ಸಿ.ಕೆ ಸಂಸ್ಥೆಯು ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ

ಬೆಳಗಾವಿ : ಜಿಲ್ಲಾ ಪಂಚಾಯತ್ ಬೆಳಗಾವಿ,ಶಾಲಾ ಶಿಕ್ಷಣ ವಿಭಾಗ ಬೆಳಗಾವಿ ಹಾಗೂ ಸಿ ಕೆ ಸಂಸ್ಥೆ ಮುಂಬೈ ಇವರುಗಳ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ನಗರ ವಲಯದ ಸರ್ಕಾರಿ ಪ್ರಾಥಮಿಕ ಶಾಲೆಗಳ ನಾಲ್ಕು ಮತ್ತು 5ನೇ ತರಗತಿಗಳ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ಸಂ: 7 ಪುಲಬಾಗ ಗಲ್ಲಿ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಉದ್ಘಾಟಕರಾದ ಶ್ರೀಮತಿ ಎಲ್.ಎಸ್ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಬೆಳಗಾವಿ ನಗರ ವಲಯ ಇವರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಿ ಕೆ ಸಂಸ್ಥೆಯು ಸರಕಾರಿ ಶಾಲೆಗಳ ಶಿಕ್ಷಕರಿಗೆ ಅತ್ಯುತ್ತಮವಾದ ತರಬೇತಿಯನ್ನು ನೀಡುತ್ತಿದ್ದು, ಚಟುವಟಿಕೆ ಆಧಾರಿತ ಬೋಧನೆ, ನವೀನ ಬೋಧನಾ ವಿಧಾನಗಳ ಅಳವಡಿಕೆ, ತರಗತಿಯಲ್ಲಿ ಮಕ್ಕಳ ಸಹಭಾಗಿತ್ವ ಹೆಚ್ಚಿಸುವಿಕೆ, ಕಲಿಕಾ ಪ್ರದರ್ಶನ ಮುಂತಾದ ನವೀನ ಪದ್ಧತಿಗಳ ಮುಖಾಂತರ ಸಿಕೆ ಸಂಸ್ಥೆಯು ಟಿ ಐ ಪಿ ಕಾರ್ಯಕ್ರಮವನ್ನು ಬಹಳ ವ್ಯವಸ್ಥಿತವಾಗಿ ಅನುಷ್ಠಾನ ಗೊಳಿಸುತ್ತಿದ್ದು,ನಮ್ಮ ಇಲಾಖೆಯ ಸಹಕಾರ ಅವರಿಗೆ ಇದ್ದೇ ಇರುತ್ತದೆ ಎಂದರು.ಕಾರ್ಯಕ್ರಮದಲ್ಲಿ 70 ಕ್ಕೂ ಹೆಚ್ಚು ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ಹಾಗೆಯೇ ಸಿಕೆ ಸಂಸ್ಥೆಯು 2500 ಕ್ಕಿಂತ ಹೆಚ್ಚು ಮಕ್ಕಳಿಗೆ ಶಾಲಾ ಮಟ್ಟದಲ್ಲಿ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಐ ಡಿ ಪಾಟೀಲ ಕ್ಷೇತ್ರ ಸಮನ್ವಯಾಧಿಕಾರಿಗಳು,ಬೆಳಗಾವಿ ನಗರ ವಲಲಲಿತಾ ಕ್ಯಾಸನ್ನವರ,ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳು,ಬೆಳಗಾವಿ ನಗರ ವಲಯ ,ಶ್ರೀ ಸಂತೋಷ ಖೇಮಜಿ,ಸಿ.ಆರ್. ಸಿ,ಫುಲಬಾಗ ಗಲ್ಲಿ ಕ್ಲಸ್ಟರ್ ಹಾಗೂ ಸರ್ಕಾರಿ ಮರಾಠಿ ಮತ್ತು ಕನ್ನಡ ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ