ನೂಲು ಹುಣ್ಣುಮೆ ಪ್ರಯುಕ್ತ ಸಾಮೂಹಿಕ ಜನಿವಾರ ಧಾರಣೆ
ಮಸ್ಕಿ: ಪಟ್ಟಣದ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ನೂಲು ಹುಣ್ಣುಮೆ ನಿಮಿತ್ಯ ಪದ್ಮಶಾಲಿ(ನೇಕಾರ) ಸಮಾಜದಿಂದ ಸಾಮೂಹಿಕ ಜನಿವಾರ ಧಾರಣೆ ಕಾರ್ಯಕ್ರಮ ಸೋಮವಾರ ಯಶಸ್ವಿಯಾಗಿ ಜರುಗಿತು.
ಪುರೋಹಿತರ ಮಂತ್ರ ಘೋಷಗಳ ನಡುವೆ ಸಮುದಾಯದವರು ಸಾಮೂಹಿಕ ಜನಿವಾರ ಧಾರಣೆಯನ್ನು ಮಾಡಿಕೊಂಡರು.ಸಂಜೆ ಮಹಿಳೆಯರು ಕಳಸ ಹಾಗೂ ಡೊಳ್ಳಿನ ಕುಣಿತದೊಂದಿಗೆ ಮಾರ್ಕಂಡೇಶ್ವರರ 53 ನೇ ಪಲ್ಲಕ್ಕಿ ಉತ್ಸವವು ದೇವಸ್ಥಾನದಿಂದ ಪ್ರಾರಂಭವಾಗಿ ಸಂತೆ ಬಜಾರ ಮುಖಾಂತರ ಮಸ್ಕಿಯ ಆರಾಧ್ಯ ದೈವವಾಗಿರುವ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತೆರಳಿತು. ಸಮಾಜದ ಅಧ್ಯಕ್ಷ ಲಕ್ಷ್ಮಣ ಕರ್ಲಿ ನೂಲು ಹುಣ್ಣಿಮೆ ಅಂಗವಾಗಿ ಪದ್ಮಶಾಲಿ ಸಮಾಜ ಹಮ್ಮಿಕೊಂಡಿದ್ದ ಸಾಮೂಹಿಕ ಜನಿವಾರಧಾರಣೆ ಹಾಗೂ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಹೇಶ್ವರಿ ಮತ್ತು ಸಂಗಡಿಗರು ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಿದರೇ ಶ್ರೀಮತಿ ತನುಜಾ ನಿರೂಪಿಸಿದರೇ ಮೇಘನಾ ಸ್ವಾಗತಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ