ಪಿ.ಎಸ್.ಐ ಪರಸುರಾಮ ಚಲವಾದಿ ಸಾವಿನ ತನಿಖೆ ಸಿಬಿಐಗೆ ವಹಿಸಬೇಕು - ಡಾ.ಆರ್. ಮೋಹನ್ ರಾಜ್

 

ವರದಿ - ಮಂಜುನಾಥ್ ಕೋಳೂರು ಕೊಪ್ಪಳ 

ಕೊಪ್ಪಳ ಅಗಸ್ಟ್ 7:- ಯಾದಗಿರಿ ಜಿಲ್ಲೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀ ದಿವಂಗತ ಪರಶುರಾಮ ಚಲವಾದಿ ಸೋಮನಾಳ ಇವರ ನಿಗೂಢ ದಾರುಣ ಸಾವನ್ನು ಖಂಡಿಸಿ ಸಿಬಿಐ ತನಿಖೆಗೆ ಆದೇಶಿಸ ಬೇಕು ಮತ್ತು ಪರಶುರಾಮ್ ರವರ ಪತ್ನಿ (ಮಡದಿ )ಗೆ ಸರ್ಕಾರಿ ನೌಕರಿ ಹಾಗೂ 50 ಲಕ್ಷ ರೂಗಳ ಪರಿಹಾರ ನೀಡಬೇಕು ಮತ್ತು ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ಆಗಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಸಂಘಟನೆಯ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ - ರಾಜ್ಯ ಸಂಚಾಲಕರಾದ ಡಾಕ್ಟರ್ ಆರ್ ಮೋಹನ್ ರಾಜ್ ರವರು ಹೇಳಿದರು. ದಿವಂಗತ ಪರಶುರಾಮ ಚಲವಾದಿ ಕೊಪ್ಪಳ ಜಿಲ್ಲೆಯ ಕಾರಟಿಗಿ ತಾಲೂಕಿನ ಸೋಮನಾಳ ಗ್ರಾಮದವರಾಗಿದ್ದು ಇವರ ನಿಗೂಢ ಸಾವನ್ನು ನಮ್ಮ ಸಂಘಟನೆ ಉಗ್ರವಾಗಿ ಖಂಡಿಸುತ್ತದೆ .ಇವರ ಈ ಸಾವನ್ನು ಸಿಬಿಐ ತನಿಖೆಗೆ ಆದೇಶಿಸಬೇಕು ಹಾಗೂ ಕರ್ನಾಟಕದಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ದೌರ್ಜನ್ಯ, ದಬ್ಬಾಳಿಕೆ , ಮೋಸ, ವಂಚನೆ ನಿಲ್ಲಬೇಕು . ಇಂಥ ನಿಷ್ಠಾವಂತ ಪೊಲೀಸ್ ಅಧಿಕಾರಿಗೆ ನ್ಯಾಯ ಒದಗಿರಿಸಬೇಕು ಮತ್ತು ಅವರ ಕುಟುಂಬಕ್ಕೆ ನ್ಯಾಯಯುತವಾದ ನ್ಯಾಯವನ್ನು ಒದಗಿಸಬೇಕು . 

ಪರಶುರಾಮ್ ಚಲವಾದಿ ಅವರು ದಿಟ್ಟ ಪ್ರಮಾಣಿಕ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿದ್ದು , ತಮ್ಮ ಚಿಕ್ಕ ವಯಸ್ಸಿನಲ್ಲಿ ಕಿತ್ತು ತಿನ್ನುವಂತ ಬಡತನ ಇದ್ದರೂ ಸಹ ಛಲ ಬಿಡದೆ ಸುಮಾರು ಐದ ರಿಂದ ಆರು ಸರ್ಕಾರಿ ಹುದ್ದೆಗಳಲ್ಲಿ ನೇಮಕಗೊಂಡರು ಅವರು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಇಷ್ಟಪಟ್ಟು ಆಯ್ಕೆ ಮಾಡಿಕೊಂಡು ಇಲಾಖೆಗೆ ಬಂದಿರುತ್ತಾರೆ . ಆದರೆ ಈ ಭ್ರಷ್ಟ ರಾಜಕಾರಣಿಗಳಾದ ಯಾದಗಿರಿ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಚನ್ನೇಗೌಡ ಹಾಗೂ ಅವರ ಮಗನಾದ ಸಣ್ಣೇಗೌಡ (ಪಂಪನಗೌಡ) ಎನ್ನುವ ಭ್ರಷ್ಟ ರಾಜಕಾರಣಿಗಳು ತಮ್ಮ ಕೆಲಸ ಗೋಸ್ಕರ ಇವರ ಮೇಲೆ ಸುಮಾರ್ ತಿಂಗಳಿಂದ ದೌರ್ಜನ್ಯ , ಕಿರುಕುಳ, ತಮ್ಮ ಅಧಿಕಾರ ದರ್ಪವನ್ನು ತೋರಿ ಮತ್ತು ಜಾತಿ ನಿಂದೇನೆಯನ್ನು ಮಾಡಿ ಮಾನಸಿಕವಾಗಿ ಚಿತ್ರಹಿಂಸೆ ನೀಡಿದ್ದರಿಂದ ಖಿನ್ನತೆಗೆ ಒಳಗಾಗುವಂತೆ ಮಾಡಿದ್ದು , 30 ಲಕ್ಷ ರೂಪಾಯಿಗಳು ಲಂಚಕ್ಕೆ ಬೇಡಿಕೆ ಇಟ್ಟು ಇವರನ್ನು ಮಾನಸಿಕವಾಗಿ ಕುಗ್ಗುವಂತೆ ಒತ್ತಡ ಎರಿ , ಭಯಪಡುವ ರೀತಿಯಲ್ಲಿ ಹೆದರಿಸಿ ಹೃದಯಘಾತ ಆಗುವಂತೆ ಮಾಡಿರುತ್ತಾರೆ. ಪಿ ಎಸ ಐ ಪರಶುರಾಮ್ ಅವರ ಈ ಧಾರಣ ಸಾವು ಘಟನೆಯನ್ನು ಸಿಬಿಐಗೆ ವಹಿಸಿ ತನಿಖೆ ಆಗಬೇಕು, ಭ್ರಷ್ಟ ರಾಜಕಾರಣಿಗಳನ್ನು ತಕ್ಷಣ ಬಂಧಿಸಬೇಕು ಹಾಗೂ ಅಧಿಕಾರದಿಂದ ಕೆಳಗಿಳಿಸಬೇಕು ತಪ್ಪಿತಸ್ಥರನ್ನು ಕಠಿಣವಾದ ಶಿಕ್ಷೆಗೆ ಒಳಪಡಿಸಿ ಅವರನ್ನು ಗಡಿಪಾರು ಮಾಡಬೇಕು.

 ಕರ್ನಾಟಕದಲ್ಲಿ ರಾಜಕಾರಣಿಗಳಿಂದ ಇಂತ್ತೀಚಿನ ದಿನಗಳಲ್ಲಿ ದಲಿತರ ಮೇಲೆ ಹಾಗೂ ದಲಿತ ನೌಕರರ ಮೇಲೆ ದೌರ್ಜನ್ಯ, ದಬ್ಬಾಳಿಕೆ , ಮೋಸ , ವಂಚನೆ , ಅನ್ಯಾಯ ಹೆಚ್ಚಾಗುತ್ತಿದ್ದು ಹಾಗೂ ಅವರ ಅಧಿಕಾರ ದರ್ಪದಿಂದ ಆಗುವುದನ್ನು ತಡೆದು , ದಲಿತರಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕು ,ಇಲ್ಲದಿದ್ದರೆ ನಮ್ಮ ಸಂಘಟನೆಯೂ ಕರ್ನಾಟಕ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ನಮ್ಮ ಸಂಘಟನೆಯಿಂದ ಎಚ್ಚರಿಕೆ ಸಂದೇಶ ರವಾನಿಸುತ್ತೇವೆ‌. ಮಾನ್ಯ ಮುಖ್ಯಮಂತ್ರಿಯವರು ಈ ಅನ್ಯಾಯಕ್ಕೆ ತಾವು ಪಕ್ಷಪಾತವಿಲ್ಲದೆ ಸಿಬಿಐ ತನಿಖೆಯನ್ನು ನಡೆಸಿ, ಈ ಅಧಿಕಾರಿಗೆ ಹಾಗೂ ದಲಿತ ಸಮುದಾಯಕ್ಕೆ ನ್ಯಾಯ ಒದಗಿಸಿಕೊಳ್ಳಬೇಕೆಂದು ಕರ್ನಾಟಕ ಸರ್ಕಾರ ಗೃಹ ಸಚಿವರಿಗೆ ಕೊಪ್ಪಳ ಅಪಾರಜಿಲ್ಲಾಧಿಕಾರಿಗಳ ಮುಖಾಂತರ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಸದಸ್ಯರಾದ ಹಾಸನದ ರಾಜು ಆರ್ಮಿ, ಹನುಮಂತಪ್ಪ ದೊಡ್ಮನಿ, ಸಂಘಟನೆಯ ಮುಖಂಡರಾದ ರಾಮಣ್ಣ ಚೌಡ್ಕಿ , ನರಸಪ್ಪ ಹಾಸಗಲ್ , ಹನುಮಂತಪ್ಪಹ್ಯಾಟಿ, ಪಾಮಣ್ಣ ಅರಗೋಲಿಗರ್, ಮೈಲಾರಪ್ಪ ಇಂದರಗಿ , ದುರ್ಗೇಶ್ ನವಲಹಳ್ಳಿ , ಮಂಜುನಾಥ್ ಕೋಳೂರು, ಕನಕಪ್ಪ ಕನಕಗಿರಿ , ಯಮನೂರಪ್ಪ ದೊಡ್ಮನಿ , ಯಮನೂರಪ್ಪ ಧನಕನ ದೊಡ್ಡಿ, ಎಮ್ ರವಿಕುಮಾರ, ಗವಿಸಿದ್ದಪ್ಪ ಬಂಡಿ , ಹನುಮೇಶ್ ಇಂದ್ರಗಿ , ಹನುಮಂತಪ್ಪ ಕಟ್ಟಿಮನಿ ಹನುವಾಳ , ಮಾಂತೇಶ್ ಕೊಳುರ , ಆರತಿ ಮಂಜುನಾಥ್ ಗಂಗಾವತಿ, ಭಾಷಾ ಹನುವಾಳ ಮುಂತಾದ ಸಂಘಟಕರು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ