ಅನಾಥಾಲಯಕ್ಕೆ ಪುರಸಭೆ ನೂತನ ಅಧ್ಯಕ್ಷರು ಭೇಟಿ
ಮಸ್ಕಿ : ಪುರಸಭೆಯ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊಟ್ಟಮೊದಲ ಕಾರ್ಯವು ಅಭಿನಂದನ್ ಸ್ಪೂರ್ತಿ ಧಾಮಕ್ಕೆ ಬೋರ್ ವೆಲ್ ವ್ಯವಸ್ಥೆ ಕಲ್ಪಿಸಿದರು.
ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊಟ್ಟಮೊದಲ ಕಾರ್ಯವು ಅಭಿನಂದನ್ ಸ್ಪೂರ್ತಿ ಧಾಮಕ್ಕೆ ಬೋರ್ ವೆಲ್ ವ್ಯವಸ್ಥೆ ಕಲ್ಪಿಸುವ ಮೂಲಕ ನನ್ನ ಕಾರ್ಯವನ್ನು ಪ್ರಾರಂಭಿಸಿದ್ದೇನೆ.
ನಮ್ಮ ಪುರಸಭೆಯು ಅಭಿನಂದನ್ ಸ್ಪೂರ್ತಿಧಾಮಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ.ಇದು ನನ್ನ ಅಧಿಕಾರ ಅವಧಿಯ ಮೊದಲ ಕಾರ್ಯವಾಗಿರುವುದರಿಂದ ಜೀವನದಲ್ಲಿ ಈ ಕ್ಷಣವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಬಡವರ ಉದ್ಧಾರಕ ಹಾಗೂ ನೂತನ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಹೇಳಿದರು.
ಪುರಸಭೆಯ ಮುಖ್ಯ ಅಧಿಕಾರಿ ನರಸ ರೆಡ್ಡಿ ಮಾತನಾಡಿ ಅಭಿನಂದನ್ ಸ್ಪೂರ್ತಿಧಾಮವು ಎಲ್ಲಾ ಕ್ಷೇತ್ರಗಳಲ್ಲಿ ಅತ್ಯಂತ ಯಶಸ್ವಿಯಾಗಿ ಮುಂದುವರಿಯುತ್ತಿದ್ದು ಈ ಆಶ್ರಮದ ಮಕ್ಕಳ ಒಳಿತಿಗಾಗಿ ಹಾಗೂ ಊರಿನ ಒಳಿತಿಗಾಗಿ ಈ ಸೇವಾ ಕಾರ್ಯವನ್ನು ಮಾಡಲಾಯಿತು ಎಂದರು.
ಈ ಸಂದರ್ಭದಲ್ಲಿ ಅಭಿನಂದನ್ ಸಂಸ್ಥೆಯ ಸಂಸ್ಥಾಪಕ ರಾಮಣ್ಣ ಹಂಪರಗುಂದಿ, ಪುರಸಭೆಯ ಸದಸ್ಯರಾದ ಭರತ್ ಶೇಠ್, ಅಭಿನಂದನ್ ಸಂಸ್ಥೆಯ ಸದಸ್ಯರಾದ ಮಂಜುನಾಥ್ ಜೋಗಿನ್, ಜಾಫರ್ ಮಿಯಾ, ಕಿಶೋರ್,ಹಾಗೂ ಅಭಿನಂದನ್ ಸ್ಪೂರ್ತಿ ಧಾಮದ ಮಕ್ಕಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ