ತಾಲೂಕು ಆಶ್ರಯದಲ್ಲಿ ಮದ್ಯವರ್ಜನ ಶಿಬಿರ ಉದ್ಘಾಟನೆ

ಕೊಟ್ಟೂರಿನ ಶ್ರೀ ಮರಳಸಿದ್ದೇಶ್ವರ ಸಭಾಭವನದಲ್ಲಿ 1841 ನೇ ಮಧ್ಯವರ್ಜನ ಶಿಬಿರವನ್ನು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಶ್ರೀ ಶ್ರೀ ಶ್ರೀ ಡಾ!! ಸಿದ್ದಲಿಂಗ ಮಹಾಸ್ವಾಮಿಗಳು  ಡೋಣೂರು ಚಾನುಕೋಟೆ ಮಠ ಕೊಟ್ಟೂರು  ಇವರ ದಿವ್ಯ ಸಾನಿಧ್ಯದಲ್ಲಿ  ಸೋಮವಾರ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು.  

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ  ಟ್ರಸ್ಟ್ (ರಿ) ಸಮುದಾಯ ಆರೋಗ್ಯ ಕೇಂದ್ರ ಕೊಟ್ಟೂರು,ಪಟ್ಟಣ ಪಂಚಾಯಿತಿ ಕೊಟ್ಟೂರು,ಆರಕ್ಷಕ ಠಾಣೆ ಕೊಟ್ಟೂರು ಸಹಕಾರದೊಂದಿಗೆ ಜರುಗಿತು.

ಈ ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆಯ ಕೊಪ್ಪಳ ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿಗಳಾದ ನಾಗೇಶ್ ರವರು ಇಡೀ ರಾಜ್ಯದಲ್ಲಿ  ಇದುವರೆಗೆ  1 ಲಕ್ಷಕ್ಕೂ ಹೆಚ್ಚಿನ  ಶಿಬಿರಾರ್ಥಿಗಳು  ಶಿಬಿರಕ್ಕೆ ಸೇರಿ ಕುಡಿತವನ್ನು ಬಿಟ್ಟಿದ್ದಾರೆ .ಮತ್ತು ಅವರ ಕುಟುಂಬಗಳಲ್ಲಿ ಅಭಿವೃದ್ಧಿ ಕಂಡುಕೊಂಡಿದ್ದಾರೆ. ಒಳ್ಳೆ ಹುದ್ದೆಗಳನ್ನು ಪಡೆದುಕೊಂಡಿದ್ದಾರೆ .ಕುಡಿತಕ್ಕೆ ದಾಸರಾಗಿರುವ ವ್ಯಕ್ತಿಗಳ ಮನೆಯ ಕುಟುಂಬಗಳು  ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ ಅಂತಹ ಎಷ್ಟೋ ಕುಟುಂಬಗಳಿಗೆ  ಈ ಒಂದು ಶಿಬಿರದಿಂದ ಅವರು ಕುಡಿತವನ್ನು ಬಿಟ್ಟು  ಒಳ್ಳೆಯ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಶ್ರೀಗಳು  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವೀರೇಂದ್ರ ಹೆಗಡೆಯವರ ಮೂಲಕ ನಡೆಯುವ ಈ ಒಂದು ಅದ್ಭುತ ಕಾರ್ಯಕ್ರಮ ಎಷ್ಟೋ ಕುಟುಂಬಗಳನ್ನು   ಕಾಪಾಡುವ ಒಳ್ಳೆಯ ಕೆಲಸವನ್ನು ಮಾಡುತ್ತಿದೆ  ಕುಡಿತವನ್ನು ಬಿಟ್ಟು ಒಳ್ಳೆಯ   ಜೀವನವನ್ನು ನಡೆಸಿಕೊಂಡು ಹೋಗುವ ಬಗ್ಗೆ ಶಿಬಿರಾರ್ಥಿಗಳಿಗೆ ಆಶೀರ್ವಚನವನ್ನು ನೀಡಿದರು .  

ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲೆಯ ಜಿಲ್ಲಾ ನಿರ್ದೇಶಕರು ಆದ ಸತೀಶ್ ಶೆಟ್ಟಿ ಸರ್ ಅವರು  ಮಾತನಾಡಿ ಈ ಒಂದು ಶಿಬಿರ  ಊರಿನ ಗಣ್ಯರು ಮತ್ತು ಮುಖಂಡರುಗಳ ಸಹಕಾರದಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು  ಗಣ್ಯರ ಸಹಕಾರ ಅತಿ ಮುಖ್ಯ. ಎಂದು ಹೇಳಿದರು 

ಈ ಕಾರ್ಯಕ್ರಮದಲ್ಲಿ ಉಪಸ್ಥಿತಿಯಲ್ಲಿ  ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು  ಶ್ರೀ ಮೈದೂರ್ ಶಿವಣ್ಣ,  ಗೌರವಾಧ್ಯಕ್ಷರು  ದೊಡ್ಡರಾಮಣ್ಣ, ಕೊಟ್ಟೂರೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ಶೇಖರಯ್ಯ, ಶ್ರೀಮತಿ ಭಾರತಿ ಸುಧಾಕರ್ ಪಾಟೀಲ್,  ದೇವರ ಮನೆ ಕೊಟ್ರೇಶ್. ಮರಿಸ್ವಾಮಿ  ವಿವೇಕಾನಂದ, ಡಾಕ್ಟರ್ ತಿಪ್ಪೇಸ್ವಾಮಿ ವೆಂಕಟೇಶ್,ಬರಮಪ್ಪ. ಜನಜಾಗೃತಿ ವೇದಿಕೆಯ ಸದಸ್ಯರ  ರೇವಣಸಿದ್ದಪ್ಪ, ಮಲ್ಲಿಕಾರ್ಜುನ್, ಎ. ಸಿ.ಚನ್ನಬಸಪ್ಪ,  ಉಪಾಧ್ಯಕ್ಷರಾದ ಶ್ರೀಮತಿ ಶಿಲ್ಪಾಕಲಾ, ಶ್ರೀಮತಿ ರೂಪ,ಶ್ರೀಮತಿ ನೇತ್ರಾವತಿ, ಮರಬ ಶಿವಣ್ಣ, ಕೋಶಾಧಿಕಾರಿಯದ ಚನ್ನಪ್ಪ, ಕ್ಷೇತ್ರ ಯೋಜನಾಧಿಕಾರಿಗಳಾದ ನವೀನ್ ಹೆಚ್. ಡಿ.ಮೇಲ್ವಿಚಾರಕರಾದ  ರುದ್ರೇಶ್,ಜಗದೀಶ್, ಸಾವಿತ್ರಿ  ಸದ್ದಾಮ್,ಸೌಮ್ಯ  ಮತ್ತು ತೊಟ್ಟಿಲು ಮಠ, ಕೊಟ್ಟೂರು ಸಿರಿಮಠ  ಎಲ್ಲಾ ಸೇವಾ ಪ್ರತಿನಿಧಿಗಳು  ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ