ಸಡಗರ ಸಂಭ್ರಮದಿಂದ 78ನೇ ಸ್ವತಂತ್ರೋತ್ಸವದ ಧ್ವಜಾರೋಹಣ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸ ಹಳ್ಳಿ ಹೋಬಳಿಯ ಹೊಸಹಳ್ಳಿ ಗ್ರಾಮದ ಕನ್ನಡ ಭವನದ ಆವರಣದಲ್ಲಿ ಸ್ವಾತಂತ್ರ್ಯೋತ್ಸವದ ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷರಾದ ಎನ್ ಎಸ್ ತಿಪ್ಪೇಸ್ವಾಮಿ ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿ ಅನೇಕ ಹುತಾತ್ಮರ ತ್ಯಾಗ ಬಲಿದಾನದ ಪ್ರತೀಕ ನಮಗೆ ಸ್ವಾತಂತ್ರ್ಯ ದೊರೆತಿದೆ. ಪ್ರತಿಯೊಬ್ಬ ಭಾರತೀಯರು ಸ್ವತಂತ್ರ ಹೋರಾಟದಲ್ಲಿ ಮಡಿದ ದೇಶದ ಮಹನೀಯರ ಸ್ಮರಣೆ ಮನಃಪೂರ್ವಕವಾಗಿ ಮಾಡಬೇಕು. ಆ ಹಿರಿಯ ಚೇತನ ಶಕ್ತಿಗಳು ಚೆಲ್ಲಿದ ರಕ್ತ ಪ್ರಾಣದಿಂದ ಇಂದು ನಾವುಗಳು ದೇಶದಲ್ಲಿ ನೆಮ್ಮದಿಯಿಂದ ಉಸಿರಾಡುತ್ತಿದ್ದೇವೆ. ನಮ್ಮ ದೇಶ ಬಹುಗ್ರಾಮಗಳನ್ನು ಹೊಂದಿರುವ ಬಲಿಷ್ಠ ದೇಶಾಭಿಮಾನದ ಒಗ್ಗಟ್ಟು ಎಲ್ಲ ಜನಸ್ತೋಮ ಅಭಿಮಾನದಿಂದ ಎಂದು ತಿಳಿಸಿದರು. ವಿವಿಧತೆಯಲ್ಲಿ ಏಕತೆ ಇದ್ದರೆ ಭಾರತೀಯರು ಮೌಲ್ಯ ಹಾಗೂ ದೇಶದ ಘನತೆ. ಗೌರವ ಹೆಚ್ಚುವುದು. ಇಂದಿನ ಮಕ್ಕಳೇ ಭವಿಷ್ಯತ್ತಿನ ಕಿರಣಗಳು ಅವರಲ್ಲಿ ಒಳ್ಳೆಯ ಸಂಸ್ಕಾರ ಸಂಪ್ರದಾಯ ಸಂಸ್ಕೃತಿ ಭವ್ಯ ಭಾರತ ದೇಶದ ಪರಿಕಲ್ಪನೆ ಮೂಡಿಸುವುದು ಇಂದಿನ ವಿದ್ಯಾರ್ಥಿಗಳಿಗೆ ಅಗತ್ಯ ಎಂದರು.
ಇದೇ ಸಂದರ್ಭದಲ್ಲಿ ಹೊಸಹಳ್ಳಿ ಕನ್ನಡ ಭವನದ ಸ್ಥಳದಾನಿಗಳಾದ ಎಚ್ ಕೆ ವೆಂಕಟೇಶ್ವರ ರಾವ್. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಸಹ ಕಾರ್ಯದರ್ಶಿ. ಕೆ ಸುಭಾಷ್ ಚಂದ್ರ. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಕಾರ್ಯದರ್ಶಿ ಶಾಮ ಸುಂದರ ಸ ಪಾರೆ. ಹೋಬಳಿ ಘಟಕದ ಕೋಶ ಅಧ್ಯಕ್ಷರಾದ ರಾಮಕೃಷ್ಣ ಸಫಾರೆ. ಶರಣನಗೌಡ. ವೈಭವ ಶಾಲೆಯ ಮುಖ್ಯ ಗುರುಗಳಾದ ಪ್ರಕಾಶ್. ಕರಿ ಬಸಣ್ಣ. ವಿದ್ಯಾರ್ಥಿಗಳು ಸಾರ್ವಜನಿಕ ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ