ತಾಲೂಕು ಗಡಿಭಾಗದಲ್ಲಿರುವ ಹಗರಿ ಗಜಾಪುರ ಗ್ರಾಮ ರಾಜಕಾರಣಿಗಳು ,ಅಧಿಕಾರಿಗಳಿಂದ ನಿರ್ಲಕ್ಷ್ಯ

 

ಕೊಟ್ಟೂರು : ಇದೊಂದು ಸಮಸ್ಯಗಳನ್ನ ಮೈತುಂಬ ತುಂಬಿ ಕೊಂಡಿರವ ಗ್ರಾಮ ಸ್ವಾತಂತ್ರ್ಯ ಬಂದಾಗಿನಿಂದಲು ಡಾಂಬರು ಕಾಣದ ರಸ್ತೆ ಗಳು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಗಡಿ ಭಾಗದ ಹಗರಿ ಗಜಾಪುರ ಗ್ರಾಮ ಎತ್ತಲಿಂದ ನೋಡಿದರು ಅತಂತ್ರ ಸ್ಥಿತಿಯಲ್ಲಿದೆ 

ಈ ಹಿಂದೆ ಅಖಂಡ ಬಳ್ಳಾರಿ ಜಿಲ್ಲೆಯ ಲ್ಲಿದ್ದ ಗ್ರಾಮ ಜೆ.ಹೆಚ್. ಪಾಟೀಲ್ ಮುಖ್ಯಮಂತ್ರಿ ಇದ್ದಾಗ ಹರಪನಹಳ್ಳಿ ತಾಲೂಕು ನ್ನು ನೂತನ ದಾವಣಗೆರೆ ಜಿಲ್ಲೆಗೆ ಸೆರಿಸಿದರು ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ಮತ್ತೆ ಬಳ್ಳಾರಿ ಜಿಲ್ಲೆಗೆ ಮರು ಸೇರ್ಪಡೆ ಮಾಡಿದರು.

ಯಡಿಯೂರಪ್ಪ ಮುಖ್ಯಮಂತ್ರಿ ಆದಾಗ ನೂತನ ವಿಜಯನಗರ ಜಿಲ್ಲೆಗೆ ಸೇರ್ಪಡೆ ಮಾಡಿದರು. ಹೀಗೆ ಅಲ್ಲಿಂದ ಇಲ್ಲಿಂದ ಅಲ್ಲಿಗೆ ಗ್ರಾಮಸ್ಥರು ಪರದಾಡಿದ್ದೆ ಬಂತು ವಿಜಯನಗರ ಜಿಲ್ಲೆಯ ಕೊಟ್ಟೂರಿಗೆ ಕೇವಲ ಆರು ಕಿಲೋಮೀಟರ್ ದೂರದಲ್ಲಿ ಇರುವ ಹಗರಿ ಗಜಾಪುರ 

ವ್ಯವಹಾರಿಕವಾಗಿ ಮತ್ತು ವಿಧ್ಯಾಭ್ಯಾಸ ಕ್ಕಾಗಿ ಕೊಟ್ಟೂರನ್ನು ಅವಲಂಬಿಸಿದೆ ಹಗರಿ ಗಜಾಪುರ ಗ್ರಾಮದ ಪಕ್ಕದಲ್ಲಿ ಇರುವ ಗೌರಿಪುರ.ಬಸವನಾಳು.ಕೆಸರಹಳ್ಳಿ.ಬಳಗನೂರು ಮೈದೂರು ಗ್ರಾಮಗಳ ರೈತರು ಕೊಟ್ಟೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಅವಲಂಬಿಸಿದ್ದಾರೆ.

ಪ್ರತಿ ನಿತ್ಯ ಈ ಗ್ರಾಮ ವಂದಕ್ಕೆ ಒಂಬತ್ತು ಸಾರಿಗೆ ಸಂಸ್ಥೆ ಯ ಬಸ್ಸು ಸಂಚರಿಸುತ್ತವೆ. ಎಲ್ಲಾ ಬಸ್ಸು ಗಳ ಒಳ್ಳೆಯ ಕಲೆಕ್ಷನ್ ಬರುತ್ತಿವೆ. ದುರಂತವೆಂದರೆ ಈ ಗ್ರಾಮಸ್ಥರು ಅಭಿವೃದ್ಧಿ ವಿಚಾರದಲ್ಲಿ ಯಾವ ಜನಪ್ರತಿನಿಧಿಗಳನ್ನ ಕೇಳಬೇಕು ಎನ್ನುವ ಪರಿಸ್ಥಿತಿ ಇದೆ

ಕಾರಣ ಈ ಗ್ರಾಮದ ಕೊಟ್ಟೂರು ರಸ್ತೆ ಮೂರು ಕಿಲೋಮೀಟರ್ ಹರಪನಹಳ್ಳಿ ತಾಲೂಕು ಮತ್ತು ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ. ಉಳಿದ ಮೂರು ಕಿಲೋಮೀಟರ್ ಕೊಟ್ಟೂರು ತಾಲೂಕು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸೆರಿದೆ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ರಲ್ಲಿ ರಸ್ತೆ ಅಭಿವೃದ್ಧಿ ವಿಚಾರ ಕೇಳಿದರೆ ನಮ್ಮ ವ್ಯಾಪ್ತಿಯಲ್ಲಿ ಬರುವ ಮೂರು ಕಿಲೋಮೀಟರ್ ರಸ್ತೆ ಅಭಿವೃದ್ಧಿ ಮಾಡುತ್ತೆವೆ ಎಂದು ಭರವಸೆ ಕೊಡುತ್ತಾರೆ

ಇನ್ನುಳಿದ ಮೂರು ಕಿಲೋಮೀಟರ್ ರಸ್ತೆ ಅಭಿವೃದ್ಧಿ ಯಾರನ್ನ ಕೇಳಬೇಕು. ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ರನ್ನ ಈ ಗ್ರಾಮಸ್ಥರು ಪರಿಪರಿಯಾಗಿ ಬೇಡಿದರು ಕೇವಲ ಭರವಸೆ ನೀಡಿ ಸಾಗು ಹಾಕುತ್ತಾರೆ

ಕಾರಣ ಹಗರಿ ಗಜಾಪುರ ಗ್ರಾಮದ ಜನರ ಓಟು ಇವರಿಗೆ ಉಪಯೋಗ ವಿಲ್ಲ ಇತ್ತ ಬಳ್ಳಾರಿ ಲೋಕಸಭಾ ಸದಸ್ಯರನ್ನ ಕೇಳಿದರೆ ಅವರು ಹಾರಿಕೆ ಉತ್ತರ ನೀಡುತ್ತರೆ ಕಾರಣ ಅವರಿಗೂ ಗಜಾಪುರ ಗ್ರಾಮದ ಓಟು ಬರುವುದಿಲ್ಲ ಇತ್ತಾ ದಾವಣಗೆರೆ ಲೋಕಸಭಾ ಸದಸ್ಯ ರನ್ನ ಕೇಳಿದರೆ ಅವರು ನಮ್ಮ ವ್ಯಾಪ್ತಿಯಲ್ಲಿ ಬರುವ ದಿಲ್ಲ ಎಂದು ಸಾಗು ಹಾಕುತ್ತಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ