ಶೀ ಗುರು ಬಸವೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಪಿ ಶಾಂತ ಕರ್ತವ್ಯಲೋಪ ಎಸಿಗಿದ್ದರೇ..?

ಹರಾಜು ಪ್ರಕ್ರಿಯೆಯಲ್ಲಿ ಅಕ್ರಮದ ವಾಸನೆ..?

ಕೊಟ್ಟೂರು: ಪಟ್ಟಣದ ಕ್ಷೇತ್ರನಾಥ ಶ್ರೀಗುರುಬಸವೇಶ್ವರ ಸ್ವಾಮಿ ದೇವಸ್ಥಾನದ ಹಳೆಯ ಕಬ್ಬಿಣದ ಸಾಮಾನುಗಳು, ತಾಮ್ರ,ಹಿತ್ತಾಳೆ ದೀಪಗಳು, ಹಿತ್ತಾಳೆಯ ನಂದಿಕೋಲು ಸಾಮಾನುಗಳನ್ನು ಹರಾಜು ಹಾಕಿದ್ದು, ಈ ಹರಾಜು ಪ್ರಕ್ರಿಯೆಯಲ್ಲಿ ಅಕ್ರಮವಾಗಿದೆ.? ಎಂದು ಸ್ಥಳೀಯರು ಆರೋಪಿಸಿದ್ದಾರೆ. ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪಿ ಶಾಂತ ಹರಾಜು ಸಾಮಾನುಗಳನ್ನು ಸ್ಟಾಕ್ ರಿಜಿಸ್ಟರ್ ಮೆಂಟೇನ್ ಮಾಡದೇ, ಸೂಕ್ತ ದ್ವಾರದ ಅನುಮತಿ ಇದಯೇ, ನಿಯಮಬಾಹಿರವಾಗಿ, ಸರ್ಕಾರದ ಹರಾಜು ಮಾರ್ಗಸೂಚಿಗಳನ್ನು  ತಮಗೆ ಅನುಕೂಲವಾಗುವಂತೆ ಹರಾಜನ್ನು ನಡೆಸಿದ್ದಾರೆ.ಅಂತೆ ಎನ್ನಲಾಗಿದೆ. ? 

ಹರಾಜು ಪ್ರಕ್ರಿಯೆ ಮುಗಿದ ನಂತರ, ಆಗಿರುವ ಮೊತ್ತವನ್ನು ಸ್ಥಳದಲ್ಲಿಯೇ ದೇವಸ್ಥಾನಕ್ಕೆ ಕಟ್ಟಿ ತೆಗೆದುಕೊಳ್ಳುವ, ಮುಂಗಡವಾಗಿ ೨೫೦೦೦/- ಬ್ಯಾಂಕಿಗೆ ಜಮಾ ಮಾಡಿದ ನಂತರ ಹರಾಜು ಪ್ರಕ್ರಿಯೆ ಕೂಗಲು ಅರ್ಹರು ಎಂಬ ನಿಯಮಗಳನ್ನು ಆದೇಶದಲ್ಲಿ ನಮೂದಿಸಿದ್ದರೂ ಕೂಡ, ಹರಾಜು ಪ್ರಕ್ರಿಯೆ ಮುಗಿದ ನಂತರ ಹರಾಜಾದ ಮೊತ್ತವನ್ನು ಸ್ಥಳದಲ್ಲಿಯೇ ನೀಡಿ, ಸಾಮಾನುಗಳನ್ನು ವಿಲೇ ಮಾಡುವ ನಿಯಮವಿದೆ. ಆದರೆ ಕಾರ್ಯನಿರ್ವಾಹಕ ಅಧಿಕಾರಿ ಪಿ ಶಾಂತ  ಇದ್ಯಾವುದನ್ನು ಮಾಡದೇ, ಹರಾಜು ಮೊತ್ತವನ್ನು ಬ್ಯಾಂಕ್‌ಗೆ ಜಮಾ ಮಾಡದೇ ಕರ್ತವ್ಯಲೋಪ ಎಸಗಿದ್ದಾರೆ. ಸಾರ್ವಜನಿಕ ಬಹಿರಂಗ ಹರಾಜು ಪ್ರಕಟಣೆಯಲ್ಲಿ ಪತ್ರಿಕಾ ಮಾಧ್ಯಮದವರಿಗೆ ಸೂಕ್ತ ಮಾಹಿತಿಗಾಗಿ ಎಂದು ನಮೂದಿಸಿರುವ ಪ್ರತಿಯಲ್ಲಿ  ಸರಿಯಾದ ಮಾಹಿತಿಗಳನ್ನು ನೀಡದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಪಿ ಶಾಂತ ಅವರನ್ನು  ಈ ಬಗ್ಗೆ ಕೇಳಿದಾಗ, ಸಾರ್ವಜನಿಕರು ಪತ್ರಿಕಾ ಮಾಧ್ಯಮದವರು ಈ ಹರಾಜು ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿ ಎಂದರೆ ತಡವರುಸುತ್ತಾರೆ.

ಹರಾಜು ದಿನಾಂಕ ೧೦-೦೭-೨೦೨೪ ರಂದು ಮುಗಿದಿದ್ದರೂ ಸಹ 10.08.2024 ಹಣ ಕಟ್ಟದೇ ಹರಾಜಿನ ಅಂದಾಜು ಮೊತ್ತವಾದ ಏಳು ಲಕ್ಷದ ಮೂವತ್ತೊಂಬತ್ತು ಸಾವಿರ ರೂ. ಹಣವನ್ನು ಇನ್ನೂ ಸಹ ತಮ್ಮ ಸುಪರ್ದಿಯಲ್ಲೇ ಇಟ್ಟುಕೊಂಡಿದ್ದಾರೆ. ಕಾರ್ಯನಿರ್ವಾಹಕ ಅಧಿಕಾರಿಗಳ ಕರ್ತವ್ಯಲೋಪ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ