ಅಣಬೆಯಿಂದ ಮಧುಮೇಹ, ರಕ್ತದೊತ್ತಡ ನಿಯಂತ್ರಿಸಬಹುದು

ಕೊಟ್ಟೂರು : ಅಶ್ಲೀಷ ಮಳೆ ಬಂದರೆ ಸಾಕು, ಹೊಲ, ಕಾಡುಗಳಲ್ಲಿ ಅಣಬೆಗಳು ಹುಟ್ಟುತ್ತವೆ. ಈ ಮಳೆ ಸುರಿದಾಗ ಮಾತ್ರ ಅಣಬೆ ಭೂಮಿಯಿಂದ ಮೇಲೇಳುವುದು.ಪ್ರಕೃತಿದತ್ತವಾಗಿ ಸಿಗುವ ಈ ಅಣಬೆÉಗಳಿಗೆ ಬಹಳ ಬೇಡಿಕೆ. ಆಶ್ಲೀಷ ಮಳೆಯಾದರೆ ರೈತರು ಅಣಬೆಗಳನ್ನು ಸಂಗ್ರಹಿಸುತ್ತಾರೆ. ಅದರಲ್ಲಿ ವಿವಿಧ ಖಾದ್ಯಗಳನ್ನು ಮಾಡಿ ಸೇವಿಸುತ್ತಾರೆ.

 ಸಮೃದ್ದವಾಗಿ ಇನ್ನೂ ಎರಡು ಮೂರು ಮಳೆಯಾದರೆ ಅಣಬೆಗಳು ಕಾಣಿಸುತ್ತವೆ. ಉಳಿದಂತೆ ಅಣಬೆಗಳು ಸಿಗುವುದಿಲ್ಲ. ಅಣಬೆಗಳಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಬಿ. ಕಾಂಪ್ಲಾಂಕ್ಸ್‍ಗಳೊಂದಿಗೆ ಪ್ರೋಟೀನ್ ಅಂಶವೂ ಹೇರಳವಾಗಿರುತ್ತದೆ.

ನಿಯಮಿತವಾಗಿ ಅಣಬೆಗಳನ್ನು ಸೇವನೆ ಮಾಡುವುದರಿಂದ ಮಧುಮೇಹ, ರಕ್ತದೊತ್ತಡ, ಸ್ಥೂಲಕಾಯ ರೋಗಗಳನ್ನು ನಿಯಂತ್ರಿಸಬಹುದು ಎಂದು ವೈದ್ಯಕೀಯ ಶಾಸ್ತ್ರ ದೃಢ ಪಡಿಸಿದೆ. ಪ್ರಕೃತಿ ದತ್ತವಾಗಿ ಸಿಗುವ ಆಹಾರ ಇದಾಗಿದ್ದು, ಉಳಿದ ಸಮಯದಲ್ಲಿ ಸಿಗುವುದಿಲ್ಲ. ಆದ್ದರಿಂದ ಅಣಬೆ ಬೀಜ ತಂದು ಬೆಳೆಯ ತೊಡಗಿದ್ದಾರೆ, ರೋಗ ನಿರೋಧಕ ಶಕ್ತಿ ಅಣಬೆಗೆ ಇರುವುದರಿಂದ ಎಲ್ಲರೂ ಅಣಬೆಗಳನ್ನು ಸೇವಿಸುತ್ತಾರೆ. 

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಣಬೆಯಿಂದ ಸಿದ್ದ ಪಡಿಸಿದ ಖಾದ್ಯವೆಂದರೆ ಬಹು ಅಚ್ಚುಮೆಚ್ಚು. ಸಮಯ ಸಿಕ್ಕಾಗಲ್ಲೆಲ್ಲಾ ಅಣಬೆಯ ಸಾಂಬಾರು ಮತ್ತು ಅಣಬೆಯಿಂದ ಮಾಡಿದ ಇತರೆ ಖಾದ್ಯಗಳನ್ನು ಸೇವೆನೆ ಮಾಡುತ್ತಾರೆ. ವರ್ಷದಲ್ಲಿ ಕೇಲವೇ ದಿನಗಳಲ್ಲಿ ಲಭಿಸುವ ಅಣಬೆ ನಂತರ ದಿನಗಳಲ್ಲಿ ಸಿಗದಿರುವುದನ್ನು ಮನಗಂಡ ಚೀನಾ ದೇಶದವರು ಮರದÀ ದಿಮ್ಮೆಗಳ ಮೇಲೆ ಬೆಳೆಯುವುದನ್ನು ಕಲಿತರು. ನಂತರ ಜಪಾನ್ ದೇಶಕ್ಕೆ ಪರಿಚಯಿಸಿದರು. ನಂತರ ವಿಧಾನವಾಗಿ ವಿಶ್ವದ ಇತರೆ ದೇಶಗಳಿಗೆ ಹರಡಿತು.

ನಮ್ಮ ದೇಶದ ಸ್ಟಾರ್ ಹೋಟಲ್‍ಗಳಲ್ಲಿ ಇಂದು ಅಣಬೆ ಖಾದ್ಯದ ವಿಶೇಷ ಎಂದು ಬೋರ್ಡ ಹಾಕುತ್ತಾರೆ. ಅಣಬೆ ಅಷ್ಟೊಂದು ಖ್ಯಾತಿಗಳಿಸಿದೆ. ಆದರೆ ಅಣಬೆ ಕೃಷಿಯನ್ನು ಬೆರಳೆಣಿಯಷ್ಟು ಜನರು ಮಾತ್ರ ಕೈಗೊಂಡಿದ್ದಾರೆ. ಅಣಬೆ ಕೃಷಿಯಲ್ಲಿ ಯಶಸ್ಸು ಕಂಡುಕೊಳ್ಳಬಹುದು. ಇತರೆ ಕೃಷಿಕರು ಮಾದರಿಯಾಗಬಹುದು. ಅಣಬೆ ಬೆಳೆಯಲು ವಿಸ್ತಾರವಾದ ಭೂಮಿಯೇನು ಬೇಡ.

ಚಿಕ್ಕಮನೆ ಇದ್ದರೂ ಸಾಕು. ಕಳೆದ ಕೆಲವು ತಿಂಗಳಿಂದ ರೈತರು ತಮ್ಮ ಮನೆಯ ಚಿಕ್ಕ ಕೋಣೆಯಲ್ಲಿಯೇ ಅಣಬೆ ಬೆಳೆಯಬಹುದು. ಇದು ತಿಂಗಳ ಬೆಳೆ. ಆರಂಭದಲ್ಲಿ ಇದರಲ್ಲಿ ನಷ್ಟ ಆಗಬಹುದು. ತರುವಾಯ ಯಶಸ್ಸು ತನ್ನತಾನೇ ಸಿಗುತ್ತದೆ..

ಪ್ರತಿ ದಿನ ನಾಲ್ಕು ಕೆ,ಜಿ. ಅಣಬೆ ಬೆಳೆಯಬಹುದು. ಕೆ.ಜಿ. ಎರಡು ನೂರು ರು. ನಾಲ್ಕು ಕೆ.ಜಿ.ಗೆ ಎಂಟು ನೂರು ರು. ಆಧಾಯ ಬರುತ್ತದೆ. ಅಣಬೆ ಬೆಳೆಗೆ ತಲುಪಲಿದ ವೆಚ್ಚ ಅಂಧಾಜು ಮೂರು ಸಾವಿರ ಮಾತ್ರ.

 ಅಣಬೆಯ ಮಹತ್ವ ಅಷ್ಟಾಗಿ ಇಲ್ಲಿನ ಜನರಿಗೆ ತಿಳಿದಿಲ್ಲ. ಆದ್ದರಿಂದ ಮಾರುಕಟ್ಟೆ ಸಮಸ್ಯೆ ಎದುರಾಗಿದೆ. ಉತ್ಕøಷ್ಟವಾದ ಅಣಬೆಗಳು ಇದ್ದರೂ, ಕೊಳ್ಳುವವರು ವಿರಳವಾಗಿದ್ದಾರೆ. ಇದು ರೈತರಿಗೆ ತುಸು ಚಿಂತೆಗೀಡು ಮಾಡಿದೆ.

ಇದೊಂದು ವಿಶ್ವಾಸಾರ್ಹ ಕೃಷಿ ಚಟುವಟಿಕೆಯಾಗಿದ್ದು ಯಾವುದೇ ಔಷದಿ ಸಿಂಪಡನೆ ಮಾಡದೇ ಬೆಳೆಯಬಹುದಾದ ಏಕೈಕ ಕೃಷಿಯಾಗಿದೆ. ಇದನ್ನು ಇದರಲ್ಲಿ ಹಲವು ರೀತಿಯ ತಳಿಗಳಿದ್ದು ಕೆಲವು ಮಾತ್ರ ಉತ್ತಮ ಪೋಷ್ಠಿಕ ಪೋಷಕಾಂಶವುಳ್ಳ ಸೇವನೆ ಮಾಡಲು ಯೋಗ್ಯವಾದ ಆಹಾರ ಉತ್ಪಾದನೆಯಾಗಿದೆ. ಇಷ್ಠೆಲ್ಲಾ ಅಂಶಗಳನ್ನು ಹೊಂದಿರುವ ಬೆಳೆಯನ್ನು ಬೆಳೆಯಬಹುದಾಗಿದೆ.

ಅಣಬೆಯಲ್ಲಿ ಅನೇಕ ರೀತಿಯ ತಳಿಗಳಿದ್ದು ತಿನ್ನಲು ಯೋಗ್ಯವಾದ ಮತ್ತು ಮಾರುಕಟ್ಟೆಯಲ್ಲಿ ಬಹುಬೇಡಿಕೆ ಇರುವುದು ಬಟನ್ ಎಂಬ ತಳಿಗೆ ಇದನ್ನು ಸಾಮಾನ್ಯ ಉಷ್ಠಾಂಶವಿರುವ ವಾತಾವರಣದಲ್ಲೂ ಸಹ ಬೆಳಸಬಹುದಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ