ಜನಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷ್ಯ : ಉದ್ಘಾಟನೆ ಭಾಗ್ಯ ಕಾಣದ ಸಮುದಾಯ ಆರೋಗ್ಯ ಕೇಂದ್ರ
ವರದಿ : ಗ್ಯಾನಪ್ಪ ದೊಡ್ಡಮನಿ
ಮಸ್ಕಿ : ಸರಕಾರ ಮಸ್ಕಿ ತಾಲೂಕು ಎಂದು ಘೋಷಣೆ ಮಾಡಿ ಆರು ವರ್ಷ ಕಳೆದರೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂಲಭೂತ ಸೌಲಭ್ಯ ಹಾಗೂ ಖಾಯಂ ತಜ್ಞ ವೈದ್ಯರೂ, ಸಿಬ್ಬಂದಿ ವರ್ಗ ಇಲ್ಲದೇ ರೋಗಿಗಳು ಪರದಾಡುವ ಪರಿಸ್ತಿತಿ ನಿರ್ಮಾಣವಾಗಿದೆ. ತಾಲೂಕಿಗೆ ಸಾಕಷ್ಟು ಹಳ್ಳಿಗಳು, ತಾಂಡಾಗಳು ಒಳಪಡುತ್ತಿದ್ದು, ಜನರು ನಾನಾ ರೋಗರುಜಿನಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಡರೋಗಿಗಳು ಚಿಕಿತ್ಸೆಗೆಂದು ಬರುತ್ತಾರೆ. ಆದರೆ ಮೂಲಭೂತ ಸೌಕರ್ಯ ಕೊರತೆಯಿಂದಾಗಿ ಸಿಂಧನೂರು, ರಾಯಚೂರು, ಬಾಗಲಕೋಟೆ, ಕವಿತಾಳ, ಮುದಗಲ್, ಲಿಂಗಸುಗೂರಿನ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ಹೋಗುವ ದುಸ್ಥಿತಿ ಬಂದಿದೆ. ಪಟ್ಟಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇರುವುದರಿಂದ ಬಡಮಹಿಳೆಯರಿಗೆ ಹಿಂದೆ ಪ್ರತಿ ವಾರಕ್ಕೊಮ್ಮೆ ನಡೆಯುತ್ತಿದ್ದ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸಾ ಶಿಬಿರವು ಕಳೆದ ಐದು ವರ್ಷದಿಂದ ನಡೆಯದ ಕಾರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ವಿವಿಧ ಹಳ್ಳಿಗಳಿಂದ ಮಹಿಳೆಯರು ಸಂತಾನ ಶಕ್ತಿಹರಣ ಚಿಕಿತ್ಸೆಗೆಂದು ಪಟ್ಟಣಕ್ಕೆ ಬಂದರೆ ಮರಳಿ ಸರಕಾರಿ ಸಮುದಾಯ ಕೇಂದ್ರ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಮೊರೆ ಹೋಗುತ್ತಿದ್ದಾರೆ. ಏಕೆಂದರೆ ಇಲ್ಲಿರುವುದು ಪ್ರಾಥಮಿಕ ಆರೋಗ್ಯ ಕೇಂದ್ರ ಮಾತ್ರ, ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಲು ಸಮುದಾಯ ಆರೋಗ್ಯ ಕೇಂದ್ರ ಬೇಕಾಗುತ್ತದೆ. ಹಾಗೂ ನುರಿತ ಎಂಬಿಬಿಎಸ್ ಕಾಯಂ ವೈದ್ಯರು ಇಲ್ಲದಿರುವುದು, ಸರಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷೆಯಿಂದಾಗಿ ಕುಟುಂಬ ನಿಯಂತ್ರಣ ಯೋಜನೆ ಸ್ಥಗಿತವಾಗಿದೆ ಎಂದು ಬುದ್ಧಿವಂತ ನಾಗರೀಕರ ಆರೋಪವಾಗಿದೆ. ಇದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಕೋಣೆ ಬಿಕೋ ಎನ್ನುತ್ತಿದೆ. ಈ ಭಾಗದ ಶಾಸಕರು, ಸಂಸದರು ಹಾಗೂ ಅಧಿಕಾರಿಗಳು ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಯನ್ನು ಮಸ್ಕಿ ಪಟ್ಟಣದಲ್ಲಿ ದೊರೆಯುವಂತೆ ಮಾಡಬೇಕೆಂದು ಸಾರ್ವಜನಿಕರ ಅಳಲಾಗಿದೆ. ಏಕೆಂದರೆ ಬಡ ಕುಟುಂಬದ ಮಹಿಳೆಯರು ದುಬಾರಿ ಹಣ ನೀಡಿ ಖಾಸಗಿ ಆಸ್ಪತ್ರೆಗಳಲ್ಲಿ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಗ್ಯಾರೆಂಟಿಯನ್ನು ನೀಡಬೇಕೆಂಬುದು ಗೃಹಲಕ್ಷ್ಮೀಯರ ಆಗ್ರಹವಾಗಿದೆ.
ಬಾಕ್ಸ್-
ಸರಕಾರ ಹೇಳುವುದೇನೆಂದರೆ ಹಿಂದೆ ಬೇರೆ ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಂತಾನ ಶಕ್ತಿಹರಣ ಚಿಕಿತ್ಸೆಗೆ ಒಳಪಟ್ಟ ಮಹಿಳೆಯರಿಗೆ ಗಂಭೀರ ತೊಂದರೆಯಾಗಿದ್ದರಿಂದ ನಮ್ಮ ರಾಜ್ಯದಲ್ಲೂ ತಾತ್ಕಾಲಿಕವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕಲ್ಲಿಸಲು ಸರಕಾರ ಆದೇಶಿಸಿದೆ.
ಬಾಕ್ಸ್ –
ಐದು ವರ್ಷಗಳಿಂದಲೂ ಶಿಬಿರ ನಡೆಯದ ಕಾರಣ ಕೆಲವರು ಖಾಸಗಿ ಆಸ್ಪತ್ರೆಗಳಲ್ಲಿ ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಅಂದಾಜು 10 ರಿಂದ 15 ಸಾವಿರ ಹಣ ನೀಡಲು ಸಾಧ್ಯವಾಗದ ಕೆಲ ಬಡ ಕುಟುಂಬದ ಮಹಿಳೆಯರು ಉಚಿತ ಶಿಬಿರ ನಡೆಯುತ್ತದೆ ಎನ್ನುವ ಭರವಸೆ ನಡುವೆ ಮೊತ್ತಮ್ಮೆ ಗರ್ಭಿಣಿಯರಾಗಿದ್ದಾರೆ.
ಹೇಳಿಕೆ1: ಸಮುದಾಯ ಆರೋಗ್ಯ ಕೇಂದ್ರದ ವ್ಯಾಜ್ಯ ಇತ್ಯರ್ಥ ಆದ ನಂತರ ಹೊಸ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ದೊರೆಯುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಜೊತೆ ಚರ್ಚಿಸಿ ಪ್ರತಿ 15 ದಿನಗಳಿಗೊಮ್ಮೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಒಳಪಡುವ ಮಹಿಳೆಯರಿಗೆ ಬೇರೆ ಸಮುದಾಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲು ವಾಹನದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
- ಡಾ.ಸುರೇಂದ್ರ ಬಾಬು, ಡಿ.ಎಚ್.ಓ, ರಾಯಚೂರು
ಹೇಳಿಕೆ2: ನಮ್ಮದು ಸಮುದಾಯ ಆರೋಗ್ಯ ಕೇಂದ್ರವಲ್ಲದ ಕಾರಣ ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಲು ಸರಕಾರ ಆದೇಶ ನೀಡಿದರೆ ಮಾತ್ರ ಸಂತಾನ ಶಕ್ತಿಹರಣ ಚಿಕಿತ್ಸೆ ನೀಡಲು ಬರುತ್ತದೆ. ಈಗ ಸಂತಾನ ಶಕ್ತಿಹರಣ ಚಿಕಿತ್ಸೆಗಾಗಿ ಮಹಿಳೆಯರನ್ನು ಮುದಗಲ್, ಲಿಂಗಸುಗೂರು, ಹಾಗೂ ಕವಿತಾಳಗೆ ಕಳಿಸಲಾಗುತ್ತದೆ.
- ಡಾ.ಮೌನೇಶ, ಆಯುಷ್ ವೈದ್ಯಾಧಿಕಾರಿಗಳು,
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ