ಲಯನ್ಸ್ ಜಯನಗರದ ಮಾನವೀಯ ಸೇವೆಗೆ ಶಾಸಕರ ಶ್ಲಾಘನೆ

 

ಬೆಂಗಳೂರು, ಅಗಷ್ಟ್ 27 : “ಲಯನ್ಸ್ ಜಯನಗರವು ಕಳೆದ 42 ವರ್ಷಗಳಿಂದ ಅತ್ಯುತ್ತಮ ಮಾನವೀಯ ಸೇವೆ ಸಲ್ಲಿಸುತ್ತಾ ಬಂದಿದ್ದು, ಎಲ್ಲ ಸೇವಾ ಸಂಸ್ಥೆಗಳಿಗೂ ಮಾದರಿಯಾಗಿದೆ. ಸಂಸ್ಥೆಯು ಇದೇ ರೀತಿ ಮುಂದಿನ ದಿನಗಳಲ್ಲೂ ಅತ್ಯುತ್ತಮ ಸೇವೆ ಸಲ್ಲಿಸಲಿ. ನಾನು ಶಾಸಕನಾಗಿ ಸಂಸ್ಥೆಗೆ ಎಲ್ಲ ರೀತಿಯ ಸಹಕಾರ ನೀಡಲು ಬಯಸುತ್ತೇನೆ ಹಾಗೂ ಸಂಸ್ಥೆಯ ಸೇವೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳಲು ಬಯಸುತ್ತೇನೆ” ಎಂದು ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ.ಕೆ.ರಾಮಮೂರ್ತಿಯವರು ಅಭಿಪ್ರಾಯಪಟ್ಟಿದ್ದಾರೆ.

ಲಯನ್ಸ್ ಕ್ಲಬ್ ಜಯನಗರ ವತಿಯಿಂದ ಜಯನಗರ ಕಲ್ಚರಲ್ ಮತ್ತು ಸಿವಿಕ್ ಅಸೋಸಿಯೇಷನ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಜಯನಗರ ಲಯನ್ಸ್ ಸಂಸ್ಥೆಯ 43 ನೇ ಸಂಸ್ಥಾಪನ ದಿನಾಚರಣೆಯ ಸಂಭ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಜ್ಯೋತಿ ಬೆಳಗಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ ಶುಭಹಾರೈಸಿದರು.  

ಈ ಕಾರ್ಯಕ್ರಮದ ವೇದಿಕೆಯಲ್ಲಿ ಜಯನಗರ ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಡಾ. ಉಮೇಶ್ ಕುಮಾರ್, ಮಲ್ಟಿಪಲ್ ಕೌನ್ಸಿಲ್ ಚೇರ್ಮನ್ ಲಯನ್ ಶ್ರೀ ಕೃಷ್ಣೇಗೌಡ, ಮಾಜಿ ಜಿಲ್ಲಾ ರಾಜ್ಯಪಾಲರಾದ ಲಯನ್ ಶ್ರೀ ಹೇಮಂತ್ ಕುಮಾರ್, ಲಯನ್ ಶ್ರೀಮತಿ ಪ್ರಭಮೂರ್ತಿ ಮತ್ತು ಪದಾಧಿಕಾರಿಗಳು ಹಾಗೂ ಅನೇಕ ಲಯನ್ಸ್ ಸದಸ್ಯರು ಹಾಜರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ