ ಸುಧಾರಣೆ ಕಾಯ್ದೆ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನರಿಗೆ ಉದ್ಯೋಗ ಮೀಸಲಾತಿಯಲ್ಲಿ ಅನ್ಯಾಯವಾಗುತ್ತಿದೆ. ಪರಿಶಿಷ್ಟರ ರಕ್ಷಣೆಗೆಂದು ನೂರಾರು ಕಾನೂನುಗಳನ್ನು ಜಾರಿಗೆ ತಂದಿದ್ದರೂ ಅನುಷ್ಠಾನವಾಗುವಲ್ಲಿ ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿ ಕರ್ತವ್ಯ ನಿರ್ವಹಿಸುತ್ತಿದ್ದು ಇದರಿಂದ ದಲಿತರಿಗೆ ರಕ್ಷೆಣೆ ಇಲ್ಲದಂತೆ ಆಗಿದೆ.

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕ ಸಂಗನಾಳ ಗ್ರಾಮದ ಯಮನೂರಪ್ಪ ಹರಿಜನ ಈತನನ್ನು ಅದೇ ಗ್ರಾಮದ ಮುದುಕಪ್ಪ ಹಡಪದ ಎನ್ನುವ ವ್ಯಕ್ತಿ ಕ್ಷೌರ ಮಾಡಲು ಕೇಳಿದ್ದಕ್ಕೆ, ಚೂರಿಯಿಂದ ಹಿರಿದು ಕೊಲೆ ಮಾಡಿರುತ್ತಾರೆ. ದಿನಾಂಕ 17.08.2024 ರಂದು ಬೆಳಗ್ಗೆ 10:30 ಗಂಟೆ ಯಮನೂರಪ್ಪ ತಂದೆ ಈರಪ್ಪ ಬಂಡಿಹಾಳ ಜಾತಿ ಮಾದಿಗ ವಯಸ್ಸು 27 ಸಂಗನಾಳ ಗ್ರಾಮದ ಮುದುಕಪ್ಪ ಹಡಪದ ಇವರ ಕ್ಷೌರದ ಅಂಗಡಿಗೆ ಹೋಗಿ ಕ್ಷೌರ ಮಾಡಿಸಿಕೊಳ್ಳಲು ಜಗಳವಾಗಿದ್ದು. ಮುದುಕಪ್ಪನು ಯಮನೂರಪ್ಪನಿಗೆ ತಲೆ ಬೋಳಿಸುವ ಕತ್ತರಿಯಿಂದ ಹೊಟ್ಟೆಗೆ ಚುಚ್ಚಿತು, ಯಮನೂರಪ್ಪನು ಸ್ಥಳದಲ್ಲಿ ರಕ್ತಸ್ರಾವವಾಗಿ ಜೀವ ಬಿಟ್ಟಿದ್ದಾನೆ. ಕ್ಷೌರ ಮಾಡಲು ನಿರಾಕರಿಸಿ ಅಸ್ಪೃಶ್ಯನನ್ನು ಕೊಲೆ ಮಾಡಿರುವುದು ನಾಗರಿಕ ಸಮಾಜವೇ ತೆಲೆತಗ್ಗಿಸುವ ಕೃತ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ಇಂದಿಗೂ ಕೂಡ ದಲಿತ ಜನಾಂಗಕ್ಕೆ ಅಮಾನವೀಯ ನಡುವಳಿಕೆಯಿಂದ ಜೀವ ಸಾಗಿಸುವುದು ದುಸ್ತರವಾಗಿದೆ.

ಅಲ್ಲಿಯ ತಾಲೂಕ ಆಡಳಿತ ಬೀದಿ ನಾಟಕಗಳಲ್ಲಿ ಮಾತ್ರ ಅಸ್ಪೃಶ್ಯತೆ ನಿರ್ಮೂಲನೆ ಮಾಡುತ್ತಿದ್ದು ಜೀವಂತವಾಗಿರುವ ಅಮಾನವೀಯ ಪದ್ಧತಿಯ ಬಗ್ಗೆ ಯಾವುದೇ ಕಾನೂನು ಕ್ರಮ ತೆಗೆದುಕೊಂಡಿರುವುದಿಲ್ಲ. ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ. ಮಗನನ್ನು ಕಳೆದುಕೊಂಡ ಕುಟುಂಬ ಅನಾಥ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದು. ಕೂಡಲೇ ಆರೋಪಿ ಮುದುಕಪ್ಪ ಈತನಿಗೆ ಕಠಿಣ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಬೇಕು. ಮತ್ತು ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ರಕ್ಷಣೆ ಹೇಳಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ಕಠಿಣ ನಿಯಮ ಜಾರಿಗೊಳಿಸಬೇಕು ಎಂದು ಈ ಮನವಿ ಪತ್ರದ ಮೂಲಕ ಒತ್ತಾಯ ಪಡಿಸುತ್ತದೆ ಎಂದು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಜಮದಗ್ನಿ ಗೋನಾಳ,ಮರಿಸ್ವಾಮಿ ಮುಧಬಾಳ, ಮಲ್ಲಿಕ್ ಮುರಾರಿ,ಅನಿಲ್ ಕುಮಾರ್ ಮುದಬಾಳ, ಸಿದ್ದು ಉದ್ಬಾಳ್, ಶ್ರೀಕಾಂತ್ ಚಿಕ್ಕ ಕಡಬೂರು, ಸುಭಾಷ ಹಿರೇ ಕಡಬೂರು,ರಾಹುಲ್ ಮಸ್ಕಿ,ರವಿಕುಮಾರ್, ಸಾಯಿ ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ